ಸಂತಾನಹೀನ ಪುರುಷರ ‘ಏಝೋಸ್ಪರ್ಮಿಯ’ ಸಮಸ್ಯೆಗೆ ಇದೆ ಪರಿಹಾರ

ಬಂಜೆತನ ಎಂದಾಕ್ಷಣ ಬಹುತೇಕರು ಮಹಿಳೆಯರನ್ನಷ್ಟೇ ದೂಷಿಸುತ್ತಾರೆಯೇ ಹೊರತು ಪುರುಷರಿಗೂ ಬಂಜೆತನ ಕಾಡಬಹುದು ಎಂಬ ಸತ್ಯವನ್ನು ಒಪ್ಪುವುದಿಲ್ಲ. ಶೇಕಡಾ ೧೫ರಷ್ಟು ದಂಪತಿಗಳನ್ನು ಬಂಜೆತನ ಬಾಧಿಸುತ್ತದೆ 

Published: 03rd March 2022 12:19 AM  |   Last Updated: 11th March 2022 05:16 PM   |  A+A-


azoospermia

ಸಂಗ್ರಹ ಚಿತ್ರ

Online Desk

ಬಂಜೆತನ ಎಂದಾಕ್ಷಣ ಬಹುತೇಕರು ಮಹಿಳೆಯರನ್ನಷ್ಟೇ ದೂಷಿಸುತ್ತಾರೆಯೇ ಹೊರತು ಪುರುಷರಿಗೂ ಬಂಜೆತನ ಕಾಡಬಹುದು ಎಂಬ ಸತ್ಯವನ್ನು ಒಪ್ಪುವುದಿಲ್ಲ. ಶೇಕಡಾ ೧೫ರಷ್ಟು ದಂಪತಿಗಳನ್ನು ಬಂಜೆತನ ಬಾಧಿಸುತ್ತದೆ ಮತ್ತು ಅವರ ಪೈಕಿ ಶೇಕಡಾ ೪೦ರಷ್ಟು ಪುರುಷರು ಮತ್ತು  ಶೇಕಡಾ ೪೦ರಷ್ಟು ಮಹಿಳೆಯರು, ಅಂದರೆ ಇಬ್ಬರೂ ಸಮಾನ ಪ್ರಮಾಣದಲ್ಲಿ ಬಂಜೆತನದಿAದ ಬಳಲುತ್ತಾರೆ. ಇನ್ನುಳಿದ ಶೇಕಡಾ ೨೦ರಷ್ಟು ಪ್ರಕರಣಗಳಲ್ಲಿ ದಂಪತಿಗಳಿಬ್ಬರಲ್ಲೂ ಬಂಜೆತನದ ಸಮಸ್ಯೆಯಿರುತ್ತದೆ. ಏಝೋಸ್ಪರ್ಮಿಯ (Azoospermia) ಶೇಕಡಾ ೧ ರಷ್ಟು ಗಂಡಸರನ್ನು ಬಾಧಿಸಿದರೆ, ಬಂಜೆತನದಿಂದ ಬಳಲುವ ಶೇಕಡಾ ೧೫ ರಷ್ಟು ಪುರುಷರಲ್ಲಿ ಏಝೋಸ್ಪರ್ಮಿಯ ಬಂಜೆತನಕ್ಕೆ ಕಾರಣವಾಗಿದೆ.

ಏನಿದು ಏಝೋಸ್ಪರ್ಮಿಯ?
ಪುರುಷರು ಶುಕ್ಲವನ್ನು ಸ್ಖಲಿಸಿದಾಗ ಅದರಲ್ಲಿ ವೀರ್ಯಾಣುಗಳು ಇಲ್ಲದಿರುವ ಸಮಸ್ಯೆಯನ್ನು ಏಝೋಸ್ಪರ್ಮಿಯ ಎಂದು ಕರೆಯಲಾಗುತ್ತದೆ. ಈ ಸಮಸ್ಯೆ ಪುರುಷರಲ್ಲಿ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ.

ಇದರಲ್ಲಿ ಒಬ್ಸ್ಟ್ರಕ್ಟಿವ್ ಏಝೋಸ್ಪರ್ಮಿಯ (Obstructive Azoospermia) ಮತ್ತು ನಾನ್-ಒಬ್ಸ್ಟ್ರಕ್ಟಿವ್ ಏಝೋಸ್ಪರ್ಮಿಯ (Non-Obstructive Azoospermia) ಎಂಬ ಎರಡು ವಿಧಗಳಿವೆ. ಒಬ್ಸ್ಟ್ರಕ್ಟಿವ್ ಏಝೋಸ್ಪರ್ಮಿಯದಲ್ಲಿ ವೃಷಣದಲ್ಲಿ ಸಹಜ ವೀರ್ಯ ಉತ್ಪನ್ನವಾಗುತ್ತಿದ್ದರೂ ಅವುಗಳ ಹರಿವಿಗೆ  ತಡೆಯಾಗುತ್ತಿರುತ್ತದೆ. ಈ ಅಡ್ಡಿ (Blockage) ವೃಷಣದಿಂದ ಹಿಡಿದು ಮೂತ್ರ ವಿಸರ್ಜನ ನಾಳದಲ್ಲಿ ಎಲ್ಲಿ ಬೇಕಾದರೂ ಇರಬಹುದು. ಸೋಂಕು, ಪೆಟ್ಟು, ಅಥವಾ ಹರ್ನಿಯಾ, ಹೈಡ್ರಾಸಿಲ್ ಮತ್ತು ಜನನಾಂಗ ಸಂಬAಧಿ ಶಸ್ತ್ರಚಿಕಿತ್ಸೆಗೆ ಒಳಪಡುವುದು ಒಬ್ಸ್ಟ್ರಕ್ಟಿವ್ ಏಝೋಸ್ಪರ್ಮಿಯಗೆ ಕಾರಣವಾಗಬಹುದು. ಇದರಿಂದ, ಸ್ಖಲನಗೊಂಡ ಶುಕ್ಲದಲಿ ವೀರ್ಯಾಣು ಕಾಣಿಸುವುದಿಲ್ಲ. ಈ ಸಮಸ್ಯೆಗೆ ಪರಿಹಾರವೆಂದರೆ ಶಸ್ತ್ರಚಿಕಿತ್ಸೆ ಮೂಲಕ ಬ್ಲಾಕೇಜ್ ಅನ್ನು ಬೈಪಾಸ್ ಮಾಡುವುದು ಅಥವಾ ಸೂಕ್ಷ್ಮವಾದ ಸೂಜಿಯನ್ನು ಬಳಸಿ ನೇರವಾಗಿ ವೃಷಣದಿಂದ ವೀರ್ಯವನ್ನು ಸಂಗ್ರಹಿಸುವುದು.

ಒಬ್ಸ್ಟ್ರಕ್ಟಿವ್ ಏಝೋಸ್ಪರ್ಮಿಯ ಚಿಕಿತ್ಸೆ ಕುರಿತು ಮಾತನಾಡಿದ ಬಸವನಗುಡಿಯ ಗುಣಶೀಲ ಸರ್ಜಿಕಲ್ ಅಂಡ್ ಮಾಟೆರ್ನಿಟಿ ಆಸ್ಪತ್ರೆಯ ತಜ್ಞ ವೈದ್ಯ ಡಾ. ರಾಜಶೇಖರ್ ನಾಯಕ್, “ಸರ್ಜಿಕಲ್ ಬೈಪಾಸ್ ನ ಯಶಸ್ಸಿನ ಪ್ರಮಾಣ ಕಡಿಮೆ. ಆದ್ದರಿಂದ, ಬಹುತೇಕ ರೋಗಿಗಳು ವೃಷಣದಿಂದ ವೀರ್ಯವನ್ನು ಸಂಗ್ರಹಿಸುವ ಪರ್ಕ್ಯೂಟನಿಯಸ್ ಎಪಿಡಿಡೈಮಲ್ ಸ್ಪರ್ಮ್ ಆಸ್ಪಿರೇಷನ್ (Percutaneous Epididymal Sperm Aspiration (PESA) ಮತ್ತು ಟೆಸ್ಟಿಕ್ಯುಲರ್ ಸ್ಪರ್ಮ್ ಆಸ್ಪಿರೇಷನ್ (Testicular Sperm Aspiration (TESA) ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಲ್ಲಿ ಸೂಕ್ಷ ಸೂಜಿಯ ಮೂಲಕ ವೃಷಣದಿಂದ ನೇರವಾಗಿ ವೀರ್ಯಾಣುವನ್ನು ಸಂಗ್ರಹಿಸಲಾಗುತ್ತದೆ. ಇದು ಸರಳ ಮತ್ತು ನೋವಿಲ್ಲದ ಪ್ರಕ್ರಿಯೆಯಾಗಿದ್ದು, ಆಸ್ಪತ್ರೆಗೆ ದಾಖಲಾಗುವ ಅಗತ್ಯವೂ ಇರುವುದಿಲ್ಲ,” ಎಂದು ಹೇಳಿದರು.

ಈ ಚಿಕಿತ್ಸೆಗೆ ಒಳಗಾದವರ ಪೈಕಿ ಬಹುತೇಕ ಶೇಕಡಾ ೧೦೦ರಷ್ಟು ರೋಗಿಗಳಿಂದ ವೀರ್ಯಾಣುವನ್ನು ಸಂಗ್ರಹಿಸಲಾಗಿದೆ. ಹೀಗೆ ಸಂಗ್ರಹಿಸಿದ ವೀರ್ಯಾಣುಗಳನ್ನು ಐವಿಎಫ್- ಐಸಿಎಸ್ ಐ ಪ್ರಕ್ರಿಯೆ ಮೂಲಕ ರೋಗಿಯ ಪತ್ನಿಯ ಅಂಡಾಣುವಿನೊAದಿಗೆ ಸೇರಿಸಲು ಬಳಸಬಹುದಾಗಿದೆ.

ನಾನ್-ಒಬ್ಸ್ಟ್ರಕ್ಟಿವ್ ಏಝೋಸ್ಪರ್ಮಿಯ
ನಾನ್-ಒಬ್ಸ್ಟ್ರಕ್ಟಿವ್ ಏಝೋಸ್ಪರ್ಮಿಯ ಪ್ರಕರಣಗಳಲ್ಲಿ ವೃಷಣದಲ್ಲಿ ವೀರ್ಯದ ಉತ್ಪಾದನೆಯ ಸಮಸ್ಯೆಯಿರುತ್ತದೆ. “ಇಂತಹ ಬಹುತೇಕ ಪ್ರಕರಣಗಳಲ್ಲಿ ಕಾರಣ ತಿಳಿಯದೇ ಹೋದರೂ, ರೇಡಿಯೇಷನ್, ಕೀಮೋಥೆರಪಿ, ಬಾಲ್ಯದಲ್ಲಿ ಲಾಲಾ ಗ್ರಂಥಿಗಳಿಗೆ ತಗಲುವ ಸೋಂಕು(mumps infection), ಅಥವಾ ಹಾರ್ಮೋನು ಕೊರತೆ ನಾನ್-ಒಬ್ಸ್ಟ್ರಕ್ಟಿವ್ ಏಝೋಸ್ಪರ್ಮಿಯಗೆ ಕಾರಣವಾಗಬಹುದು. ಈ ಸಮಸ್ಯೆಯಿರುವ ಪುರುಷರಲ್ಲಿ ವೀರ್ಯ ಉತ್ಪಾದನೆ ಸಾಧ್ಯವಿಲ್ಲ ಎಂದೇ ಈ ಹಿಂದೆ ಭಾವಿಸಲಾಗಿತ್ತು. ಆದ್ದರಿಂದ, ದಾನಿಗಳ ವೀರ್ಯದ ಮೂಲಕ ಗರ್ಭದಾನ ಮಾಡಿಸುವುದೊಂದೇ ಏಕೈಕ ಆಯ್ಕೆಯಾಗಿತ್ತು,” ಎನ್ನುತ್ತಾರೆ ಡಾ. ನಾಯಕ್.

ವೀರ್ಯ ಮರುಗಳಿಕೆ
ಆದರೆ, ನಾನ್-ಒಬ್ಸ್ಟ್ರಕ್ಟಿವ್ ಏಝೋಸ್ಪರ್ಮಿಯ ಪ್ರಕರಣಗಳಲ್ಲೂ ವೃಷಣಗಳಲ್ಲಿ ಸಣ್ಣ ಪ್ರಮಾಣದ ವೀರ್ಯದ ಉತ್ಪಾದನೆ ಆಗುತ್ತದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ. ಮೈಕ್ರೋ ಡಿಸೆಕ್ಷನ್ ಟೆಸ್ಟಿಕ್ಯುಲರ್ ಸ್ಪರ್ಮ್ ಎಕ್ಸ್ ಟ್ರಾಕ್ಷನ್(Micro dissection Testicular Sperm Extraction (Micro – TESE)ಎಂಬ ನೂತನ ವಿಧಾನದಿಂದ ನಾನ್-ಒಬ್ಸ್ಟ್ರಕ್ಟಿವ್ ಏಝೋಸ್ಪರ್ಮಿಯ ಸಮಸ್ಯೆಯಿರುವ ಪುರುಷರು ತಮ್ಮದೇ ಜೈವಿಕ ಮಕ್ಕಳನ್ನು ಹೊಂದುವುದು ಸಾಧ್ಯವಾಗಿದೆ. ಈ ವಿಧಾನದಿಂದ ಶೇಕಡಾ ೬೦ರಷ್ಟು ನಾನ್-ಒಬ್ಸ್ಟ್ರಕ್ಟಿವ್ ಏಝೋಸ್ಪರ್ಮಿಯ ರೋಗಿಗಳಲ್ಲಿ ವೀರ್ಯ ಮರುಗಳಿಕೆ ಸಾಧ್ಯ.

ಈ ವಿಧಾನಗಳ ಮೂಲಕ ಸಂಗ್ರಹಿಸಿದ ವೀರ್ಯಾಣುಗಳನ್ನು ಐವಿಎಫ್- ಐಸಿಎಸ್ ಐ (ಟೆಸ್ಟ್ ಟ್ಯೂಬ್ ಬೇಬಿ) ಪ್ರಕ್ರಿಯೆಯಲ್ಲಿ ಬಳಸಲಾಗುತ್ತದೆ. ಈ ಮೂಲಕ ಉಂಟಾಗುವ ಗರ್ಭಧಾರಣೆಯ ಯಶಸ್ಸಿನ ಪ್ರಮಾಣ ಸಹಜವಾಗಿ ಸ್ಖಲಿತಗೊಂಡ ವೀರ್ಯಾಣುಗಳನ್ನು ಬಳಸಿ ಮಾಡಲಾಗುವ ಐವಿಎಫ್- ಐಸಿಎಸ್ ಐ ಪ್ರಕ್ರಿಯೆಯಷ್ಟೇ ಇದೆ.

“ಈ ರೀತಿ ಹಲವು ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ಮೈಕ್ರೋ-ಟಿಈಎಸ್ಈ (Micro-TESE) ಶಸ್ತ್ರಚಿಕಿತ್ಸೆ ಮೂಲಕ ರಾಜ್ಯದಲ್ಲಿ ಪ್ರಥಮ ಮಗುವಿನ ಜನನ ನಮ್ಮ ಗುಣಶೀಲ ಫರ್ಟಿಲಿಟಿ ಸೆಂಟರ್ ನಲ್ಲಿ ಆಗಿದೆ,” ಎಂದು ಡಾ. ನಾಯಕ್ ಹೇಳುತ್ತಾರೆ.

ವಿಧಾನ
ರೋಗಿಗೆ ಅನಸ್ತೆಸಿಯ ನೀಡಿ ವೃಷಣವನ್ನು ತೆರೆಯಲಾಗುತ್ತದೆ. ಶಸ್ತ್ರಚಿಕಿತ್ಸಾ ಮೈಕ್ರೋಸ್ಕೋಪ್ ಮೂಲಕ ಗೋಚರತೆಯನ್ನು ೨೫ ಪಟ್ಟು ವರ್ಧಿಸಿ,  ಹಿಗ್ಗಿದ ಅಪಾರದರ್ಶಕ ಕೊಳವೆಗಳನ್ನು ಗುರುತಿಸಲಾಗುವುದು. ಈ ಕೊಳವೆಗಳ ಸಣ್ಣ ತುಣುಕುಗಳನ್ನು ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿ ವೀರ್ಯಾಣುಗಳಿಗಾಗಿ ಶೋಧಿಸಲಾಗುತ್ತದೆ. ಚಿಕಿತ್ಸೆ ವೇಳೆ ವೃಷಣದ ರಕ್ತನಾಳಗಳಿಗೆ ಕೊಂಚವೂ ಹಾನಿಯಾಗದಂತೆ ಅತ್ಯಂತ ಜಾಗರೂಕತೆ ವಹಿಸಲಾಗುವುದು. ಸಂಗ್ರಹಿಸಿದ ವೀರ್ಯಾಣುಗಳನ್ನು ಐವಿಎಫ್- ಐಸಿಎಸ್ ಐಗೆ ಬಳಸಲಾಗುತ್ತದೆ. ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿ ಮರುದಿನವೇ ಮನೆಗೆ ತೆರಳಬಹುದು. ಈ ವಿಧಾನದಲ್ಲಿ ಅಪಾಯ ಮತ್ತು ತೊಂದರೆ ಅತ್ಯಂತ ಕಡಿಮೆಯಿದ್ದು, ಭವಿಷ್ಯದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಎದುರಾಗುವುದಿಲ್ಲ. ಈ ಅತೀ ನಿಷ್ಕೃಷ್ಟ ಶಸ್ತ್ರಚಿಕಿತ್ಸೆಗೆ ತರಬೇತಿ ಮತ್ತು ಅನುಭವ ಬೇಕಾಗುತ್ತದೆ.

ಏಝೋಸ್ಪರ್ಮಿಯಗೆ ಕಾರಣಗಳು

  • ಸ್ಖಲನ ನಾಳದಲ್ಲಿ ತಡೆಗಟ್ಟಿದ ಸ್ಥಿತಿ
  • ಜನನಾಂಗಕ್ಕೆ ಪೆಟ್ಟು
  • ಲೈಂಗಿಕವಾಗಿ ಹರಡುವ ರೋಗ, ವ್ಯಾರಿಕಸೀಲ್ ಮತ್ತು ಇತರೆ ಲೈಂಗಿಕ ಸೋಂಕುಗಳು
  • ಆನುವಂಶಿಕ ಅಂಶಗಳು
  • ಹಾರ್ಮೋನು ಅಸಮತೋಲನಗಳು ಮತ್ತು ಒತ್ತಡ
  • ಪುರುಷ ಸಂತಾನೋತ್ಪತ್ತಿ ಅಂಗಗಳಿಗೆ ಶಸ್ತ್ರಚಿಕಿತ್ಸೆ

Stay up to date on all the latest ಆರೋಗ್ಯ news
Poll
Ashok Gehlot-Shashi Tharoor

ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಯಾರು ಹೆಚ್ಚು ಸೂಕ್ತರು?


Result
ಅಶೋಕ್ ಗೆಹ್ಲೋಟ್
ಶಶಿ ತರೂರ್

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp