ಕೋವಿಡ್ ನಿಂದ ಗುಣಮುಖ: ನಂತರ ಕಾಡುವ ನಿಶ್ಶಕ್ತಿ, ಆಯಾಸ, ಒಣ ಕೆಮ್ಮು ನಿರ್ವಹಣೆ ಹೇಗೆ?

ನೀವು ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿದ್ದರೆ ಅಥವಾ ಆಸ್ಪತ್ರೆಯಿಂದ ಮನೆಗೆ ಮರಳಿದ್ದರೆ, ನಿಮ್ಮ ಎಂದಿನ ಜೀವನಕ್ಕೆ ಮರಳುವವರೆಗೆ ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆ ಎದುರಾಗುವುದು ಸಾಮಾನ್ಯ. ಸೋಂಕಿನ ಗಂಭೀರತೆ, ಪ್ರಮಾಣದ ಅನುಸಾರ ಒಬ್ಬ ವ್ಯಕ್ತಿ ಒಂದು ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚು ಸಮಯದಲ್ಲಿ ಚೇತರಿಸಿಕೊಳ್ಳುತ್ತಿರುತ್ತಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನೀವು ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿದ್ದರೆ ಅಥವಾ ಆಸ್ಪತ್ರೆಯಿಂದ ಮನೆಗೆ ಮರಳಿದ್ದರೆ, ನಿಮ್ಮ ಎಂದಿನ ಜೀವನಕ್ಕೆ ಮರಳುವವರೆಗೆ ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆ ಎದುರಾಗುವುದು ಸಾಮಾನ್ಯ. ಸೋಂಕಿನ ಗಂಭೀರತೆ, ಪ್ರಮಾಣದ ಅನುಸಾರ ಒಬ್ಬ ವ್ಯಕ್ತಿ ಒಂದು ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚು ಸಮಯದಲ್ಲಿ ಚೇತರಿಸಿಕೊಳ್ಳುತ್ತಿರುತ್ತಾರೆ. 

ಸೋಂಕಿನಿಂದ ಚೇತರಿಸಿಕೊಂಡ ಬಳಿಕವೂ ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ಸುರಕ್ಷಿತವಾಗಿರಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಶುಚಿತ್ವ ಕಾಪಾಡುವುದು, ಸ್ಯಾಟಿಟೈಸರ್ ಬಳಕೆ ಮಾಡುವುದನ್ನು ಮಾಡುತ್ತಿರಬೇಕು. 

ಕೊರೋನಾದಿಂದ ಚೇತರಿಸಿಕೊಂಡ ಜನರಲ್ಲಿ ನಿಶ್ಯಕ್ತಿ, ಆಯಾಸ, ಒಣ ಕೆಮ್ಮು ಇರುವುದು ಸಾಮಾನ್ಯ. ಸೋಂಕು ಮನುಷ್ಯನ ದೇಹವನ್ನು ದುರ್ಬಲಗೊಳಿಸಿರುತ್ತದೆ. ಇಧರಿಂದ ಆಯಾಸ, ನಿಶ್ಯಕ್ತಿ, ಒಣಕೆಮ್ಮು ಇರುವುದು ಸಾಮಾನ್ಯ. ಇದನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಕೆಲ ಸಲಹೆಗಳು... 

ಒಣ ಕೆಮ್ಮು
ಒಣ ಕೆಮ್ಮು ರೋಗಿಯು ಸೋಂಕಿನಿಂದ ಚೇತರಿಸಿಕೊಳ್ಳುವಾಗ ಗಂಟಿನಿಲ್ಲಿ ಹೆಚ್ಚಿನ ನೋವನ್ನುಂಟು ಮಾಡುತ್ತದೆ. ಈ ಸಮಸ್ಯೆಯನ್ನು ದೂರಾಗಿಸಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ...

  • ದೇಹ ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳಿ. ಆಗಾಗ ಬೆಚ್ಚಗಿನ ನೀರನ್ನು ಕುಡಿಯುತ್ತಿರಿ. 
  • ಬಾಯಿಗೆ ನೀರು ಹಾಕಿ ಸ್ವಲ್ಪ ಸ್ವಲ್ಪವೇ ನುಂಗುತ್ತಿರಿ. 
  • ಗಂಟಲಿನಲ್ಲಿ ಕಿರಿಕಿರಿಯಾಗುತ್ತಿದೆ ಎಂದಾರೆ, ಬೆಚ್ಚಗಿನ ನೀರಿಗೆ ಜೇನುತುಪ್ಪ, ನಿಂಬೆರಸ ಸೇರಿಸಿ ಕುಡಿಯುತ್ತಿರಿ. 
  • ಕಫ ಸಮಸ್ಯೆ ದೂರಾಗಿಸು ದಿನಕ್ಕೆ ಮೂರು ಬಾರಿಯಾದರೂ ಬಿಸಿ ನೀರಿನ ಆವಿ ತೆಗೆದುಕೊಳ್ಳಿ. 
  • ಶ್ವಾಸಕೋಶ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ನಿಮ್ಮ ರೂಮಿನಲ್ಲಿಯೇ ವಾಕ್ ಮಾಡಿ.

ಆಯಾಸ ದೂರಾಗಿಸಲು ಸಲಹೆ....
ವೈರಸ್ ವಿರುದ್ಧ ಹೋರಾಡಿದ ನಂತರ, ವ್ಯಕ್ತಿ ದೇಹವು ದುರ್ಬಲಗೊಳ್ಳುತ್ತದೆ. ನಿಶ್ಯಕ್ತಿಯಿಂದ ಬಳಲುತ್ತಿರುತ್ತಾರೆ. ಈ ಅವಧಿಯಲ್ಲಿ ದೇಹವು ಎಲ್ಲಾ ವೈರಸ್‌ಗಳನ್ನು ಕೊಂದಿದ್ದರೂ ಕೂಡ ನಮ್ಮನ್ನು ನೋಡಿಕೊಳ್ಳುವುದು ಮತ್ತು ಆಯಾಸವನ್ನು ನಿರ್ವಹಿಸುವುದು ಪ್ರಮುಖವಾಗುತ್ತದೆ. ಈ ಆಯಾಸವು ಒಂದು ರೀತಿಯ ದೀರ್ಘ ಆಯಾಗವಾಗಿದ್ದು, ಅದು ಆರು ವಾರಗಳಿಗಿಂತ ಹೆಚ್ಚು ಕಾಲ ಇರುತ್ತದೆ. ಇದನ್ನು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ದೂರಾಗಿಸಬಹುದು. ಇದಕ್ಕೆ, ಮಾನಸಿಕ ಹಾಗೂ ದೈಹಿಕವಾಗಿ ವಿಶ್ರಾಂತಿ ಪಡೆದುಕೊಳ್ಳಿ. ಹೆಚ್ಚಿನ ಒತ್ತಡಕ್ಕೆ ಸಿಲುಕದಿರಿ. 

ಇತರೆ ಸಲಹೆಗಳು...

  • ಸೋಂಕಿನಿಂದ ಗುಣಮುಖರಾದ ಬಳಿಕ ವೈದ್ಯರು ನೀಡಿದ ಮಲ್ಟಿ ವಿಟಮಿನ್ಸ್ ಮಾತ್ರೆಗಳನ್ನು ಸೇವನೆ ಮಾಡಿ. 
  • ಹಾಲು, ಜ್ಯೂಸ್ ಗಳನ್ನು ಹೆಚ್ಚೆಚ್ಚು ಕುಡಿಯಿರಿ. ಇದು ನಿಮ್ಮ ಮೂಳೆಗಳಿಗೆ ಹೆಚ್ಚಿನ ಬಲವನ್ನು ನೀಡುತ್ತದೆ. ಅಲ್ಲದೆ, ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. 
  • ಹೆಚ್ಚಚ್ಚು ಪ್ರೊಟೀನ್ ಇರುವ, ರೋಗ ನಿರೋಧಕ ಶಕ್ತಿಯಿರುವ ಆಹಾರವನ್ನು ಸೇವನೆ ಮಾಡಿ. ವಿಟಮಿನ್ಸ್, ಮಿನರಲ್ಸ್ ಇರುವ ತರಕಾರಿಗಳನ್ನು ಹೆಚ್ಚಾಗಿ ಸೇವನೆ ಮಾಡಿ.
  • ಆ್ಯಕ್ಸಿಜನ್ ಮಟ್ಟದ ಮೇಲೆ ಗಮನ ಇರಲಿ. ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಕನಿಷ್ಟ 10 ದಿನಗಳಾದರೂ ವಿಶ್ರಾಂತಿ ಪಡೆಯಿರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com