ದೀಪಾವಳಿ ಸಮಯದಲ್ಲಿ ನಿಮ್ಮ ಮತ್ತು ಮಕ್ಕಳ ಕಣ್ಣುಗಳ ಬಗ್ಗೆ ಜಾಗ್ರತೆ ವಹಿಸುವುದು ಹೇಗೆ?
ದೀಪಾವಳಿ ಎಂದರೆ ಬೆಳಕಿನ ಹಬ್ಬ. ಪಟಾಕಿ ಸಿಡಿಸುವಾಗ ಕಣ್ಣಿಗೆ ಗಾಯ ಮಾಡಿಕೊಳ್ಳುವ ಮೂಲಕ ಕತ್ತಲಾಗಿಸಿಕೊಳ್ಳುವುದು ಬೇಡ. ಮಕ್ಕಳಿಗಾಗುವ ಕಣ್ಣಿನ ಗಾಯಗಳಲ್ಲಿ ಶೇ 45 ರಷ್ಟು ಮನೆಯಲ್ಲಿಯೇ ಸಂಭವಿಸುತ್ತವೆ. ಈ ಪೈಕಿ ಪಟಾಕಿಗಳಿಂದ ಶೇ 10 ರಷ್ಟು ಹೆಚ್ಚಾಗುತ್ತದೆ.
Published: 22nd October 2022 04:55 PM | Last Updated: 22nd October 2022 06:08 PM | A+A A-

ಪ್ರಾತಿನಿಧಿಕ ಚಿತ್ರ
ಚೆನ್ನೈ: ದೀಪಾವಳಿ ಎಂದರೆ ಬೆಳಕಿನ ಹಬ್ಬ. ಪಟಾಕಿ ಸಿಡಿಸುವಾಗ ಕಣ್ಣಿಗೆ ಗಾಯ ಮಾಡಿಕೊಳ್ಳುವ ಮೂಲಕ ಕತ್ತಲಾಗಿಸಿಕೊಳ್ಳುವುದು ಬೇಡ. ಮಕ್ಕಳಿಗಾಗುವ ಕಣ್ಣಿನ ಗಾಯಗಳಲ್ಲಿ ಶೇ 45 ರಷ್ಟು ಮನೆಯಲ್ಲಿಯೇ ಸಂಭವಿಸುತ್ತವೆ. ಈ ಪೈಕಿ ಪಟಾಕಿಗಳಿಂದ ಶೇ 10 ರಷ್ಟು ಹೆಚ್ಚಾಗುತ್ತದೆ.
ರಾಜನ್ ಐ ಕೇರ್ ಆಸ್ಪತ್ರೆಯ ಅಧ್ಯಕ್ಷ ಮತ್ತು ವೈದ್ಯಕೀಯ ನಿರ್ದೇಶಕ ಡಾ. ಮೋಹನ್ ರಾಜನ್ ಅವರ ಪ್ರಕಾರ, ಕಳೆದ ಕೆಲವು ವರ್ಷಗಳಿಂದ ಕಣ್ಣಿಗೆ ಪಟಾಕಿಗಳಿಂದಾಗುವ ಗಾಯಗಳು ಹೆಚ್ಚಾಗಿವೆ. ಮುಖ್ಯವಾಗಿ ಪೋಷಕರ ನಿರ್ಲಕ್ಷ್ಯ ಮತ್ತು ಪಟಾಕಿಗಳನ್ನು ಸಿಡಿಸುವಾಗ ಪ್ರೋಟೋಕಾಲ್‌ಗಳನ್ನು ಅನುಸರಿಸದಿರುವುದೇ ಪ್ರಮುಖ ಕಾರಣ ಎನ್ನುತ್ತಾರೆ.
ಆಸ್ಪತ್ರೆಗೆ ಬರುವ ಮಕ್ಕಳ ಪೈಕಿ ಕಾರ್ನಿಯಲ್ ಸವೆತಗಳಂತಹ ಸಣ್ಣಪುಟ್ಟ ಗಾಯಗಳಿಂದ ಹಿಡಿದು, ಆಘಾತಕಾರಿ ಕಣ್ಣಿನ ಪೊರೆ, ಕಾರ್ನಿಯಲ್ ಟಿಯರ್, ರೆಟಿನಾಲ್ ಬೇರ್ಪಡುವಿಕೆಯಂತಹ ಪ್ರಮುಖ ಗಾಯಗಳಾಗಿರುವುದು ಕಂಡುಬರುತ್ತದೆ. 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿಯೇ ಪಟಾಕಿಯಿಂದ ಗಾಯಗಳು ಸಂಭವಿಸುತ್ತವೆ.
ಇಂತಹ ಒಂದು ಗುಂಪಿನ ನಿರ್ಲಕ್ಷ್ಯದಿಂದ ಅಮಾಯಕ ಪಾದಚಾರಿಗಳೂ ತೊಂದರೆಗೀಡಾಗುತ್ತಿರುವುದು ವಿಷಾದನೀಯ. ಈ ವಯಸ್ಸಿನವರಿಗೆ ಆಗುವ ಕಣ್ಣಿನ ಗಾಯಗಳಿಂದ ವ್ಯಕ್ತಿತ್ವ ಅಸ್ವಸ್ಥತೆಗಳಿಗೂ ಕಾರಣವಾಗುತ್ತದೆ. ಇದು ಭವಿಷ್ಯದ ಯಶಸ್ಸಿನ ಅವಕಾಶಗಳಿಗೆ ತಡೆಗೋಡೆಯನ್ನು ಸೃಷ್ಟಿಸುತ್ತದೆ.
ಇದನ್ನೂ ಓದಿ: ಕಣ್ಣಿನ ಆರೋಗ್ಯ ಮತ್ತು ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳುವುದು ಹೇಗೆ? 20-20-20 ನಿಯಮ ಅನುಸರಿಸಿ...
ರಾಕೆಟ್ ಗಾಯಗಳು ಅತ್ಯಂತ ಕೆಟ್ಟವು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ, ಅವು ಕಣ್ಣುಗುಡ್ಡೆಗಳನ್ನು ಛಿದ್ರಗೊಳಿಸುತ್ತವೆ ಮತ್ತು ರಕ್ಷಿಸಲು ತುಂಬಾ ಕಷ್ಟ. ಸ್ಫೋಟಗೊಳ್ಳುವ ಗಾಯಗಳು ಬಾಹ್ಯ ಸುಟ್ಟಗಾಯಗಳಿಗೆ ಕಾರಣವಾಗಬಹುದು, ಇದರಲ್ಲಿ ಕೆಲವು ಲೋಹೀಯ ಭಾಗಗಳು ಕಣ್ಣನ್ನು ಪ್ರವೇಶಿಸಬಹುದು ಮತ್ತು ಹಾನಿಗೊಳಿಸಬಹುದು.
ಪಟಾಕಿ ಸಿಡಿಸುವಾಗ ಏನು ಮಾಡಬೇಕು?
• ಯಾವಾಗಲೂ ಪಟಾಕಿಗಳನ್ನು ತೆರೆದ ಜಾಗದಲ್ಲಿ ಸಿಡಿಸಿ (ನೆಲ ಅಥವಾ ಮೈದಾನ ಸೂಕ್ತ).
• ಮನೆಯೊಳಗೆ ವಿಶೇಷವಾಗಿ ಅಡುಗೆಮನೆಯಲ್ಲಿ ಪಟಾಕಿಗಳನ್ನು ಸಿಡಿಸಬೇಡಿ.
• ಯಾವಾಗಲೂ ಹಿರಿಯರ ಮೇಲ್ವಿಚಾರಣೆಯಲ್ಲಿ ಸಿಡಿಸಿ.
• ಯಾವಾಗಲೂ ಉತ್ತಮ ಗುಣಮಟ್ಟದ ಪಟಾಕಿಗಳನ್ನು ಖರೀದಿಸಿ.
• ಪಟಾಕಿ ಸಿಡಿಸುವಾಗ ರಕ್ಷಣಾತ್ಮಕ ಪಾದರಕ್ಷೆಗಳನ್ನು ಧರಿಸಿ.
• ಪಟಾಕಿಗಳನ್ನು ಸಿಡಿಸಲು ಯಾವಾಗಲೂ ಉದ್ದವಾದ ಕಡ್ಡಿಯಿಂದ ಬೆಂಕಿ ಹಚ್ಚಿ
• ಪಟಾಕಿ ಸಿಡಿಸುವಾಗಲೆಲ್ಲಾ ನೀರಿನಂತಹ ಸಾಕಷ್ಟು ಭದ್ರತಾ ಕ್ರಮಗಳನ್ನು ಹೊಂದಿರಿ. ಸಾಧ್ಯವಾದರೆ ಮರಳು ಮತ್ತು ಅಗ್ನಿಶಾಮಕ.
• ಪಟಾಕಿಗಳನ್ನು ಹೊತ್ತಿಸಿದ ನಂತರ ಸುರಕ್ಷಿತ ದೂರಕ್ಕೆ ಹಿಂತಿರುಗಿ.
• ಪಟಾಕಿಗಳನ್ನು ಸಿಡಿಸುವಾಗ ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ.
• ತುರ್ತು ಸಂದರ್ಭಗಳಲ್ಲಿ ತಕ್ಷಣ ಹತ್ತಿರದ ಕಣ್ಣಿನ ತಜ್ಞರನ್ನು ಸಂಪರ್ಕಿಸಿ.
ಇದನ್ನೂ ಓದಿ: ಬೆಂಗಳೂರಿನಲ್ಲಿ ದೀಪಾವಳಿ ಸಮಯದಲ್ಲಿ ದಿನಕ್ಕೆ 2 ತಾಸು ಮಾತ್ರ ಪಟಾಕಿ ಹಚ್ಚಲು ಅವಕಾಶ: ಸುತ್ತೋಲೆ
ಪಟಾಕಿ ಸಿಡಿಸುವಾಗ ಏನೆಲ್ಲ ಮಾಡಬಾರದು?
• ಸಡಿಲವಾದ ಬಟ್ಟೆಗಳನ್ನು ಧರಿಸಬೇಡಿ.
• ಪಟಾಕಿಗಳನ್ನು ನಿಮ್ಮ ಕೈಯಲ್ಲಿ ಹಿಡಿದುಕೊಳ್ಳಬೇಡಿ
• ರಾಕೆಟ್‌ಗಳು ಮತ್ತು ಆಟಂ ಬಾಂಬ್‌ಗಳಂತಹ ಹಾನಿಕಾರಕ ಪಟಾಕಿಗಳನ್ನು ಆಯ್ಕೆ ಮಾಡಬೇಡಿ.
• ಈಗಾಗಲೇ ಹೊತ್ತಿ ಉರಿಯುತ್ತಿರುವ ಆದರೆ ಸಿಡಿಯದೇ ಇರುವ ಪಟಾಕಿಗಳನ್ನು ಮತ್ತೆ ಹೊತ್ತಿಸಲು ಪ್ರಯತ್ನಿಸಬೇಡಿ.
• ವಾಹನಗಳು ಅಥವಾ ಯಾವುದೇ ದಹನಕಾರಿ ವಸ್ತುಗಳ ಬಳಿ ಸಿಡಿಸಬೇಡಿ.