ಬಿಜೆಪಿ
ಬಿಜೆಪಿ

ಲಿಂಗಾಯತರ ಓಲೈಕೆಯಲ್ಲಿ ವಿಫಲವಾದ ಬಿಜೆಪಿ: ಫಲ ನೀಡದ ಕೇಸರಿ ಪಡೆಯ ಮೀಸಲಾತಿ ಹೆಚ್ಚಳ ತಂತ್ರ

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಆಘಾತಕಾರಿ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಕುಳಿತಾಗ ಒಂದು ವಿಷಯ ಸ್ಪಷ್ಟವಾಗಿದೆ.2008 ಮತ್ತು 2018ರಲ್ಲಿ ಬೆಂಬಲ ಸಿಕ್ಕಂತೆ ಲಿಂಗಾಯತ ಮತ ಬ್ಯಾಂಕ್ ಈ ಬಾರಿ ಬಿಜೆಪಿಗೆ ಒಲಿದಿಲ್ಲ.  

ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಆಘಾತಕಾರಿ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಕುಳಿತಾಗ ಒಂದು ವಿಷಯ ಸ್ಪಷ್ಟವಾಗಿದೆ.2008 ಮತ್ತು 2018ರಲ್ಲಿ ಬೆಂಬಲ ಸಿಕ್ಕಂತೆ ಲಿಂಗಾಯತ ಮತ ಬ್ಯಾಂಕ್ ಈ ಬಾರಿ ಬಿಜೆಪಿಗೆ ಒಲಿದಿಲ್ಲ.  

ಲಿಂಗಾಯತರು ಕರ್ನಾಟಕರಾಜ್ಯದ ಒಟ್ಟು ಜನಸಂಖ್ಯೆಯ ಸುಮಾರು 17-20 ಪ್ರತಿಶತವನ್ನು ಹೊಂದಿದ್ದಾರೆ. ಪ್ರತಿ ಚುನಾವಣೆಯಲ್ಲಿ ಪ್ರಚಂಡ ಪ್ರಭಾವವನ್ನು ಹೊಂದಿದ್ದಾರೆ. 2008ರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಕೊಟ್ಟ ಮಾತಿನಂತೆ ಅಧಿಕಾರ ಹಸ್ತಾಂತರಿಸದೆ ಜೆಡಿಎಸ್ ವಂಚಿಸಿದೆ ಎಂದು ಸಮುದಾಯದವರ ಮುಂದೆ ಕಣ್ಣೀರಿಟ್ಟಿದ್ದರು. ಆಗ ಸಮುದಾಯವು ಅವರನ್ನು ಸಂಪೂರ್ಣವಾಗಿ ಬೆಂಬಲಿಸಿತು. 2018 ರಲ್ಲಿ ಕಾಂಗ್ರೆಸ್ ವಿರುದ್ಧ ವೀರಶೈವರು ಮತ್ತು ಲಿಂಗಾಯತರನ್ನು ಒಡೆಯುವ ಆರೋಪ ಕೇಳಿಬಂದು ಬಿಜೆಪಿಗೆ ಉತ್ಸಾಹದಿಂದ ಲಿಂಗಾಯತ ಸಮುದಾಯದವರು ಮತ ಹಾಕಿದರು. 

ಈ ಬಾರಿ ವೀರಶೈವ-ಲಿಂಗಾಯತರಿಗೆ ಬಿಜೆಪಿ ನೀಡಿದ 69 ಟಿಕೆಟ್‌ಗಳ ಪೈಕಿ 18 ಮಂದಿ ಮಾತ್ರ ಗೆದ್ದಿದ್ದಾರೆ. ಮಾಜಿ ಸಚಿವ ವಿ.ಸೋಮಣ್ಣ ಅವರು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಸೋತಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯದರ್ಶಿ ರೇಣುಕಾ ಪ್ರಸನ್ನ, ‘ಪಂಗಡ ಮೀಸಲಾತಿ ನೀಡುವ ಭರವಸೆಯನ್ನು ಪಕ್ಷ ನೀಡಿತ್ತು, ಆದರೆ ಅದು ಜಾರಿಯಾಗಲಿಲ್ಲ, ಮೀಸಲಾತಿ ಎಂದು ಜೇನುತುಪ್ಪದ ಆಸೆ ತೋರಿಸಿ ವಿಫಲರಾದರು. ವೀರಶೈವ ಲಿಂಗಾಯತ ನಾಯಕತ್ವಕ್ಕೆ ಧಕ್ಕೆ ತಂದ ಆರೋಪದ ಜೊತೆಗೆ ಸ್ಥಳೀಯ ಸಮಸ್ಯೆಗಳೂ ಬಿಜೆಪಿಗೆ ಬೆಲೆ ತೆತ್ತಿವೆ. 

ರಾಜಕೀಯ ವಿಶ್ಲೇಷಕ ಬಿ.ಎಸ್.ಮೂರ್ತಿ, ರಾಜ್ಯದಲ್ಲಿ ಲಿಂಗಾಯತರು ಶೇ.20ರಷ್ಟಿದ್ದು, ಮತದಾರರನ್ನು ಸಂತೃಪ್ತಿ ಪಡಿಸುವುದು ಹೇಗೆಂದು ಬಿಜೆಪಿಗೆ ತಿಳಿದಿಲ್ಲ. ಕಾಂಗ್ರೆಸ್‌ನಲ್ಲಿ 46 ವೀರಶೈವ-ಲಿಂಗಾಯತರಲ್ಲಿ 34 ಮಂದಿ ಗೆದ್ದಿದ್ದಾರೆ, ಅದು ಶೇಕಡಾ 74ರ ಸ್ಟ್ರೈಕ್ ರೇಟ್ ಆಗಿದೆ ಎಂದರು. 

1967ರಲ್ಲಿ ಒಟ್ಟು ವೀರಶೈವ-ಲಿಂಗಾಯತ ಶಾಸಕರ ಸಂಖ್ಯೆ 90 ಆಗಿತ್ತು. 1972ರಲ್ಲಿ 77 ಮತ್ತು 1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದಾಗ 77 ಇತ್ತು. ನಂತರ ಇತರೆ ಸಮುದಾಯಗಳು ಸೆಳೆದುಕೊಂಡವು. 1989ರಲ್ಲಿ ಕಾಂಗ್ರೆಸ್ ತನ್ನ ಅತ್ಯಧಿಕ 179 ಸ್ಥಾನಗಳನ್ನು ಗೆದ್ದಾಗ 41 ವೀರಶೈವ ಲಿಂಗಾಯತ ಶಾಸಕರಿದ್ದರು.

Related Stories

No stories found.

Advertisement

X
Kannada Prabha
www.kannadaprabha.com