ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನಿಮಗೆ ಗೊತ್ತೇ... ಆರೋಗ್ಯಕ್ಕಾಗಿ ಆಲ್ಕೋಹಾಲ್ ಸೇವನೆಗೆ ಯಾವುದೇ ಸುರಕ್ಷತೆಯ ಮಿತಿ ಇಲ್ಲ!

ಆಲ್ಕೋಹಾಲ್ ಸೇವನೆಗೆ ಯಾವುದೇ ಸುರಕ್ಷತೆಯ ಮಿತಿಯಿಲ್ಲ ಮತ್ತು ಯಾವುದೇ ಪ್ರಮಾಣದ ಮದ್ಯಪಾನ ಒಬ್ಬರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿರುವ ದಿ ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್ ಜರ್ನಲ್‌ನಲ್ಲಿ ಹೇಳಲಾಗಿದೆ.

ನವದೆಹಲಿ: ಆಲ್ಕೋಹಾಲ್ ಸೇವನೆಗೆ ಯಾವುದೇ ಸುರಕ್ಷತೆಯ ಮಿತಿಯಿಲ್ಲ ಮತ್ತು ಯಾವುದೇ ಪ್ರಮಾಣದ ಮದ್ಯಪಾನ ಒಬ್ಬರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿರುವ ದಿ ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್ ಜರ್ನಲ್‌ನಲ್ಲಿ ಹೇಳಲಾಗಿದೆ.

ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಕಲ್ನಾರಿನ ಜೊತೆಗೆ ಆಲ್ಕೋಹಾಲ್, ವಿಕಿರಣ ಮತ್ತು ತಂಬಾಕು, ಹೆಚ್ಚಿನ ಅಪಾಯದ ಗುಂಪು 1 ಕಾರ್ಸಿನೋಜೆನ್ ಎಂದು ವರ್ಗೀಕರಿಸಿದೆ. ಇದು ವಿಶ್ವಾದ್ಯಂತ ಕ್ಯಾನ್ಸರ್ ಗೆ ಕೊಡುಗೆ ನೀಡುತ್ತದೆ.  

ಅತ್ಯಂತ ಸಾಮಾನ್ಯವಾದ ಕರುಳಿನ ಕ್ಯಾನ್ಸರ್ ಮತ್ತು ಸ್ತ್ರೀ ಸ್ತನ ಕ್ಯಾನ್ಸರ್‌ನಂತಹ ಪ್ರಕಾರಗಳನ್ನು ಒಳಗೊಂಡಂತೆ ಕನಿಷ್ಠ ಏಳು ವಿಧದ ಕ್ಯಾನ್ಸರ್‌ಗಳನ್ನು ಆಲ್ಕೋಹಾಲ್ ಉಂಟುಮಾಡುತ್ತದೆ ಎಂದು ಸಂಸ್ಥೆ ಈ ಹಿಂದೆ ಕಂಡುಹಿಡಿದಿತ್ತು. ಇದು ಅನ್ನನಾಳ, ಯಕೃತ್ತು ಮತ್ತು ಕೊಲೆಸ್ಟ್ರಾರ್ ಕ್ಯಾನ್ಸರ್‌ಗಳೊಂದಿಗೆ ಸಹ ಸಂಬಂಧಿಸಿದೆ. ಆಲ್ಕೋಹಾಲ್ ಜೈವಿಕ ಕಾರ್ಯವಿಧಾನಗಳ ಮೂಲಕ ಕ್ಯಾನ್ಸರ್ ಅನ್ನು ಉಂಟುಮಾಡುತ್ತದೆ, ಆಲ್ಕೋಹಾಲ್ ಹೊಂದಿರುವ ಯಾವುದೇ ಪಾನೀಯವು ಕ್ಯಾನ್ಸರ್ ರೋಗ ಉಂಟುಮಾಡುವ ಅಪಾಯವಿರುತ್ತದೆ.

ಯುರೋಪಿಯನ್ ಪ್ರದೇಶಗಳಲ್ಲಿ ಕ್ಯಾನ್ಸರ್ ಸಾವಿಗೆ ಕಾರಣವಾಗುತ್ತಿದೆ. ಸ್ವಲ್ಪ ಪ್ರಮಾಣದ ಆಲ್ಕೋಹಾಲ್ ಸೇವನೆ, ಅಂದರೆ ಪ್ರತಿದಿನ 20 ಗ್ರಾಂಗಿಂತ ಕಡಿಮೆ ಶುದ್ಧ ಆಲ್ಕೋಹಾಲ್ ತೆಗೆದುಕೊಂಡರೂ 2017ರಲ್ಲಿ 23,000 ಹೊಸ ಕ್ಯಾನ್ಸರ್ ಪ್ರಕರಣಗಳಿಗೆ ಕಾರಣವಾಗಿತ್ತು. ಇದರಲ್ಲಿ ಅರ್ಧದಷ್ಟು ಭಾಗ ಆಲ್ಕೋಹಾಲ್-ಸಂಬಂಧಿತ ಕ್ಯಾನ್ಸರ್‌ಗಳಾಗಿದ್ದರೆ, ಸರಿಸುಮಾರು ಶೇ. 50 ರಷ್ಟು ಮಹಿಳಾ ಸ್ತನ ಕ್ಯಾನರ್ ಪ್ರಕರಣಗಳಿದ್ದವು ಎಂದು ಹೇಳಲಾಗಿದೆ. "ಅನಾರೋಗ್ಯ ಅಥವಾ ಹಾನಿಯ ಅಪಾಯವಿಲ್ಲ ಎಂಬ ವೈಜ್ಞಾನಿಕ ಪುರಾವೆಗಳಿದ್ದರೆ ಮಾತ್ರ ಆಲ್ಕೊಹಾಲ್ ಸೇವನೆಯ ಸುರಕ್ಷಿತ ಮಟ್ಟವನ್ನು ವ್ಯಾಖ್ಯಾನಿಸಬಹುದು ಎಂದು ಹೇಳಿಕೆಯಲ್ಲಿ ಹೇಳಲಾಗಿದೆ. 

ಹೃದಯ ರೋಗದ ಸಮಸ್ಯೆ ಟೈಪ್ 2 ಡಯಾಬಿಟಿಸ್ ಕ್ಯಾನ್ಸರ್ ಅಪಾಯಕ್ಕೆ ಆಲ್ಕೋಹಾಲ್ ಪರಿಣಾಮ ಬೀರುತ್ತದೆ ಎಂಬುದರ ಸಂಬಂಧ ಯಾವುದೇ ಅಧ್ಯಯನ ಸಾಬೀತುಪಡಿಸಿಲ್ಲ. ಆದರೆ, ಅತಿ ಹೆಚ್ಚಿನ ಕುಡಿತವು ಹೃದಯ ಸಮಸ್ಯೆ ಅಪಾಯಕ್ಕೆ ಕಾರಣ ಎಂಬ ಪುರಾವೆ ಇವೆ. ಕೆಲವು ಅಧ್ಯಯನಗಳು ಸೂಚಿಸಿದ ಅನುಸಾರ ಆಲ್ಕೋಹಾಲ್ ಸೇವನೆಯ ಸಂಭಾವ್ಯ ರಕ್ಷಣಾತ್ಮಕ ಪರಿಣಾಮಗಳು, ಆಯ್ಕೆ ಮಾಡಿದ ಹೋಲಿಕೆ ಗುಂಪುಗಳು ತ್ತು ಬಳಸಿದ ಸಂಖ್ಯಾಶಾಸ್ತ್ರೀಯ ವಿಧಾನಗಳೊಂದಿಗೆ ಸಂಪರ್ಕ ಹೊಂದಿದ್ದು, ಇತರ ಸಂಬಂಧಿತ ಅಂಶಗಳನ್ನು ಪರಿಗಣಿಸಲ್ಲ ಎಂದು ಯುರೋಪ್ ಸಲಹಾ ಮಂಡಳಿಯ ವಿಶ್ವ ಆರೋಗ್ಯ ಸಂಸ್ಥೆ ಪ್ರಾದೇಶಿಕ ಜುರ್ಗೆನ್ ರೆಹ್ಮ್ ಹೇಳಿದ್ದಾರೆ. 

ಯುರೋಪಿಯನ್ ಪ್ರದೇಶ ಅತಿ ಹೆಚ್ಚು ಆಲ್ಕೋಹಾಲ್ ಸೇವನೆಯ ಮಟ್ಟವನ್ನು ಹೊಂದಿದೆ ಮತ್ತು 200 ಮಿಲಿಯನ್‌ಗಿಂತಲೂ ಹೆಚ್ಚು ಜನರು ಆಲ್ಕೋಹಾಲ್ ಸೇವನೆಯಿಂದ ಕ್ಯಾನ್ಸರ್ ಹೊಂದುವ ಅಪಾಯವನ್ನು ಹೊಂದಿದ್ದಾರೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. 

ಆಲ್ಕೋಹಾಲ್ ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂಬ ಭಾವನೆ ಬಹುತೇಕ ದೇಶದ ಜನರಲ್ಲಿ ಸೃಷ್ಟಿಯಾಗಿದೆ ಎನ್ನುತ್ತಾರೆ ಕ್ಯಾರಿನಾ ಫೆರೆರಿಯಾ ಬೊರ್ಗಸ್. ತಂಬಾಕುಗಳಲ್ಲಿ ಅಪಾಯಕಾರಿ ಎಂಬ ಸಂದೇಶ ನೀಡುವಂತೆ ಆಲ್ಕೋಹಾಲ್ ಹೊಂದಿರುವ ಪಾನೀಯಗಳಲ್ಲೂ ಸಂದೇಶ ನೀಡಬೇಕು ಎಂಬುದನ್ನು ಅವರು ತಿಳಿಸುತ್ತಾರೆ.

Related Stories

No stories found.

Advertisement

X
Kannada Prabha
www.kannadaprabha.com