ಕ್ಯಾನ್ಸರ್ ಥೆರಪಿ: ಆರಂಭಿಕ ಹಂತದಲ್ಲೇ ಟ್ಯೂಮರ್ ಪತ್ತೆ ಹಚ್ಚುವ ವಿಧಾನ; ಸಂಶೋಧಕರ ಸಾಧನೆ

ಅರಂಭಿಕ ಹಂತದಲ್ಲಿಯೇ ಟ್ಯೂಮರ್ ಅನ್ನು ಪತ್ತೆ ಹಚ್ಚುವುದು ಸಾಧ್ಯವಾದರೆ ಕ್ಯಾನ್ಸರ್ ರೋಗವನ್ನು ಗುಣಪಡಿಸುವ ಸಾಧ್ಯತೆ ಹೆಚ್ಚುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀಜಿಂಗ್: ಕ್ಯಾನ್ಸರ್ ರೋಗಿಗಳ ಚಿಕಿತ್ಸೆಯಲ್ಲಿ ಟ್ಯೂಮರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವುದು ತುಂಬಾ ಮುಖ್ಯವಾಗುತ್ತದೆ. ಅರಂಭಿಕ ಹಂತದಲ್ಲಿಯೇ ಟ್ಯೂಮರ್ ಅನ್ನು ಪತ್ತೆ ಹಚ್ಚುವುದು ಸಾಧ್ಯವಾದರೆ ಕ್ಯಾನ್ಸರ್ ರೋಗಿಗಳನ್ನು ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ. 

ನಂತರದ ಹಂತದಲ್ಲಿ ಟ್ಯೂಮರ್ ಪತ್ತೆ ಹಚ್ಚುವುದರಿಂದ ಅಪಾಯದ ಪ್ರಮಾಣ ಹೆಚ್ಚುತ್ತದೆ. ಆರಂಭಿಕ ಹಂತದಲ್ಲಿಯೇ ಟ್ಯೂಮರ್ ಅನ್ನು ಪತ್ತೆ ಹಚ್ಚುವ ವಿಧಾನವನ್ನು ಚೀನಾ ಸಂಶೋಧಕರು ಆವಿಷ್ಕರಿಸಿದ್ದಾರೆ. 

ಫೋಟೊ ಅಕೌಸ್ಟಿಕ್ (PA) ಇಮೇಜಿಂಗ್ ತಂತ್ರಜ್ಞಾನ ಹಾಗೂ ನ್ಯಾನೊ ಪಾರ್ಟಿಕಲ್ಸ್ ತಂತ್ರಜ್ಞಾನ ಬಳಸಿ ಸಂಶೋಧಕರು ಆರಂಭಿಕ ಹಂತದಲ್ಲಿಯೇ ಟ್ಯೂಮರ್ ಅನ್ನು ಪತ್ತೆ ಹಚ್ಚಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com