
ಸಾಂದರ್ಭಿಕ ಚಿತ್ರ
ಬೆಂಗಳೂರು: ಲೈಂಗಿಕ ಬೆಳವಣಿಗೆಯಲ್ಲಿ ಏರು-ಪೇರು (DSD) ಹೊಂದಿರುವ 20 ವರ್ಷ ಪ್ರಾಯದ ಒಬ್ಬ ರೋಗಿಯ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ (GRS) ಫೋರ್ಟೀಸ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿದೆ.
ರೋಗಿಯು ಲೈಂಗಿಕ ವಿಕಸನ ಏರು-ಪೇರುಗಳ ತೊಂದರೆ (DSD) ಎದುರಿಸುತ್ತಿದ್ದರು. ಇದು ಮಗುವಿನ ಕ್ರೋಮೋಸೋಮ್ಗಳು ಸರಿ-ಹೊಂದದಿರುವುದು, ಲೈಂಗಿಕ ಸ್ವರೂಪ ಸರಿ-ಹೊಂದದಿರುವುದು ಮತ್ತು ವಿಭಿನ್ನ ನೋಟ ಹೊಂದಿರುವಂತಹ ಒಂದು ಸ್ಥಿತಿಯಾಗಿದೆ. ಯಾರೇ ವ್ಯಕ್ತಿಗೆ ತನ್ನ ಮಗುವಿನ ಪ್ರಾಯದಲ್ಲಿ, ಬಾಲ್ಯದಲ್ಲಿ ಅಥವಾ ಅಪ್ರಾಪ್ತ ವಯಸ್ಸಿನ ಅವಧಿಯಲ್ಲಿ ಇಂತಹ ಏರು-ಪೇರುಗಳು ಉಂಟಾಗಬಹುದಾಗಿದೆ. 10 ನೇ ವರ್ಷದಿಂದ ಶರೀರದಲ್ಲಿ ಲೈಂಗಿಕ ಏರು-ಪೇರುಗಳನ್ನು ಬೆಳೆಸಿಕೊಂಡು ಬಂದಿರುವ 20 ವರ್ಷ ಪ್ರಾಯದ ಮಹಿಳೆ ಬನ್ನೇರ್ಘಟ್ಟ ರಸ್ತೆಯಲ್ಲಿರುವ ಫೋರ್ಟೀಸ್ ಆಸ್ಪತ್ರೆಗೆ ಬಂದಿದ್ದರು. ಆಕೆಯಲ್ಲಿ ಮೇಲ್ ಸ್ಯೂಡೋಹೆರ್ಮಾಫ್ರೋಡಿಟಿಸಿಮ್ ಇದೆಯೆಂದು ಪತ್ತೆಯಾಯಿತು. ಇದು ಪುರಷರಲ್ಲಿ ಹೊರಗಿನ ಲೈಂಗಿಕ ಸ್ವರೂಪ ಮಹಿಳೆಯಂತೆ ಕಂಡು ಬರುವ ಒಂದು ಸ್ಥಿತಿಯಾಗಿದೆ. ರೋಗಿಯನ್ನು ಮತ್ತಷ್ಟು ವಿಶ್ಲೇಷಿಸಿ ನೋಡಿದಾಗ, ಶರೀರದಲ್ಲಿ ಪುರುಷ ಸ್ವರೂಪವಾದ ಲೈಂಗಿಕ ಬೆಳವಣಿಗೆಗಳು ಕಂಡು ಬಂದಿದ್ದವು. ಪುರುಷರ ಗುಪ್ತಾಂಗವು ಬೆಳೆದಿಲ್ಲದ ರೂಪದಲ್ಲಿ ರಚನೆಯಾಗಿರುವುದು ಕಂಡು ಬಂದಿತ್ತು.
“ಪುರುಷರನ್ನುಮಹಿಳೆಯಾಗಿ ಲಿಂಗ ಬದಲಾಯಿಸುವುದು ತುಂಬಾ ಸುಲಭ, ಆದರೆ, ಮಹಿಳೆಯನ್ನು ಪುರುಷರನ್ನಾಗಿ ಮಾಡುವ ಪ್ರಕ್ರಿಯೆ ತುಂಬಾ ಕ್ಲಿಷ್ಟವಾಗಿದೆ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ರೋಗಿ 46,XY karyotype ಪ್ರಕಾರ ಹೊಂದಿದ್ದರು ಹಾಗೂ ಅವರ ಲೈಂಗಿಕ ಸ್ವರೂಪ ಆಂತರಿಕವಾಗಿ ಪುರುಷದ್ದಂತೆ ಆಗಿತ್ತು ಮತ್ತು ಗರ್ಭಾಶಯ ವಿಕಸನ ಸಂದರ್ಭದಲ್ಲಿ ಇದು ಬೆಳಕಿಗೆ ಬಂದಿತ್ತು. ಇದರ ಆಧಾರದ ಮೇರೆಗೆ ನಾವು ಲಿಂಗ ಬದಲಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೆವು. ನಾವು ಬಕ್ಸಲ್ ಮ್ಯೂಕೋಸಾ ತಾಂತ್ರಿಕತೆ ಉಪಯೋಗಿಸುತ್ತಾ 10 ಸೆಮೀ ಹೆಚ್ಚುವರಿ ನಳಿಕೆ ನಿರ್ಮಿಸುತ್ತಾ ಆಕೆಯ ಶರೀರದಲ್ಲಿ ರಿಪೇರಿ ಕಾರ್ಯವನ್ನುಪ್ರಾರಂಭಿಸಿದ್ದೆವು ಮತ್ತು ಶರೀರವನ್ನು ಪುರುಷನನ್ನಾಗಿ ಮಾಡಲು ತಯಾರುಪಡಿಸಿದೆವು. ಈ ಪ್ರಕ್ರಿಯೆಯನ್ನು ಬಕ್ಸಲ್ ಮ್ಯೂಕೋಸಲ್ ಯುರೆಥ್ರೋಪ್ಲಾಸ್ಟಿ ಎಂದು ಕರೆಯುತ್ತಾರೆ ಎಂದು ಡಾ. ಮೋಹನ್ ಕೇಶವಮೂರ್ತಿ ಹೇಳಿದರು.
ಇದಲ್ಲದೆ ಹೆಚ್ಚುವರಿಯಾಗಿ ರೂಡಿಮೆಂಟರಿ ಕೋರ್ಪೋರಾ ಟಿಶ್ಯೂವಿನಲ್ಲಿ ಮಾಲ್ಲಿಯೇಬಲ್ ಪೆನೈಲ್ ಪ್ರೋಸ್ಥೆಸಿಸ್ ಅನ್ನು ಸೇರಿಸಲಾಯಿತು. ಇದು ಪುರುಷರಲ್ಲಿರುವಂತೆ ಗುಪ್ತಾಂಗ ಉದ್ರೇಕಗೊಳಿಸುವುದಕ್ಕಾಗಿ ರಕ್ತದೊಂದಿಗೆ ವಿಕಸನ ಹೆಚ್ಚಿಸುತ್ತದೆ. ಇದರಿಂದಾಗಿ ವ್ಯಕ್ತಿಯು ಪುರುಷನಂತೆ ತನ್ನ ಲೈಂಗಿಕ ಕಾರ್ಯವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಬಹುದಾಗಿದೆ. ಪುರುಷರಲ್ಲಿ ಗುಪ್ತಾಂಗ ಎದ್ದೇಳುವ ಸಮಸ್ಯೆ ಹೋಗಲಾಡಿಸುವುದಕ್ಕಾಗಿ ಮಾಲ್ಲಿಯೇಬಲ್ ಪೆನೈಲ್ ಇಂಪ್ಲಾಂಟ್ ಅತ್ಯಂತ ಪರಿಣಾಮಕಾರಿಯಾದ ಚಿಕಿತ್ಸೆ ಆಯ್ಕೆಯಾಗಿದೆ. ರೋಗಿಯನ್ನು ಒಂದು ವಾರ ತನಕ ಆಸ್ಪತ್ರೆಯಲ್ಲಿ ಇರಿಸಲಾಗುವುದು ಮತ್ತು ಬಳಿಕ ಸ್ಥಿರ ಸ್ಥಿತಿಯೊಂದಿಗೆ ಮನೆಗೆ ಕಳಿಸಲಾಗುವುದು” ಎಂದು ಅವರು ಹೇಳಿದರು.
“ಮುಖ್ಯವಾಗಿ LGBTQ+ ಸಮುದಾಯದವರಿಗಾಗಿ (ತೃತಿಯ ಲಿಂಗದವರಿಗಾಗಿ) ಸಾಮಾಜಿಕ ಮತ್ತು ಕಾನೂನು ಬದ್ಧ ಮಾನ್ಯತೆ ಪಡೆಯುವುದಕ್ಕಾಗಿ ಭಾರತದಲ್ಲಿ ಇತ್ತೀಚೆಗೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ (GRS) ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಉತ್ತಮ ಜೀವನ ನಡೆಸುವುದಕ್ಕಾಗಿ ಯಾರೇ ವ್ಯಕ್ತಿ ಸೂಕ್ತವಾದ ಶಾರೀರಿಕ ವ್ಯವಸ್ಥೆ ಹೊಂದುವುದು ಹಾಗೂ ಇದಕ್ಕಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ತಯಾರಾಗುವುದು ಇತ್ತೀಚಿನ ದಿನಗಳಲ್ಲಿ ತುಂಬಾ ಪ್ರಾಮುಖ್ಯವಾಗಿದೆ.” ಎಂದು ಡಾ ಬಸವರಾಜ್ ನೀಲ್ಗರ್ ಹೇಳಿದರು.
ಈ ಶಸ್ತ್ರಚಿಕಿತ್ಸೆಯಲ್ಲಿ ಡಾ. ಮೋಹನ್ ಕೇಶವಮೂರ್ತಿ – ಡೈರೆಕ್ಟರ್, ಡಿಪಾರ್ಟ್ಮೆಂಟ್ ಆಫ್ ಯೂರೋಲಜಿ – ಯೂರೋಲಜಿ, ಯೂರೋ-ಓಂಕೋಲಜಿ, ಅಂಡ್ರೋಲಜಿ – ಟ್ರಾನ್ಸ್ಪ್ಲಾಂಟ್ ಆಂಡ್ ರೋಬೋಟಿಕ್ ಸರ್ಜರಿ ಮತ್ತು ಡಾ ಬಸವರಾಜ್ ನೀಲ್ಗರ್ – ಕನ್ಸಲ್ಟೇಂಟ್ ಯೂರೋಲಜಿ, ಯೂರೋ-ಓಂಕೋಲಜಿ, ಅಂಡ್ರೋಲಜಿ – ಟ್ರಾನ್ಸ್ಪ್ಲಾಂಟ್ ಆಂಡ್ ರೋಬೋಟಿಕ್ ಸರ್ಜರಿ, ಫೋರ್ಟೀಸ್ ಹಾಸ್ಪಿಟಲ್ಸ್, ಬೆಂಗಳೂರು ತಂಡ ಭಾಗವಹಿಸಿತ್ತು.
“NCBI” ಎಂದರೆ ಬಕ್ಸಲ್ ಮ್ಯೂಕೋಸಾ ಆಗಿದೆ ಹಾಗೂ ಇದು ಅತ್ಯುತ್ತಮ ಚಿಕಿತ್ಸಾತ್ಮಕ ಪರ್ಯಾಯವಾಗಿದೆ. ಏಕೆಂದರೆ, ಇದರಲ್ಲಿ ಹಾರ್ವೆಸ್ಟ್, ಶಸ್ತ್ರಚಿಕಿತ್ಸೆ ನಿರ್ವಹಣ ಸುಲಭ, ಕೂದಲುಗಳು ಇಲ್ಲದಿರುವುದು, ತೇವ ಪರಿಸರಕ್ಕೆ ಅನುಕೂಲ ಹೊಂದಿರುವುದು ಮತ್ತು ಬೆಳವಣಿಗೆ ಪ್ರಾರಂಭದಲ್ಲಿರುವುದು ಮತ್ತು ಬದುಕಿ ಉಳಿಯುವ ಸಾಧ್ಯತೆಗಳು ಹೆಚ್ಚಾಗಿರುವುದು ಮೊದಲಾದ ಅನೇಕ ಕಾರಣಗಳಿವೆ. ಇಂತಹ ವಿಶಿಷ್ಟ ಗುಣಲಕ್ಷಣಗಳ ಕಾರಣದಿಂದಾಗಿ ಬಕ್ಸಲ್ ಮ್ಯೂಕೋಸಾ ರೀಕನ್ಸ್ಟ್ರಕ್ಟೀವ್ ಯೂರೋಲಜಿಯಲ್ಲಿ ಅತ್ಯಂತ ಯಶಸ್ವೀ ಟೆಕ್ನಾಲಜಿಯಾಗಿದೆ.