
ಕಣ್ಣು (ಸಂಗ್ರಹ ಚಿತ್ರ)
ನವದೆಹಲಿ: ಬೇಸಿಗೆಯಲ್ಲಿ ಉಷ್ಣ ಹೆಚ್ಚಾಗಿರುವುದರಿಂದ ಕಣ್ಣಿಗೆ ಸೋಂಕು ಹಾಗೂ ಅಲರ್ಜಿಗಳು ಉಂಟಾಗಿ ಹಾನಿಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಈ ಬಾರಿ ಎಂದಿಗಿಂತಲೂ ಹೆಚ್ಚಿನ ತಾಪಮಾನ ದಾಖಲಾಗುತ್ತಿದ್ದು, ಕಣ್ಣಿನ ಆರೋಗ್ಯದತ್ತ ಹೆಚ್ಚು ಗಮನ ನೀಡಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.
ವಿಷನ್ ಐ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ತುಷಾರ್ ಗ್ರೋವರ್ ಮಾತನಾಡಿ, ಸೂಕ್ತ ವೈದ್ಯಕೀಯ ಸಲಹೆಗಳನ್ನು ಪಾಲಿಸದೇ ಇದ್ದಲ್ಲಿ ಅಲರ್ಜಿ, ಸೋಂಕುಗಳು ಹೆಚ್ಚಾಗಲಿವೆ. ಗಾಳಿಯಲ್ಲಿರುವ ಮಾಲಿನ್ಯಕಾರಿ ಅಂಶಗಳು ಹಾಗೂ ಕಿರಿಕಿರಿ ಉಂಟುಮಾಡುವ ಅಂಶಗಳು ಮತ್ತಷ್ಟು ಸವಾಲಾಗಿ ಪರಿಣಮಿಸಲಿದೆ. ಕಣ್ಣಿನ ತುರಿಕೆ, ಕಣ್ಣು ಕೆಂಪಾಗುವುದು ಅಥವಾ ಉರಿಯಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಬೇಸಿಗೆಯಲ್ಲಿ ನಮ್ಮ ಕಣ್ಗಳು ಸೂಕ್ಷ್ಮವಾಗುತ್ತವೆ. ಆದ್ದರಿಂದ ಅವುಗಳನ್ನು ರಕ್ಷಿಸುವುದು ಬಹು ಮುಖ್ಯ. ಕಾಂಟಾಕ್ಟ್ ಲೆನ್ಸ್ ಧರಿಸುವುದು, ಕನ್ನಡಕ ಧರಿಸುವುದೂ ಸಹ ಕಣ್ಣುಗಳನ್ನು ಸುರಕ್ಷಿತವಾಗಿಡಬಲ್ಲದು ಎನ್ನುತ್ತಾರೆ ಡಾ. ಚಿಕಿರ್ಶಾ ಜೈನ್.