ಕರ್ನಾಟಕ ಚುನಾವಣೆ ಫಲಿತಾಂಶ: ಕಾಂಗ್ರೆಸ್ ಗೆದ್ದಿದ್ದು, ಪ್ರಧಾನಿ ಸೋತಿರುವುದು ಖಚಿತ- ಜೈರಾಮ್ ರಮೇಶ್

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯುವ ಸಾಧ್ಯತೆಯಿದೆ ಎಂದು ಆರಂಭಿಕ ಟ್ರೆಂಡ್‌ ಹೇಳುತ್ತಿದ್ದು, ಕಾಂಗ್ರೆಸ್ ಗೆದ್ದಿದೆ ಮತ್ತು ಬಿಜೆಪಿ ತನ್ನ ಚುನಾವಣಾ ಪ್ರಚಾರವನ್ನು ಮೋದಿಯನ್ನು ಮುಂದಿಟ್ಟುಕೊಂಡು ಮಾಡಿದರೂ ಕೂಡ ಪ್ರಧಾನಿ ನರೇಂದ್ರ ಮೋದಿ 'ಸೋಲು' ಈಗ ಖಚಿತವಾಗಿದೆ ಎಂದು ಪಕ್ಷವು ಶನಿವಾರ ಹೇಳಿದೆ. 
ಜೈರಾಂ ರಮೇಶ್
ಜೈರಾಂ ರಮೇಶ್

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯುವ ಸಾಧ್ಯತೆಯಿದೆ ಎಂದು ಆರಂಭಿಕ ಟ್ರೆಂಡ್‌ ಹೇಳುತ್ತಿದ್ದು, ಕಾಂಗ್ರೆಸ್ ಗೆದ್ದಿದೆ ಮತ್ತು ಬಿಜೆಪಿ ತನ್ನ ಚುನಾವಣಾ ಪ್ರಚಾರವನ್ನು ಮೋದಿಯನ್ನು ಮುಂದಿಟ್ಟುಕೊಂಡು ಮಾಡಿದರೂ ಕೂಡ ಪ್ರಧಾನಿ ನರೇಂದ್ರ ಮೋದಿ 'ಸೋಲು' ಈಗ ಖಚಿತವಾಗಿದೆ ಎಂದು ಪಕ್ಷವು ಶನಿವಾರ ಹೇಳಿದೆ. 

ಚುನಾವಣಾ ಆಯೋಗದ ಟ್ರೆಂಡ್‌ಗಳ ಪ್ರಕಾರ, ಕರ್ನಾಟಕದಲ್ಲಿ ಕಾಂಗ್ರೆಸ್ 117 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 75 ರಲ್ಲಿ ಮುಂದಿದೆ. 2024ರ ಸಂಸತ್ತಿನ ಚುನಾವಣೆಗೆ ಮುಂಚಿತವಾಗಿ ಎರಡೂ ಪಕ್ಷಗಳಿಗೆ ಕರ್ನಾಟಕ ಚುನಾವಮೆ ಸೆಮಿಫೈನಲ್ ಎಂದೇ ಪರಿಗಣಿಸಲಾಗಿತ್ತು. 

'ಕರ್ನಾಟಕದಲ್ಲಿ ಫಲಿತಾಂಶ ದೃಢವಾಗುತ್ತಿದ್ದಂತೆ, ಕಾಂಗ್ರೆಸ್ ಗೆದ್ದು ಪ್ರಧಾನಿ ಸೋಲುವುದು ಖಚಿತವಾಗಿದೆ. ಬಿಜೆಪಿಯು ತನ್ನ ಚುನಾವಣಾ ಪ್ರಚಾರವನ್ನು ಪ್ರಧಾನಿಯನ್ನಿಟ್ಟುಕೊಂಡು ಮತ್ತು ರಾಜ್ಯಕ್ಕೆ ಅವರ 'ಆಶೀರ್ವಾದ' ಬೇಕು ಎನ್ನುವ ವಿಚಾರವನ್ನಿಟ್ಟುಕೊಂಡು ಮಾಡಿತ್ತು. ಆದರೆ, ಅದನ್ನು ನಿರ್ಣಾಯಕವಾಗಿ ತಿರಸ್ಕರಿಸಲಾಗಿದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಜೀವನೋಪಾಯ ಮತ್ತು ಆಹಾರ ಭದ್ರತೆ, ಬೆಲೆ ಏರಿಕೆ, ರೈತರ ಸಂಕಷ್ಟ, ವಿದ್ಯುತ್ ಪೂರೈಕೆ, ನಿರುದ್ಯೋಗ ಮತ್ತು ಸರ್ಕಾರದ ಭ್ರಷ್ಟಾಚಾರ ಸೇರಿದಂತೆ ಸ್ಥಳೀಯ ಸಮಸ್ಯೆಗಳ ಮೇಲೆ ಕಾಂಗ್ರೆಸ್ ಈ ಚುನಾವಣೆಗಳನ್ನು ಎದುರಿಸಿದೆ ಎಂದು ಅವರು ಹೇಳಿದರು.

'ಪ್ರಧಾನಿ ವಿಭಜನೆಯ ಬಗ್ಗೆ ಮಾತನಾಡಿದರು ಮತ್ತು ಧ್ರುವೀಕರಣಕ್ಕೆ ಪ್ರಯತ್ನಿಸಿದರು. ಕರ್ನಾಟಕದ ಜನರು ನೀಡಿರುವ ಮತ ಬೆಂಗಳೂರಿನಲ್ಲಿ ಸಾಮಾಜಿಕ ಸಾಮರಸ್ಯದೊಂದಿಗೆ ಆರ್ಥಿಕ ಬೆಳವಣಿಗೆಯನ್ನು ಸಂಯೋಜಿಸುವ ಎಂಜಿನ್‌ಗೆ ಆಗಿದೆ' ಎಂದು ರಮೇಶ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com