ಕೊರೋನಾ ಲಸಿಕೆ ಎಷ್ಟು ಸುರಕ್ಷಿತ? ಯಾರೆಲ್ಲಾ ಲಸಿಕೆ ಪಡೆಯಬಹುದು? ಲಸಿಕೆ ಪಡೆದ ಬಳಿಕವೂ ಸೋಂಕು ತಗುಲುವುದೇ? ಇಲ್ಲಿದೆ ಮಾಹಿತಿ

ಮಹಾಮಾರಿ ಕೊರೋನಾ ವೈರಸ್ ಸೋಂಕಿಗೆ ಕಡಿವಾಣ ಹಾಕಿ, ವಿಶ್ವವನ್ನು ಸಹಜ ಸ್ಥಿತಿಗೆ ತರುವ ಭರವಸೆ ಹುಟ್ಟಿಸುವ ಲಸಿಕೆಗಾಗಿ ಇಡೀ ವಿಶ್ವ ಕಾತುರದಿಂದ ಕಾಯುತ್ತಿದೆ. ಈ ಸಂದರ್ಭದಲ್ಲೇ ಹಲವು ರಾಷ್ಟ್ರಗಳು ತಮ್ಮದೇ ಆದ ಲಸಿಕೆಗಳನ್ನು ಸಿದ್ಧಪಡಿಸಿ, ತುರ್ತುಬಳಕೆಗೆ ಅನುಮತಿ ಪಡೆದಿದೆ. 

Published: 21st January 2021 01:42 PM  |   Last Updated: 21st January 2021 02:05 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಮಹಾಮಾರಿ ಕೊರೋನಾ ವೈರಸ್ ಸೋಂಕಿಗೆ ಕಡಿವಾಣ ಹಾಕಿ, ವಿಶ್ವವನ್ನು ಸಹಜ ಸ್ಥಿತಿಗೆ ತರುವ ಭರವಸೆ ಹುಟ್ಟಿಸುವ ಲಸಿಕೆಗಾಗಿ ಇಡೀ ವಿಶ್ವ ಕಾತುರದಿಂದ ಕಾಯುತ್ತಿದೆ. ಈ ಸಂದರ್ಭದಲ್ಲೇ ಹಲವು ರಾಷ್ಟ್ರಗಳು ತಮ್ಮದೇ ಆದ ಲಸಿಕೆಗಳನ್ನು ಸಿದ್ಧಪಡಿಸಿ, ತುರ್ತುಬಳಕೆಗೆ ಅನುಮತಿ ಪಡೆದಿದೆ. ಇದರಂತೆ ಭಾರತದಲ್ಲಿಯೂ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್'ನ ಕೋವ್ಯಾಕ್ಸಿನ್ ಎರಡು ಲಸಿಕೆಗಳಿಗೆ ಮಾತ್ರ ಅನುಮತಿ ಸಿಕ್ಕಿದೆ. 

ಲಸಿಕೆ ಸಂಶೋಧನೆಯಲ್ಲಿ ವಿಶ್ವದ ಸುಮಾರು 165 ಸಂಸ್ಥೆಗಳು ತೊಗಡಿಸಿಕೊಂಡಿವೆ. ಆದರೆ, ಕೋವಿಶೀಲ್ಡ್‌, ಫೈಜರ್‌, ಸ್ಪೂಟ್ನಿಕ್‌ ಸೇರಿದಂತೆ ಕೆಲವು ಮಾತ್ರವೇ ಬಳಕೆಗೆ ಅನುಮತಿ ಪಡೆದಿವೆ. 

ಸುರಕ್ಷಿತ ಲಸಿಕೆ ಸಿದ್ಧಗೊಳ್ಳಲು ಹಲವು ವರ್ಷಗಳ ಸಂಶೋಧನೆ ಅತ್ಯಗತ್ಯವಿದೆ. ಆದರೆ ಈ ಬಾರಿ ಮಾತ್ರ ವಿಜ್ಞಾನಿಗಳು ಒಂದು ವರ್ಷದೊಳಗೆ ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸಿದ್ದಾರೆ. ಇದಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ.

ಇಷ್ಟಕ್ಕೂ ಲಸಿಕೆ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ? ಪ್ರಸ್ತುತ ತುರ್ತುಬಳಕೆಗೆ ಅನುಮತಿ ಪಡೆದಿರುವ ಲಸಿಕೆ ಎಷ್ಟು ಸುರಕ್ಷಿತ? ಆ ಲಸಿಕೆಯನ್ನು ಯಾರು ಪಡೆಯಬೇಕು, ಯಾರು ಪಡೆಯಬಾರದು? ಲಸಿಕೆ ಪಡೆದ ಬಳಿಕ ಸೋಂಕು ತಗುಲುವುದಿಲ್ಲವೇ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಹಾಗೂ ಮಾಹಿತಿಗಳು ಇಲ್ಲಿದೆ...

ವೈರಸ್‌ ಅಥವಾ ಬ್ಯಾಕ್ಟೀರಿಯಾಗಳಿಂದ ಉಂಟಾಗಬಹುದಾದ ಅಪಾಯಕಾರಿ ಅಥವಾ ಮಾರಕ ರೋಗಗಳನ್ನು ಲಸಿಕೆಗಳು ತಡೆಯುತ್ತವೆ. ಯಾವುದೇ ಸೋಂಕಿನ ಅಪಾಯಗಳನ್ನು ತಡೆಯುವ ಸಲುವಾಗಿ ಲಸಿಕೆಗಳು ದೇಹದ ನೈಸರ್ಗಿಕ ಪ್ರತಿರಕ್ಷಣಾ ವ್ಯವಸ್ಥೆ ಜೊತೆಗೆ ಕೆಲಸ ಮಾಡುತ್ತವೆ. ಅಲ್ಲದೆ, ಸೋಂಕಿನ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಸುರಕ್ಷಿತವಾಗಿ ಅಭಿವೃದ್ಧಿಪಡಿಸುತ್ತವೆ.

ಪ್ರಸ್ತುತ ಅಭಿವೃದ್ಧಿಪಡಿಸಲಾಗಿರುವ ಎರಡು ಲಸಿಕೆಗಳನ್ನು ಮಾನವ ಪ್ರಯೋಗಕ್ಕೂ ಮುನ್ನ ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾಗುತ್ತದೆ. ಕೋವಿಶೀಲ್ಡ್ 3ನೇ ಹಂತದಲ್ಲಿ ಯಾವುದೇ ರೀತಿ ಅಡ್ಡಪರಿಣಾಮಗಳೂ ಕಂಡು ಬಂದಿಲ್ಲ. ಲಸಿಕೆಯ ಪರಿಣಾಮ ಶೇ.70ರಷ್ಟಿದೆ ಎಂಬುದು ಪ್ರಯೋಗಗಳಲ್ಲಿ ಸಾಬೀತಾಗಿದೆ. ಆದರೆ, ಸುರಕ್ಷತೆ ಅವಧಿ ಎಷ್ಟಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. 

ಇನ್ನು ಕೋವ್ಯಾಕ್ಸಿನ್ ಕೂಡ ಶೇ.60-70ರಷ್ಟು ಪರಿಣಾಮಕಾರಿಯಾಗಿದ್ದು, ಎರಡೂ ಲಸಿಕೆಗಳಿಗೂ ಭಾರತದಲ್ಲಿ ತುರ್ತುಬಳಕೆಗೆ ಅನುಮೋದನೆ ದೊರೆತಿದೆ. 

ಲಸಿಕೆಯನ್ನು ಎಲ್ಲಿ ಪಡೆಯಬಹುದು? 
ತುರ್ತುಬಳಕೆಗೆ ಲಭ್ಯವಿರುವ ಈ ಎರಡೂ ಲಸಿಕೆಗಳು ಪ್ರಸ್ತುತ ಸಾರ್ವಜನಿಕ ಮಾರುಕಟ್ಟೆಗಳಲ್ಲಿ ಲಭ್ಯವಿಲ್ಲ. ಭಾರತ ಸರ್ಕಾರದ ಮುಖಾಂತರ ಲಸಿಕೆಗಳನ್ನು ಆದ್ಯತೆ ಮೇರಗೆ ಆರೋಗ್ಯ ಕಾರ್ಯಕರ್ತರಿಗೆ, 50 ವರ್ಷಕ್ಕಿಂತಲೂ ಮೇಲ್ಪಟ್ಟವರಿಗೆ ಹಾಗೂ ತೀವ್ರ ಅಸ್ವಸ್ಥರಾಗಿರುವವರಿಗೆ ನೀಡಲಾಗುತ್ತಿದೆ. 

ಲಸಿಕೆ ಹೇಗೆ ನೀಡಲಾಗುತ್ತದೆ ಮತ್ತು ಎಷ್ಟು ಡೋಸ್ ಗಳಷ್ಟು ತೆಗೆದುಕೊಳ್ಳಬೇಕಾಗುತ್ತದೆ? 
ಲಭ್ಯವಿರುವ ಎರಡೂ ಲಸಿಕೆಗಳನ್ನು ತೋಳಿಗೆ (ಇಂಟ್ರಾ-ಮಸ್ಕ್ಯುಲರ್ ರೂಟ್) ನೀಡಲಾಗುತ್ತದೆ. ಒಂದು ಡೋಸ್ ಪಡೆದುಕೊಂಡ 2 ವಾರಗಳ ಬಳಿಕ ಎರಡನೇ ಡೋಸ್ ನೀಡಲಾಗುತ್ತದೆ. 

ಲಸಿಕೆಯಲ್ಲಿ ಜೀವಂತ ವೈರಸ್ ಗಳೇನಾದರೂ ಇರುತ್ತವೆಯೇ? 
ಇಲ್ಲ. ಲಸಿಕೆಯಲ್ಲಿ ವೈರಲ್ ಪ್ರೋಟೀನ್ ಅಥವಾ ನಿಷ್ಕ್ರಿಯ ವೈರಸ್‌ನ ಒಂದು ಭಾಗವನ್ನು ಮಾತ್ರ ಇರುತ್ತದೆ, ಇದು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸುತ್ತದೆ. 

50 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆ ಪಡೆಯುವುದು ಅತ್ಯಗತ್ಯವೇ? 
ಇಲ್ಲ, ಲಸಿಕೆ ಪಡೆಯುವುದು ಕಡ್ಡಾಯವಲ್ಲ. ಸ್ವಯಂ ಪ್ರೇರಿತರಾಗಿ ಜನರು ಲಸಿಕೆಯನ್ನು ಪಡೆಯಬಹುದಾಗಿದೆ. ಆದರೆ, ಲಸಿಕೆಯ ಆಯ್ಕೆಯ ನಿರ್ಧಾರವನ್ನು ನೀಡಲಾಗಿಲ್ಲ. 

ಮಕ್ಕಳಿಕೆ ಕೊರೋನಾ ಲಸಿಕೆ ಸುರಕ್ಷಿತವೇ? 
ಪ್ರಸ್ತುತ ಲಭ್ಯವಿರುವ ಅಧ್ಯಯನಗಳ ಪ್ರಕಾರ ಎಲ್ಲಿಯೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಕುರಿತು ಮಾಹಿತಿಗಳನ್ನು ನೀಡಲಾಗಿಲ್ಲ. ಲಸಿಕೆಯನ್ನು 18 ವರ್ಷ ಮತ್ತು ಇದಕ್ಕಿಂತಲೂ ಮೇಲ್ಪಟ್ಟವರಿಗೆ ಮಾತ್ರ ಬಳಕೆಗೆ ಅನುಮೋದನೆ ನೀಡಲಾಗಿದೆ. 

ಹಾಲುಣಿಸುವ, ಗರ್ಭಿಣಿ ಮಹಿಳೆಯರು ಲಸಿಕೆ ಪಡೆಯಬಹುದೇ? 
ಗರ್ಭಿಣಿಯರು ಹಾಗೂ ಹಾಲುಣಿಸುವ ಮಹಿಳೆಯರ ಮೇಲೆ ಲಸಿಕೆಯ ಪ್ರಯೋಗ ನಡೆಸಿರುವ ಯಾವುದೇ ಅಧ್ಯಯನಗಳು ಲಭ್ಯವಾಗಿಲ್ಲ. ಇಂತಹವರು ಲಸಿಕೆ ಪಡೆಯುವುದು ನಿಯಂತ್ರಿಸುವುದೇ ಒಳಿತು ಎಂದು ಹೇಳಲಾಗುತ್ತಿದೆ. 

ಈಗಷ್ಟೇ ಕೊರೋನಾದಿಂದ ಚೇತರಿಸಿಕೊಂಡಿರುವವರು ಲಸಿಕೆ ಪಡೆಯಬಹುದೇ? 
ಖಂಡಿತ ಹೌದು. ಅಂತಹವರೂ ಕೂಡ ಲಸಿಕೆಯನ್ನು ಪಡೆಯಬಹುದಾಗಿದೆ. ಚೇತರಿಸಿಕೊಂಡ ಬಳಿಕ 14 ದಿನಗಳ ಬಳಿಕ ಲಕ್ಷಣಗಳಾವುದೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಲಸಿಕೆ ಪಡೆಯುವುದು ಉತ್ತಮ. 

ಯಾರು ಲಸಿಕೆಯನ್ನು ಪಡೆಯಬಾರದು? 
ಗರ್ಭಿಣಿಯರು, ಹಾಲುಣಿಸುವ ಮಹಿಳೆಯರು, ತೀವ್ರ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರು, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರು, ಕೊರೋನಾ ಸೋಂಕಿನಿಂದ ಬಳಲುತ್ತಿರುವವರು, ಪ್ಲಾಸ್ಮಾ ಥೆರಪಿ ಪಡೆದುಕೊಳ್ಳುತ್ತಿರವವರು  ಲಸಿಕೆ ಪಡೆಯುವುದರಿಂದ ತಾತ್ಕಾಲಿಕವಾಗಿ ದೂರ ಇರುವುದು ಒಳ್ಳೆಯದು. 

100%

ಪರಿಧಮನಿಯ ಕಾಯಿಲೆಯೊಂದಿಗೆ ನನಗೆ ಮಧುಮೇಹದಿಂದ ಬಳಲುತ್ತಿರುವವರು ಲಸಿಕೆ ಪಡೆಯಬಹುದೇ?
ಇಂತಹವರೂ ಕೂಡ ಲಸಿಕೆ ಪಡೆಯಬಹುದಾಗಿದೆ. ಮಧುಮೇಹ, ಎಚ್‌ಐವಿ, ಸಿಕೆಡಿ, ಕ್ಯಾನ್ಸರ್, ಹೃದಯ ಕಸಿ ಮಾಡಿಸಿಕೊಂಡವರು, ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳಿಂಗ ಬಳಲುತ್ತಿರುವವರು ಸೇರಿದಂತೆ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರು ಲಸಿಕೆ ಪಡೆಯಬಹುದು.

ಲಸಿಕೆ ಪಡೆದ ಬಳಿಕವೂ ಸೋಂಕು ತಗುಲಬಹುದೇ? 
ಲಸಿಕೆ ಸುರಕ್ಷಿತವಾಗಿದೆ ಮತ್ತು ಬಹುಪಾಲು ಪರಿಣಾಮಕಾರಿಯಾಗಿದ್ದರೂ, ಲಸಿಕೆಗಳು ಶೇ.100ರಷ್ಟು ಅನುಮೋದನೆ ಪಡೆದಿಲ್ಲದ ಕಾರಣ ಲಸಿಕೆ ಪಡೆದ ಬಳಿಕ ಕೂಡ ಕೊರೋನಾ ಮನುಷ್ಯರ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. 

ಲಸಿಕೆ ಪಡೆದ ಬಳಿಕ ಯಾವೆಲ್ಲಾ ಅಡ್ಡಪರಿಣಾಗಳು ಎದುರಾಗಬಹುದು? 
ಇತರೆ ಲಸಿಕೆಗಳಂತೆ ಸಾಮಾನ್ಯವಾಗಿ ಲಸಿಕೆ ಪಡೆದ ಸ್ಥಳದಲ್ಲಿ ನೋವು, ಆಯಾಸ, ಜ್ವರ, ತಲೆನೋವು, ವಾಕರಿಕೆ ಮತ್ತು ಕೀಲು ನೋವು ಅಥವಾ ಮೈ ಕೈ ನೋವು ಮುಂತಾದ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಬಹುದು. 

ಲಸಿಕೆ ಪಡೆದ ಬಳಿಕ ಮಾಸ್ಕ್ ಧರಿಸದೇ ಇರುವುದು, ಸಾಮಾಜಿಕ ಕಾಯ್ದುಕೊಳ್ಳದೇ ಇರಬಹುದೇ? 
ಯಾವುದೇ ಲಸಿಕೆಗಳೂ ಶೇ.100ರಷ್ಟು ಸುರಕ್ಷಿತವಾಗಿಲ್ಲ. ಲಸಿಕೆ ವೈರಸ್ ಹರಡುವುದನ್ನು ತಡೆಯುವುದಿಲ್ಲ ಮತ್ತು ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಲು ಸಮಯ ತೆಗೆದುಕೊಳ್ಳುತ್ತದೆ (ಎರಡನೇ ಡೋಸ್ ತೆಗೆದುಕೊಂಡ ಕನಿಷ್ಠ 14 ದಿನಗಳ ಬಳಿಕ ಲಸಿಕೆ ಕೆಲಸ ಮಾಡುತ್ತವೆ).

ಲಸಿಕೆ ಪಡೆಯುವುದು ಅಷ್ಟೊಂದು ಮುಖ್ಯವೇ? 
ಈ ಹಿಂದೆ, ಪೋಲಿಯೊ ಹಾಗೂ ಇತರೆ ಕಾಯಿಲೆಗಳಿಗೆ ಲಸಿಕೆಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದವು. ಪ್ರಸ್ತುತ ಕೊರೋನಾಗೂ ಲಸಿಕೆ ದೊರೆತಿರುವ ಹಿನ್ನೆಲೆಯಲ್ಲಿ ಇದೀಗ ನಾವು ಕೋವಿಡ್‌ಗೆ ಶಾಶ್ವತ ಪರಿಹಾರದತ್ತ ಸಾಗುತ್ತಿದ್ದೇವೆ ಎಂಬುದು ಒಂದು ಸಮಾಧಾನ ವಿಚಾರವಾಗಿದೆ. ಲಸಿಕೆಗಳನ್ನು ಸಾರ್ವಜನಿಕ ಬಳಕೆಗಾಗಿ ಅನುಮೋದಿಸುವ ಮೊದಲು ಸುರಕ್ಷತೆ ಮತ್ತು ಪರಿಣಾಮಕಾರಿತ್ವಕ್ಕಾಗಿ ಸಮರ್ಪಕವಾಗಿ ಪರಿಶೀಲಿಸಲಾಗುತ್ತದೆ. ಆದ್ದರಿಂದ, ಸಾಂಕ್ರಾಮಿಕ ರೋಗವನ್ನು ತಡೆಯಲು ಲಸಿಕೆ ಪಡೆಯಲು ಸೂಚಿಸಲಾಗುತ್ತಿದೆ.

Stay up to date on all the latest ಆರೋಗ್ಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp