ಪಲ್ಸ್ ಆಕ್ಸಿ ಮೀಟರ್: ಇದನ್ನು ಬಳಸುವುದು, ರೀಡಿಂಗ್ ಅರ್ಥ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ..

ಕೊರೋನಾ ಕಾಲದಲ್ಲಿ ಮನೆ ಮನೆಗಳಲ್ಲಿ ಬಳಕೆಯಾಗುತ್ತಿರುವ ಪ್ರಾಥಮಿಕ ವೈದ್ಯಕೀಯ ಉಪಕರಣ ಪಲ್ಸ್ ಆಕ್ಸಿ ಮೀಟರ್.
ಪಲ್ಸ್ ಆಕ್ಸಿ ಮೀಟರ್
ಪಲ್ಸ್ ಆಕ್ಸಿ ಮೀಟರ್

ಕೊರೋನಾ ಕಾಲದಲ್ಲಿ ಮನೆ ಮನೆಗಳಲ್ಲಿ ಬಳಕೆಯಾಗುತ್ತಿರುವ ಪ್ರಾಥಮಿಕ ವೈದ್ಯಕೀಯ ಉಪಕರಣ ಪಲ್ಸ್ ಆಕ್ಸಿ ಮೀಟರ್.

ತೋರು ಬೆರಳ ತುದಿಗೆ ಪಲ್ಸ್ ಆಕ್ಸಿ ಮೀಟರ್ ನ್ನು ಅಳವಡಿಸಿಕೊಳ್ಳುವ ಮೂಲಕ ಆಕ್ಸಿಜನ್ ಪೂರೈಕೆಯಾಗುತ್ತಿರುವ ಪ್ರಮಾಣವನ್ನು ರೀಡಿಂಗ್ ನಲ್ಲಿ ನೋಡಬಹುದು. 

ಈ ಉಪಕರಣಕ್ಕೆ ಸೆನ್ಸಾರ್ ಅಳವಡಿಸಲಾಗಿದ್ದು, ವಿವಿಧ ಬಣ್ಣದ ಎಲ್ ಇಡಿಗಳ ಮೂಲಕ ಬೆಳಕು ಬೆರಳ ತುದಿಯಲ್ಲಿರುವ ಅಂಗಾಂಶಗಳು ಮೇಲೆ ಹಾದು ಹೋಗುತ್ತದೆ. ಮತ್ತೊಂದು ಬದಿಯಲ್ಲಿರುವ ಸೆನ್ಸಾರ್ ನಿಂದ ಆಕ್ಸಿಜನ್ ಪೂರೈಕೆ ಪ್ರಮಾಣವನ್ನು ದಾಖಲಿಸುತ್ತದೆ. ಬೆಳಕಿನ ಸಾಂದ್ರತೆಯ ಮೂಲಕ ಆಕ್ಸಿಜನ್ ಕೊಂಡೊಯ್ಯುತ್ತಿರುವ ರಕ್ತ ಕಣಗಳನ್ನು ಪಲ್ಸ್ ಆಕ್ಸಿ ಮೀಟರ್ ಗುರುತಿಸುತ್ತದೆ. 

ಯಾವುದರಿಂದ ಪಲ್ಸ್ ಆಕ್ಸಿಮೀಟರ್ ರೀಡಿಂಗ್ ವ್ಯತ್ಯಯವಾಗುತ್ತದೆ?

ಪಲ್ಸ್ ಆಕ್ಸಿಮೀಟರ್ ನಲ್ಲಿ ಬರುವ ರೀಡಿಂಗ್ ಗಳು ಪ್ರತಿ ಬಾರಿಯೂ ನಿಖರವಾಗಿರುವುದಿಲ್ಲ. ಅಂಗಾಂಶಗಳ ಮೇಲೆ ಬೆಳಕು ಹಾದು ಹೋಗುವಾಗ ಕೆಲವೊಂದು ವ್ಯತ್ಯಯಗಳಾಗಬಹುದು. ಅವು ಹೀಗಿವೆ..

ಚರ್ಮದ ಬಣ್ಣ: ಹೆಚ್ಚು ಪಿಗ್ಮೆಂಟ್ ಇದ್ದರೆ, ಕೆಲವು ಆಕ್ಸಿಮೀಟರ್ ಗಳಲ್ಲಿ ಹೆಚ್ಚಿನ ಪ್ರಮಾಣದ ಆಕ್ಸಿಜನ್ ಪೂರೈಕೆಯ ರೀಡಿಂಗ್ ನೀಡಬಹುದು.

ಬೆರಳಿನ ರಕ್ತ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯವಾದರೆ: ಕೈ ಬೆರಳಿನ ರಕ್ತ ಸಂಚಾರ ವ್ಯವಸ್ಥೆಯಲ್ಲಿ ಏರುಪೇರಾದರೆ ಪಲ್ಸ್ ಆಕ್ಸಿಮೀಟರ್ ರೀಡಿಂಗ್ ಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ ಅಥವಾ ಕಡಿಮೆ ರೀಡಿಂಗ್ ತೋರಿಸಬಹುದು.

ತಣ್ಣನೆಯ ಕೈಗಳು: ಕೈಗಳು ತಣ್ಣಗಿದ್ದಲ್ಲಿ ಅಥವಾ ಚರ್ಮ ಒದ್ದೆಯಾದಾಗ ಪಲ್ಸ್ ಆಕ್ಸಿಮೀಟರ್ ನ್ನು ಹಾಕಿದರೆ ಆಗಲೂ ಕಡಿಮೆ ರೀಡಿಂಗ್ ತೋರಿಸಬಹುದು.

ಪ್ರಕಾಶಮಾನವಾದ ಬೆಳಕು: ಹೊರಭಾಗದಿಂದ ಬರುವ ಪ್ರಕಾಶಮಾನವಾದ ಬೆಳಕು ಉಪಕರಣದ ಒಳಗಿರುವ ಎಲ್ ಇಡಿ  ಬೆಳಕಿಗೆ ಅಡ್ಡಿಯಾಗಿ ನಿಖರತೆ ತಪ್ಪಬಹುದು. 

ದಟ್ಟ ಉಗುರು: ಉಗುರು ದಪ್ಪವಾಗಿದ್ದಲ್ಲಿ ಅದೂ ಸಹ ರೀಡಿಂಗ್ ಕಡಿಮೆ ತೋರಿಸುವುದಕ್ಕೆ ಕಾರಣವಾಗುವ ಸಾಧ್ಯತೆ ಇದೆ. 

ನೈಲ್ ಪಾಲಿಶ್: ಕಪ್ಪು, ನೀಲಿ, ಹಸಿರು ಬಣ್ಣದ ನೈಲ್ ಪಾಲಿಶ್ ಗಳಿಂದಲೂ ಪಲ್ಸ್ ಆಕ್ಸಿಮೀಟರ್ ಗಳು ಕಡಿಮೆ ರೀಡಿಂಗ್ ತೋರಿಸುವ ಸಾಧ್ಯತೆಗಳಿವೆ. ಈ ಸಾಲಿಗೆ ಮೂಗೇಟುಗಳು ಅಥವಾ ಹಚ್ಚೆಯೂ ಸೇರಿದೆ. 

ಪಲ್ಸ್ ಆಕ್ಸಿಮೀಟರ್ ನಲ್ಲಿನ ರೀಡಿಂಗ್ ಗಳು 95-100 ವರೆಗೂ ಇದ್ದರೆ ಸಮರ್ಪಕ ಪ್ರಮಾಣದಲ್ಲಿ ಆಕ್ಸಿಜನ್ ಪೂರೈಕೆಯಾಗುತ್ತಿದೆ ಎಂದು ಅರ್ಥ, ಈ ಮೇಲಿನ ಕಾರಣಗಳು ಯಾವುದೂ ಇಲ್ಲದೆಯೂ ಕಡಿಮೆ ರೀಡಿಂಗ್ ಬಂದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಸೂಕ್ತವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com