ನಿಮ್ಮ ಮಗುವಿಗೆ ಆಗಾಗ ಜ್ವರ ಬರುತ್ತದೆಯೇ? ಜ್ವರ ಬಂದಾಗ ಏನು ಮಾಡಬೇಕು?
ಮನೆಯಲ್ಲಿರುವ ಪುಟ್ಟ ಮಗುವಿಗೆ ಇದ್ದಕ್ಕಿದ್ದಂತೆ ಮೈ ಬಿಸಿಯಾಗುತ್ತದೆ, ತಾಪಮಾನ ಹೆಚ್ಚಾಗಿ ಜ್ವರ ಬರುತ್ತದೆ. ಪೋಷಕರಿಗೆ, ಮನೆಯಲ್ಲಿದ್ದವರಿಗೆ ಆತಂಕ, ಭಯ ಶುರುವಾಗುತ್ತದೆ. ಆಟವಾಡುತ್ತಾ, ಊಟ-ತಿಂಡಿ ಮಾಡಿಕೊಂಡಿದ್ದ ಮಗುವಿಗೆ ಇದ್ದಕ್ಕಿದ್ದಂತೆ ಜ್ವರ ಹೇಗೆ ಬಂತು ಎಂಬ ಚಿಂತೆ ಕಾಡುತ್ತದೆ.
Published: 10th May 2022 02:04 PM | Last Updated: 10th May 2022 02:32 PM | A+A A-

ಸಾಂದರ್ಭಿಕ ಚಿತ್ರ
ಕೊಚ್ಚಿ: ಮನೆಯಲ್ಲಿರುವ ಪುಟ್ಟ ಮಗುವಿಗೆ ಇದ್ದಕ್ಕಿದ್ದಂತೆ ಮೈ ಬಿಸಿಯಾಗುತ್ತದೆ, ತಾಪಮಾನ ಹೆಚ್ಚಾಗಿ ಜ್ವರ ಬರುತ್ತದೆ. ಪೋಷಕರಿಗೆ, ಮನೆಯಲ್ಲಿದ್ದವರಿಗೆ ಆತಂಕ, ಭಯ ಶುರುವಾಗುತ್ತದೆ. ಆಟವಾಡುತ್ತಾ, ಊಟ-ತಿಂಡಿ ಮಾಡಿಕೊಂಡಿದ್ದ ಮಗುವಿಗೆ ಇದ್ದಕ್ಕಿದ್ದಂತೆ ಜ್ವರ ಹೇಗೆ ಬಂತು ಎಂಬ ಚಿಂತೆ ಕಾಡುತ್ತದೆ.
ಇದು ಸೋಂಕಿನಿಂದ ಮಕ್ಕಳಲ್ಲಿ ಬರುವ ಜ್ವರವಾಗಿದ್ದು ನಿರ್ದಿಷ್ಟ ವೈರಸ್ ನಿಂದ ಬರುತ್ತದೆ. ಮನೆಯಲ್ಲಿ ದೊಡ್ಡವರು ಹೊರಗಿನಿಂದ ಬಂದು ವೈರಸ್ ನ್ನು ಅಂಟಿಸಿಕೊಂಡು ಬಂದಿದ್ದರೆ, ದೊಡ್ಡ ಮಕ್ಕಳು ಶಾಲೆಯಿಂದ ವೈರಸ್ ನ್ನು ತಮ್ಮ ದೇಹದಲ್ಲಿ ತಂದಿದ್ದರೆ ಅದು ಮನೆಯ ಇತರ ಸದಸ್ಯರಿಗೆ ರವಾನೆಯಾಗುತ್ತದೆ, ಮುಖ್ಯವಾಗಿ ಮಕ್ಕಳಿಗೆ ಬೇಗನೆ ವೈರಸ್ ತಗಲುತ್ತದೆ.
ವೈರಸ್ ತಗುಲಿ ಜ್ವರ ಬಂದಾಗ ಶೀತ, ಕೆಮ್ಮು ಬರುವುದು ಸಾಮಾನ್ಯ, ಶೀತ ಎರಡು ದಿನಗಳಿಂದ ವಾರದವರೆಗೆ ಇರಬಹುದು. ಆಗ ಪಾರಾಸಿಟಮೊಲ್, ಟಿಎಲ್ ಸಿ ಗಳನ್ನು ನೀಡಬೇಕಾಗುತ್ತದೆ. ಹೀಗೆ ಜ್ವರ ಬಂದರೆ ಅಧಿಕ ತಾಪಮಾನದಿಂದ ಫಿಟ್ಸ್ ತರಹ ಆಗುವುದೂ ಉಂಟು. ವೈದ್ಯರ ಉಪಚಾರದಿಂದ ಕಡಿಮೆ ಮಾಡಬಹುದು. ಆರು ತಿಂಗಳಿನಿಂದ ಆರು ವರ್ಷದ ಮಕ್ಕಳವರೆಗೆ ಇಂತಹ ವೈರಸ್ ಸೋಂಕಿನಿಂದ ಜ್ವರ ಬರುವುದು ಸಾಮಾನ್ಯ.
ಮಕ್ಕಳು ಇತರ ಸೋಂಕುಗಳಿಗೆ ಸಹ ತುತ್ತಾಗುತ್ತಾರೆ. ಬ್ಯಾಕ್ಟೀರಿಯಾ, ವಿಶೇಷವಾಗಿ ನ್ಯುಮೋನಿಯಾ, ಹೊಟ್ಟೆಯ ದೋಷಗಳು, ಚರ್ಮದ ಸೋಂಕುಗಳು, ಮೂತ್ರದ ಸೋಂಕುಗಳು ಮತ್ತು ಮೆನಿಂಜೈಟಿಸ್ನಂತಹ ಗಂಭೀರವಾದ ಸೋಂಕುಗಳಿಗೆ ಸಹ ತುತ್ತಾಗಬಹುದು. ಡೆಂಗ್ಯೂ, ಟೈಫಾಯಿಡ್, ಕೋವಿಡ್, ಟಿಬಿ ಮುಂತಾದ ಸೋಂಕುಗಳೂ ಸಹ ಬರಲಿದ್ದು ಸೂಕ್ತ ವೈದ್ಯೋಪಚಾರ ಸಿಗಬೇಕಾಗುತ್ತದೆ.
ಕೆಲವೊಮ್ಮೆ ಸೋಂಕಿನಿಂದಲ್ಲದೆ ಶೇಕಡಾ 25ರಷ್ಟು ಮಕ್ಕಳವರೆಗೆ ದೀರ್ಘಕಾಲದವರೆಗೆ ಜ್ವರ ಬರಬಹುದು, ಇದು ಅಪಾಯಕಾರಿ, ಬಾಲ್ಯದಲ್ಲಿಯೇ ಕ್ಯಾನ್ಸರ್ ರೋಗದಿಂದ ಜ್ವರ ಬರಬಹುದು, ಸಂಧಿವಾತ ರೋಗದ ಸೂಚಕವಾಗಿರಲೂಬಹುದು.
ದೇಹಲ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ನ್ಯೂನತೆ ಕಂಡುಬಂದರೆ ಸಹ ಜ್ವರ ಬರಬಹುದು. ಪ್ರೌಢಾವಸ್ಥೆಯಲ್ಲಿ ಹಾರ್ಮೋನ್ ಗಳ ವ್ಯತ್ಯಾಸದಿಂದ, ಅಂಗಾಂಶ ರೋಗಗಳು, ವ್ಯಾಸ್ಕುಲೈಟಿಸ್ ಮತ್ತು ಉರಿಯೂತದ ಕರುಳಿನ ಕಾಯಿಲೆಗಳು ಸಹ ಬರಬಹುದು. ಈ ರೋಗಗಳಿಗೆ ಮುಖ್ಯವಾಗಿ ಇಮ್ಯುನೊಸಪ್ರೆಶನ್ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.