ಮಹಿಳೆಯರಲ್ಲಿ ಹಾಟ್ ಫ್ಲಾಷ್ ಸ್ಥಿತಿ ಎಂದರೇನು? ಋತುಬಂಧ ಎಷ್ಟು ಕಾಲದವರೆಗೆ ಇರುತ್ತದೆ?

ಮಹಿಳೆಯರು ತಮ್ಮ ಜೀವನದ ಉದ್ದಕ್ಕೂ ಹಾರ್ಮೋನ್ ಮಟ್ಟದಲ್ಲಿ ತೀವ್ರ ಏರಳಿತದ ಬದಲಾವಣೆಗೆ ಗುರಿಯಾಗುತ್ತಾರೆ ಅಲ್ಲದೆ, ಇದಕ್ಕೆ ಹಾಟ್ ಫ್ಲ್ಯಾಷ್ (ತೀವ್ರ ಸೆಖೆಯ ಅನುಭವ)ಗಳು ಕಾರಣವಾಗುತ್ತವೆ. 

Published: 23rd February 2021 06:38 PM  |   Last Updated: 23rd February 2021 07:52 PM   |  A+A-


Hot Flashes

ಮಹಿಳೆಯರಲ್ಲಿ ಹಾಟ್ ಫ್ಲಾಷ್ ಸ್ಥಿತಿ (ಸಾಂಕೇತಿಕ ಚಿತ್ರ)

Posted By : Srinivas Rao BV
Source : Online Desk

ಮಹಿಳೆಯರು ತಮ್ಮ ಜೀವನದ ಉದ್ದಕ್ಕೂ ಹಾರ್ಮೋನ್ ಮಟ್ಟದಲ್ಲಿ ತೀವ್ರ ಏರಳಿತದ ಬದಲಾವಣೆಗೆ ಗುರಿಯಾಗುತ್ತಾರೆ ಅಲ್ಲದೆ, ಇದಕ್ಕೆ ಹಾಟ್ ಫ್ಲ್ಯಾಷ್ (ತೀವ್ರ ಸೆಖೆಯ ಅನುಭವ)ಗಳು ಕಾರಣವಾಗುತ್ತವೆ. 

ಇವು ಋತುಬಂಧದ ಪ್ರಮುಖ ಲಕ್ಷಣಗಳಾಗಿದ್ದು, ಇವು ಮಹಿಳೆಯ ಆರೋಗ್ಯ ಮತ್ತು ಸೌಖ್ಯತೆಗೆ ಬಹಳಷ್ಟು ಸಮಯದಲ್ಲಿ ಹಾನಿವುಂಟು ಮಾಡಬಲ್ಲವು. ಋತುಬಂಧದ ಸ್ಥಿತಿಯಲ್ಲಿರುವ ಮಹಿಳೆಯರಲ್ಲಿ ಶೇ.8೦ರಷ್ಟು ಜನರು ಈ ಹಾಟ್ ಫ್ಲ್ಯಾಷ್ (ತೀವ್ರ ಸೆಖೆಯ ಅನುಭವ) ಗಳನ್ನು ಅನುಭವಿಸುತ್ತಾರೆ ಎಂದು ಹಾರ್ವರ್ಡ್ ಹೆಲ್ತ್ ಪಬ್ಲಿಷಿಂಗ್ ವರದಿ ಮಾಡಿದೆ.

ಹಾಟ್ ಫ್ಲ್ಯಾಷ್ ಸ್ಥಿತಿ ದಿಢೀರನೆ ಕಾಣಿಸಿಕೊಳ್ಳಬಹುದು. ತೀವ್ರ ಸೆಖೆಯ ಭಾವನೆ ಉಂಟುಮಾಡುವ ಅನುಭವ ಇದಾಗುತ್ತದೆ. ಅತಿಯಾದ ಬೆವರು, ಬೆರಳುಗಳಲ್ಲಿ ಜುಮ್ ಎನಿಸುವ ಸಂವೇದನೆ, ಕ್ಷಿಪ್ರಗತಿಯ ಹೃದಯದ ಮಿಡಿತ, ಮುಖ ಕೆಂಪಾಗುವುದು ಮುಂತಾದವುಗಳು ಇದರ ಲಕ್ಷಣಗಳಲ್ಲಿ ಸೇರಿರುತ್ತವೆ. ಈ ಹಾಟ್ ಫ್ಲ್ಯಾಷ್ನ ಸ್ಥಿತಿ ಅವಧಿ 4ರಿಂದ 10 ನಿಮಿಷಗಳಾಗಿರಬಹುದು ಮತ್ತು ಮಹಿಳೆಯರಿಂದ ಮಹಿಳೆಗೆ ಈ ಅವಧಿ ಬದಲಾಗುತ್ತದೆ.

ಬಹುತೇಕ ಮಹಿಳೆಯರಿಗೆ ಋತುಬಂಧದ ಸಮಯ ಆತ್ಮಸಾಕ್ಷಾತ್ಕಾರದ ಅವಧಿಯಾಗಿರುತ್ತದೆ. ನೀವು ಜೀವನದ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಬದಲಾಗುತ್ತಿರುತ್ತೀರಿ. ನಿಮ್ಮ ದೈಹಿಕ ಮತ್ತು ಭಾವನಾತ್ಮಕ ಸ್ಥಿತಿಗಳಲ್ಲಿ ಬದಲಾವಣೆಗಳನ್ನು ಅನುಭವಿಸುತ್ತೀರಿ. ನಿಮ್ಮ ಮಕ್ಕಳನ್ನು ಹೆರುವ ಸಾಮರ್ಥ್ಯದ ಮೇಲೆ ಪರಿಣಾಮ ಉಂಟಾಗುತ್ತಿರುತ್ತದೆ. ನಿಮ್ಮ ಸಾಮಾಜಿಕ ಪಾತ್ರಗಳು ನಿಮಗೆ ವಯಸ್ಸಾಗುತ್ತಿದ್ದಂತೆ ಬದಲಾಗಲು ಆರಂಭವಾಗುತ್ತವೆ. ಈ ಎಲ್ಲಾ ವಿಷಯಗಳು ಮಹಿಳೆಯ ಮೇಲೆ ಆಳವಾಗಿ ಪರಿಣಾಮ ಉಂಟುಮಾಡಬಲ್ಲವು. ನಿಮ್ಮ ಫಲವಂತತೆಯ ವರ್ಷಗಳು ಅಂತ್ಯವಾಗುತ್ತಿರುವಲ್ಲಿ ನಿಮಗೆ ನಿರಾಳದ ಭಾವನೆ ಜೊತೆಗೆ ದುಃಖ ತರಬಹುದಾಗಿದ್ದು, ಇದು ಆಯಾ ವ್ಯಕ್ತಿಯನ್ನು ಆಧರಿಸಿರುತ್ತದೆ. ಯಾವುದೇ ಮಹಿಳೆ ತಪ್ಪಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ಇದಾಗಿದ್ದು, ಅವರು ಈ ಸ್ಥಿತಿಯನ್ನು ನಿಭಾಯಿಸಲು ಕಲಿತುಕೊಳ್ಳಬೇಕು ಎಂದು ಮದರ್‌ಹುಡ್ ಹಾಸ್ಪಿಟಲ್ಸ್ ನ ಸ್ತ್ರೀರೋಗ ಮತ್ತು ಪ್ರಸೂತಿ ಸಲಹಾ ತಜ್ಞರಾದ  ಡಾ. ಸಂಗೀತ ಗೋಮ್ಸ್ ಹೇಳುತ್ತಾರೆ.

ಈ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಬಹಳಷ್ಟು ಅಧ್ಯಯನಗಳನ್ನು ಪ್ರಯತ್ನಿಸಲಾಗುತ್ತಿದೆ. ದೇಹದಲ್ಲಿನ ಹಾರ್ಮೋನ್‌ಗಳ ಬದಲಾವಣೆಯ ಫಲಿತಾಂಶ ಇದು ಎಂದು ಒಂದು ಸ್ಪಷ್ಟವಾದ ಅರಿವು ಇರುತ್ತದೆ. ಋತುಬಂಧ ಸಂಬಂಧಿತ ಹಾಟ್ ಫ್ಲ್ಯಾಷ್ಗಳು ಸಾಮಾನ್ಯವಾಗಿ ಒಂದೇ ರೀತಿಯನ್ನು ಅನುಸರಿಸುತ್ತವೆ. ಆದರೆ, ಈ ವಿಧ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಬೊಜ್ಜುಮೈ, ಮೆಟಾಬಾಲಿಕ್ ಸಿಂಡ್ರೋಮ್‌ಗಳು ಹಾಟ್ ಫ್ಲ್ಯಾಷ್ ನ ಪ್ರಕರಣ ಕಂಡುಬರುವುದನ್ನು ಹೆಚ್ಚಿಸುವ ಅಂಶಗಳಾಗಿವೆ ಎಂದು ಚಿಂತಿಸಲಾಗಿದೆ. ಹೆಚ್ಚುವರಿಯಾಗಿ ಹೆಚ್ಚಿನ ಮಸಾಲೆಯುತ, ಖಾರದ ಆಹಾರ ಸೇವಿಸುವುದು, ಕೆಫಿನ್ ಮತ್ತು ಮದ್ಯಗಳನ್ನು ಅತಿಯಾಗಿ ಸೇವಿಸುವುದು ಅಲ್ಲದೆ, ಥೈರಾಯ್ಡ್, ಮಧುಮೇಹ, ಕ್ಷಯ ಮುಂತಾದ ವೈದ್ಯಕೀಯ ಸ್ಥಿತಿಗಳು ಇಂತಹ ಪರಿಸ್ಥಿತಿಗಳು ಉಲ್ಬಣವಾಗಲು ಕಾರಣವಾಗುವ ಅಂಶಗಳಾಗಿರುತ್ತವೆ. ಹಾಟ್ ಫ್ಲ್ಯಾಷ್ ಸ್ಥಿತಿ ಉಂಟಾಗಲು ಹಲವಾರು ಕಾರಣಗಳು ಚಾಲನೆ ನೀಡಬಹುದಾಗಿದ್ದು, ಇದಕ್ಕೆ ಮದ್ಯಪಾನ, ಅತಿ ಖಾರ, ಮಸಾಲೆಯುಕ್ತ ಆಹಾರ, ಅತಿಯಾದ ಕೆಫಿನ್‌ಗಳ ಸೇವನೆ, ಹೆಚ್ಚಿದ ಒತ್ತಡದ ಮಟ್ಟಗಳು, ಧೂಮಪಾನ ಅಥವಾ ಅತಿ ಬಿಗಿಯಾದ ಉಡುಪುಗಳನ್ನು ಧರಿಸುವುದು ಮುಂತಾದವುಗಳು ಕಾರಣವಾಗಬಹುದು.

ತಮಗೆ ಹಾಟ್ ಫ್ಲ್ಯಾಷ್ ಉಂಟು ಮಾಡುವ ಕಾರಣಗಳನ್ನು ತಿಳಿದುಕೊಂಡರೆ ಅವುಗಳು ಪದೇ ಪದೇ ಕಾಣಿಸಿಕೊಳ್ಳುವುದನ್ನು ತಡೆಯಲು ಈ ಕಾರಣಗಳನ್ನು ದೂರವಿಡಲು ಪ್ರಯತ್ನಿಸಬಹುದು. ಆದರೆ, ಈ ಹಾಟ್ ಫ್ಲ್ಯಾಷ್ ಸ್ಥಿತಿಗಳನ್ನು ತಡೆಯಲು ಯಾವುದೇ ಚಿಕಿತ್ಸೆಯ ಖಾತ್ರಿ ಇರುವುದಿಲ್ಲ. ಈ ಸ್ಥಿತಿಯ ಲಕ್ಷಣಗಳನ್ನು ನಿಭಾಯಿಸಲು ನೆರವಾಗುವ ಹಲವಾರು ಆಯ್ಕೆಗಳು ಇರುತ್ತವೆ. ಹಾಟ್ ಫ್ಲ್ಯಾಷ್ಗಳ ತೀವ್ರತೆ ಮತ್ತು ಅವುಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಚಿಕಿತ್ಸೆಯ ಗುರಿಯಾಗಿರುತ್ತದೆ. ಹಾಟ್ ಫ್ಲ್ಯಾಷ್ಗಳನ್ನು ನಿಭಾಯಿಸಲು ನೆರವಾಗಬಹುದಾದ ಕಡಿಮೆ ಅಪಾಯದ ನಿಭಾವನೆಯ ಯೋಜನೆಗಳು ಮತ್ತು ಜೀವನಶೈಲಿಯ ಬದಲಾವಣೆಗಳು ಹಲವು ಇದ್ದರೂ, ಸಂಬಂಧಿಸಿದ ವ್ಯಕ್ತಿಗಳ ಪರಿಸ್ಥಿತಿಗಳು ತೀವ್ರ ರೀತಿಯಲ್ಲಿದ್ದರೆ, ಸೂಚಿತ ಔಷಧದ ಚಿಕಿತ್ಸೆಯನ್ನು ಆಯ್ದುಕೊಳ್ಳಬಹುದು.

ಎಸ್ಟ್ರೋಜೆನ್ ಆಧಾರಿತ ಹಾರ್ಮೋನ್ ಚಿಕಿತ್ಸೆ, ಹಾಟ್ ಫ್ಲ್ಯಾಷ್ಗಳಿಗೆ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿರುತ್ತದೆ ಆದರೆ, ಇದರಲ್ಲಿ ಹಲವಾರು ನಕಾರಾತ್ಮಕ ಅಂಶಗಳು ಇರುತ್ತವೆ ಎಂದು ಹಾರ್ವರ್ಡ್ ಹೆಲ್ತ್ ಪಬ್ಲಿಷಿಂಗ್ ತಿಳಿಸಿದೆ. ಇದು ಪರಿಣಾಮಕಾರಿ ಎಂದು ಗುರುತಿಸಲಾದ ಚಿಕಿತ್ಸೆಯಾಗಿದ್ದರೂ, ಪಾರ್ಶ್ವವಾಯು, ರಕ್ತ ಹೆಪ್ಪುಗಟ್ಟುವುದು ಮತ್ತು ಇತರೆ ಆರೋಗ್ಯ ತೊಂದರೆಗಳನ್ನು ವಯಸ್ಸಾದ ಮಹಿಳೆಯರಲ್ಲಿ ಉಂಟು ಮಾಡುವ ಅಪಾಯ ಇರುತ್ತದೆ. ಯಾವುದೇ ಔಷಧಗಳಲ್ಲಿ ಆರಂಭದಲ್ಲಿ ಪರಿಣಾಮಕಾರಿಯಾಗಿ ಲಕ್ಷಣಗಳನ್ನು ಪರಿಹರಿಸುವ ಹಾಗೂ ಕಡಿಮೆ ಪ್ರಮಾಣದ ಡೋಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಈ ಚಿಕಿತ್ಸೆಯನ್ನು ಸಾಧ್ಯವಾದಷ್ಟು ಕಡಿಮೆ ಅವಧಿಯವರೆಗೆ ತೆಗೆದುಕೊಳ್ಳುವುದು ಒಳ್ಳೆಯದು.

ಜೀವನಶೈಲಿಯ ಬದಲಾವಣೆಗಳು ಸಕಾರಾತ್ಮಕ ಪರಿಣಾಮ ಉಂಟು ಮಾಡಬಹುದಲ್ಲದೆ, ಲಕ್ಷಣಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸಲು ನೆರವಾಗಬಹುದು. ಸಮತೋಲಿತ ಮತ್ತು ಸಂಪೂರ್ಣ ಭೋಜನವನ್ನು ಸೇವಿಸುವುದು ಜೊತೆಗೆ ನಿಗದಿತ ವ್ಯಾಯಾಮ ಮಾಡುವುದು ಮುಖ್ಯವಾಗಿರುತ್ತದೆ. ಇದಲ್ಲದೆ, ಧೂಮಪಾನ ಮತ್ತು ಅತಿಯಾದ ಮದ್ಯಸೇವನೆಯನ್ನು ತಡೆಯುವುದು ಒಳ್ಳೆಯದು. ವಾಸ್ತವವಾಗಿ ಆರೋಗ್ಯಕರ ಜೀವನಶೈಲಿಯು ಹೃದಯದ ಸಮಸ್ಯೆಗಳು ಮತ್ತು ಅಸ್ಥಿರಂಧ್ರತೆಯ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು.

ಯೋಗ ಪರಿಣಾಮಕಾರಿ ಮಾರ್ಗ ಎಂದು ಪರಿಗಣಿಸಲಾಗಿದೆಯಲ್ಲದೆ, ಋತುಬಂಧ ಹೊಂದಿರುವ ಅನೇಕ ಮಹಿಳೆಯರಲ್ಲಿ ಹಾಟ್ ಫ್ಲ್ಯಾಷ್ಗಳನ್ನು ನಿಭಾಯಿಸಲು ಇದು ಅತ್ಯಂತ ಸೂಕ್ತವಾಗಿರುತ್ತದೆ. ನಿಧಾನವಾಗಿ, ದೀರ್ಘವಾಗಿ ಉಸಿರಾಡುವುದರಿಂದ (ಪೇಸ್ಡ್ ರೆಸ್ಪಿರೇಷನ್) ಅಲ್ಲದೆ, ಧ್ಯಾನದಿಂದ ಹಾಟ್ ಫ್ಲ್ಯಾಷ್ ಸ್ಥಿತಿಗಳಲ್ಲಿ ಆರಾಮವಾಗಿರಲು ಮಹಿಳೆಯರಿಗೆ ಸಹಾಯವಾಗುತ್ತದೆ.

ಋತುಬಂಧದ ನಂತರ ಮಹಿಳೆಯರು ತಮ್ಮ ದೇಹವನ್ನು ಅರ್ಥ ಮಾಡಿಕೊಳ್ಳಲು ಹಾಗೂ ಅದನ್ನು ಕುರಿತು ಆರೈಕೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಲು ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗುವುದರಿಂದ ನೆರವಾಗಬಹುದು. ಮಹಿಳೆಯರಿಗೆ ಯಾವುದು ತಮಗೆ ಸಾಮಾನ್ಯ ಎಂಬುದರ ಭಾವನೆಯನ್ನು ಇದು ನೀಡುತ್ತದೆ. ಸ್ತ್ರೀ ರೋಗತಜ್ಞರು ಆದಷ್ಟು ಬೇಗ ತೊಂದರೆಗಳು ಯಾವುವು ಎಂಬುದನ್ನು ಕಂಡುಹಿಡಿಯಲು ಅವಕಾಶ ಮಾಡಿಕೊಡಬೇಕು. ಇದರಿಂದ ಅವುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಬಹುದು. ಆದ್ದರಿಂದ ಮಹಿಳೆಯರು ನಿಗದಿತ ಅವಧಿಗೊಮ್ಮೆ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.

12 ತಿಂಗಳಿನಿಂದ ಋತುಸ್ರಾವ ಹೊಂದಿರದ ಮತ್ತು ಆಕೆಯಲ್ಲಿ ಅಂಡೋತ್ಪಾದನೆ ಇರದ ಸ್ಥಿತಿಯನ್ನು ಮಹಿಳೆಯರಲ್ಲಿ ಋತುಬಂಧ ಎನ್ನಲಾಗುತ್ತದೆ. ಇದರ ಲಕ್ಷಣಗಳು ನಿರೀಕ್ಷೆಗಿಂತ ಹೆಚ್ಚು ಕಾಲ ಇರಬಹುದು. ತಮ್ಮ ಅಂತಿಮ ಋತುಸ್ರಾವದ ಅವಧಿಯ ನಂತರ 5 ವರ್ಷಗಳ ಒಳಗೆ ಬಹುತೇಕ ಮಹಿಳೆಯರು ಹಾಟ್ ಫ್ಲ್ಯಾಷ್ಗಳನ್ನು ಅನುಭವಿಸುವುದು ನಿಂತು ಹೋಗುತ್ತದೆ. ದೇಹದಲ್ಲಿ  ಎಸ್ಟ್ರೋಜೆನ್ ನ ಕೊರತೆಯಿಂದ ಈ ಲಕ್ಷಣಗಳು ಉಂಟಾಗುತ್ತಿವೆಯೇ ಅಥವಾ ವಯಸ್ಸಾಗುವುದರೊಂದಿಗೆ ಕಂಡುಬರುವ ನೈಸರ್ಗಿಕ ಪ್ರಕ್ರಿಯೆಗಳಿಂದ ಈ ಲಕ್ಷಣಗಳು ಉಂಟಾಗುತ್ತಿವೆಯೇ ಎಂಬುದನ್ನು ಹೇಳುವುದು ಕಷ್ಟವಾಗಿರುತ್ತದೆ.

ಕೆಲವು ಮಹಿಳೆಯರಲ್ಲಿ ಬೇಗನೇ ಅಥವಾ ತಡವಾಗಿ ಆರಂಭವಾದರೂ ಋತುಬಂಧವನ್ನು ಹೊಂದುವ ಆರೋಗ್ಯಕರ ಆವೃತ್ತಿ ಇದ್ದೇ ಇರುತ್ತದೆ. ಮಹಿಳೆಯರ ಜೀವನದಲ್ಲಿ ಇದು ಹೊಸ ಹಂತವಾಗಿರುತ್ತದೆ. ಆದರೆ, ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಗಮನಹರಿಸಬೇಕಾಗುತ್ತದೆ. ಲಕ್ಷಣಗಳನ್ನು ನಿಭಾಯಿಸಲು ಸಾಧ್ಯವಾಗದೆ ಇದ್ದಲ್ಲಿ ಸೂಕ್ತ ವೈದ್ಯಕೀಯ ಸಲಹೆ ಪಡೆಯಲು ವೈದ್ಯರನ್ನು ಭೇಟಿಯಾಗಬೇಕು. ಬಾಲ್ಯ ಅಥವಾ ಹದಿಹರೆಯದಂತೆ ಇದು ಜೀವನದ ಮತ್ತೊಂದು ಹಂತವಷ್ಟೇ. ಸೂಕ್ತ ಬೆಂಬಲ ವ್ಯವಸ್ಥೆ ಮತ್ತು ವಿಶ್ವಾಸದ ಜೊತೆಗೆ ಪ್ರತಿ ಮಹಿಳೆಗೆ ಇದನ್ನು ನಿಭಾಯಿಸುವ ಸಾಮರ್ಥ್ಯ ಇರುತ್ತದೆ.

Stay up to date on all the latest ಆರೋಗ್ಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp