ನಿಮ್ಮ ಮಕ್ಕಳ ಕೀಲುಗಳು ಮತ್ತು ಸ್ನಾಯುಗಳನ್ನು ಬಲಪಡಿಸಲು ಏನು ಮಾಡಬೇಕು ಗೊತ್ತಾ?

ಅಧ್ಯಯನಗಳ ಪ್ರಕಾರ, ಭಾರತೀಯ ಮಕ್ಕಳಲ್ಲಿ ಜೆಐಎಯ ಅಂದಾಜು ಒಂದು ಲಕ್ಷದಲ್ಲಿ 48 ಜನರಿಗೆ ಹರಡಬಹುದಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಹುಡುಗರಿಗಿಂತ ಹುಡುಗಿಯರಲ್ಲಿ ಸಂಧಿವಾತ ಹೆಚ್ಚಾಗಿ ಕಂಡುಬರುವ ಸಾಧ್ಯತೆ ಇರುತ್ತದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಮಕ್ಕಳು ಬಹುಬೇಗನೆ ಸೋಂಕಿಗೆ ತುತ್ತಾಗುತ್ತಾರೆ. ಜ್ವರ, ಕೀಲುಗಳ ನೋವು, ದದ್ದುಗಳು ಮತ್ತು ಆಯಾಸವನ್ನು ಸೋಂಕು ಅಥವಾ ಅತಿಯಾದ ಒತ್ತಡದ ಚಿಹ್ನೆಗಳು ಎಂದು ತಪ್ಪಾಗಿ ಗ್ರಹಿಸಬಹುದು. ಮಕ್ಕಳಲ್ಲಿ ಊದಿಕೊಂಡ ಅಥವಾ ನೋವಿನಿಂದ ಕೂಡಿರುವ ಕೀಲುಗಳು ಆಟವಾಡುವುದರಿಂದ ಆಗಿರಬಹುದು ಎಂದು ಪೋಷಕರು ಚಿಂತಿಸಬಹುದು.

ಇಂತಹ ಸರಳ ಚಿಹ್ನೆಗಳು ಜುವೆನೈಲ್ ಇಡಿಯೋಪಥಿಕ್ ಆರ್ಥ್ರೈಟಿಸ್ (Juvenile Idiopathic Arthritis) ನಿಂದ ಕೂಡ ಉಂಟಾಗಿರಬಹುದು ಎಂದು ನಿಮಗೆ ತಿಳಿದಿದೆಯೇ? ಮಕ್ಕಳಲ್ಲಿ ಜುವೆನೈಲ್ ಇಡಿಯೋಪಥಿಕ್ ಸಂಧಿವಾತವು ಹೆಚ್ಚಾಗಿ ಕಂಡುಬರುತ್ತಿದೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಂದ ಹಿಡಿದು ಅಂಬೆಗಾಲಿಡುವವರ ಮೇಲೂ ಪರಿಣಾಮ ಬೀರುವ ಸಾಮಾನ್ಯ ದೀರ್ಘಕಾಲದ ಕಾಯಿಲೆಗಳಲ್ಲಿ ಇದು ಕೂಡ ಒಂದಾಗಿದೆ.

ಅಧ್ಯಯನಗಳ ಪ್ರಕಾರ, ಭಾರತೀಯ ಮಕ್ಕಳಲ್ಲಿ ಜೆಐಎಯ ಅಂದಾಜು ಒಂದು ಲಕ್ಷದಲ್ಲಿ 48 ಜನರಿಗೆ ಹರಡಬಹುದಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಹುಡುಗರಿಗಿಂತ ಹುಡುಗಿಯರಲ್ಲಿ ಸಂಧಿವಾತ ಹೆಚ್ಚಾಗಿ ಕಂಡುಬರುವ ಸಾಧ್ಯತೆ ಇರುತ್ತದೆ.

ರೋಗಲಕ್ಷಣಗಳು

ಕೀಲು ನೋವಿನ (joint pain) ಬಗ್ಗೆ ಸಲಹೆ ಪಡೆಯುವ ತುರ್ತು ಯಾವಾಗ ತೋರಬೇಕು ಎಂಬುದನ್ನು ತಿಳಿಯುವುದು ಮುಖ್ಯ. ಮಗುವಿಗೆ ಈ ಕೆಳಗಿನ ಕೀಲು ನೋವಿನ ಸಮಸ್ಯೆಗಳಿದ್ದರೆ, ಅವುಗಳನ್ನು 'ಎಚ್ಚರಿಕೆ ಚಿಹ್ನೆಗಳು' ಎಂದು ಪರಿಗಣಿಸಬೇಕು. ಇಂತಹ ಸಂದರ್ಭದಲ್ಲಿ ತುರ್ತು ಸಮಾಲೋಚನೆ ಮತ್ತು ಸರಿಯಾದ ಮೌಲ್ಯಮಾಪನದ ಅಗತ್ಯವಿರುತ್ತದೆ.

ಕೀಲಿನ ಊತ: ಈ ವೇಳೆ ಮಗುವಿಗೆ ನೋವು ಉಂಟಾಗಬಹುದು. ಕೀಲುಗಳಲ್ಲಿ ಊತ ಅಥವಾ ಬಿಸಿ ಉಂಟಾಗಬಹುದು.

ಬೆಳಗಿನ ಬಿಗಿತ: ಮಗುವು ಎದ್ದಾಗ ಬೆಳಗಿನ ಜಾವದಲ್ಲಿ ನಡೆಯಲು ಕಷ್ಟವಾಗುತ್ತದೆ. ದಿನ ಕಳೆದಂತೆ ಅದು ಉತ್ತಮಗೊಳ್ಳುತ್ತದೆ.

ಚರ್ಮದ ದದ್ದುಗಳೊಂದಿಗೆ ಕೀಲು ನೋವು: ಇವುಗಳಿಗೆ ತುರ್ತು ಮೌಲ್ಯಮಾಪನದ ಅಗತ್ಯವಿರುತ್ತದೆ. ಇದು ಸಾಮಾನ್ಯ ವೈರಲ್ ಜ್ವರದಿಂದಾಗಿರಬಹುದು ಅಥವಾ ಕೆಲವೊಮ್ಮೆ ರಕ್ತನಾಳಗಳ ಮೇಲೆ ಪರಿಣಾಮ ಬೀರುವ ಕಾಯಿಲೆಯಿಂದಾಗಿರಬಹುದು (ವೈದ್ಯಕೀಯ ಪರಿಭಾಷೆಯಲ್ಲಿ 'ವ್ಯಾಸ್ಕುಲೈಟಿಸ್' ಎಂದು ಕರೆಯಲಾಗುತ್ತದೆ).

ಕೀಲು ನೋವಿನೊಂದಿಗೆ ಜ್ವರ: ವೈರಲ್ ಸೋಂಕಿನಿಂದ (ಡೆಂಗ್ಯೂ/ಚಿಕನ್‌ಗುನ್ಯಾ) ಜ್ವರ ಮತ್ತು ಕೀಲು ನೋವು ಉಂಟಾಗಬಹುದು. ಆದಾಗ್ಯೂ, ಇದು ಕೆಲವೊಮ್ಮೆ ಕೆಟ್ಟ ಅಡಗಿಕೊಂಡಿರುವ (ರಕ್ತದ ಕ್ಯಾನ್ಸರ್) ಕಾಯಿಲೆಯ ಕಾರಣದಿಂದಲೂ ಆಗಿರಬಹುದು.

ತೂಕದ ನಷ್ಟ ಅಥವಾ ಹಸಿವಾಗದಿರುವುದು: ವಯಸ್ಕರಂತೆಯೇ ಮಕ್ಕಳು ಸಹ ಸಂಧಿವಾತವನ್ನು ಅನುಭವಿಸಬಹುದು. ನಾವು ಇದನ್ನು ಜುವೆನೈಲ್ ಆರ್ಥ್ರೈಟಿಸ್ ಎಂದು ಕರೆಯುತ್ತೇವೆ. ಇಂತಹ ಮಕ್ಕಳು ಕೀಲುು ನೋವಿನ ಬ್ಗೆ ದೂರು ನೀಡುತ್ತಾರೆ ಮತ್ತು ಒಂದು ಅಥವಾ ಹೆಚ್ಚಿನ ಕೀಲುಗಳು ಊದಿಕೊಳ್ಳುತ್ತವೆ. ಬೆಳಗಿನ ಸಮಯದಲ್ಲಿ ನೋವು  ಕೂಡ ತೀವ್ರವಾಗಿರುತ್ತದೆ.

ಮಗುವಿನ ಕೀಲುಗಳು ಮತ್ತು ಸ್ನಾಯುಗಳನ್ನು ಬಲವಾಗಿಡಲು ಸಲಹೆ

ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿರುವ ಆಹಾರ: ಆಹಾರವು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಒಳಗೊಂಡಿರಬೇಕು. ಮಾಂಸಹಾರಿ ಆಹಾರವನ್ನು ಸೇವಿಸುವವರಿಗೆ ಮೀನಿನ ಯಕೃತ್ತಿನ ಎಣ್ಣೆಯು ಮೂಳೆಗಳ ಆರೋಗ್ಯಕ್ಕೆ ಅಗತ್ಯವಾದ ಜೀವಸತ್ವಗಳ ಉತ್ತಮ ಮೂಲವಾಗಿದೆ. ನಿಮ್ಮ ಮಗುವಿಗೆ ಪ್ರತಿದಿನ ಇವುಗಳನ್ನು ಸೇವಿಸಲು ಬಿಡಿ.

ಸಾಕಷ್ಟು ನೀರು ಕುಡಿಯುವುದು: ಪ್ರತಿದಿನ 1-2 ಲೀಟರ್ ನೀರು ಕುಡಿಯುವುದು ಒಳ್ಳೆಯದು. ಇದು ಸರಿಯಾದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.

ಕನಿಷ್ಠ 5 ದಿನ/ಪ್ರತಿದಿನ 30 ನಿಮಿಷಗಳ ನಡಿಗೆ: ದೈನಂದಿನ ದಿನಚರಿಯಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ತುಂಬಾ ಮುಖ್ಯ. ಇದು ನಿಮ್ಮ ಮಗುವನ್ನು ವರ್ಷಗಳವರೆಗೆ ಫಿಟ್ ಆಗಿರಿಸಲು ಸಹಾಯ ಮಾಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com