ಕರ್ನಾಟಕದಲ್ಲಿ ಬಿಜೆಪಿ ಸೋಲು: ವಿರೋಧ ಪಕ್ಷಗಳ ರಾಷ್ಟ್ರ ನಾಯಕರು ನೀಡಿದ ಪ್ರತಿಕ್ರಿಯೆ ಏನೇನು ಓದಿ...

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸೋಲನ್ನು ರಾಷ್ಟ್ರಮಟ್ಟದಲ್ಲಿ ನಾಯಕರು ಕೇಂದ್ರದ ಮೋದಿ ಸರ್ಕಾರಕ್ಕೆ ಹೋಲಿಸಿ ಹೇಳಿಕೆ ನೀಡುವುದು, ಟ್ವೀಟ್ ಮಾಡುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ, ಕೋಲ್ಕತ್ತಾ, ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸೋಲನ್ನು ರಾಷ್ಟ್ರಮಟ್ಟದಲ್ಲಿ ನಾಯಕರು ಕೇಂದ್ರದ ಮೋದಿ ಸರ್ಕಾರಕ್ಕೆ ಹೋಲಿಸಿ ಹೇಳಿಕೆ ನೀಡುವುದು, ಟ್ವೀಟ್ ಮಾಡುತ್ತಿದ್ದಾರೆ. ಮೋದಿ ಸರ್ಕಾರದ ದುರಾಡಳಿತ, ರಾಹುಲ್ ಗಾಂಧಿ ಮೇಲೆ ನಿರಂತರ ದಬ್ಬಾಳಿಕೆ, ಬೆಲೆ ಏರಿಕೆ, ನಿರುದ್ಯೋಗಗಳಿಂದ ಕರ್ನಾಟಕ ಜನತೆ ಬೇಸತ್ತು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿ, ಬದಲಾವಣೆಯ ಪರವಾಗಿ ತಮ್ಮ ನಿರ್ಣಾಯಕ ಜನಾದೇಶಕ್ಕಾಗಿ ಕರ್ನಾಟಕದ ಜನತೆಗೆ ನನ್ನ ನಮಸ್ಕಾರಗಳು, ವಿವೇಚನಾರಹಿತ ನಿರಂಕುಶ ಮತ್ತು ಬಹುಸಂಖ್ಯಾತ ರಾಜಕೀಯ ನಾಶವಾಗಿದೆ. ಜನರು ಬಹುತ್ವ ಮತ್ತು ಪ್ರಜಾಪ್ರಭುತ್ವ ಶಕ್ತಿಗಳನ್ನು ಗೆಲ್ಲಲು ಬಯಸಿದಾಗ, ಪ್ರಾಬಲ್ಯ ಸಾಧಿಸಲು ಯಾವುದೇ ಕೇಂದ್ರ ಆಡಳಿತವು ಅವರ ಸ್ವಾಭಾವಿಕತೆಯನ್ನು ನಿಗ್ರಹಿಸಲು ಸಾಧ್ಯವಿಲ್ಲ. ಇದು ನೈತಿಕ ಕಥೆಯ ಸಾರಾಂಶವಾಗಿದ್ದು, ನಾಳೆಗೆ ಪಾಠವಾಗಿದೆ ಎಂದು ಬರೆದುಕೊಂಡಿದ್ದಾರೆ. 

ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು 'ಭರವಸೆಯ ಕಿರಣ' ಎಂದು ಬಣ್ಣಿಸಿದ್ದಾರೆ. ದೇಶದ ಉಳಿದ ಭಾಗಗಳು ಸಹ 'ಕೋಮು ರಾಜಕೀಯ'ವನ್ನು ತಿರಸ್ಕರಿಸಿ ಅದರ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಮತ ಚಲಾಯಿಸುತ್ತಾರೆ ಎಂದು ಆಶಿಸುತ್ತೇನೆ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ತಮ್ಮ ಅಭ್ಯಾಸದಂತೆ ಪರಿಸ್ಥಿತಿಯನ್ನು ಕೋಮುವಾದ ಮಾಡಲು ಪ್ರಯತ್ನಿಸಿದರು. ಅವರು ಭಜರಂಗಬಲಿ, ಹಿಂದೂ-ಮುಸ್ಲಿಂನ್ನು ಸಹ ಪ್ರವಚನಕ್ಕೆ ತಂದರು. ಪ್ರಧಾನಮಂತ್ರಿಯವರು ಧಾರ್ಮಿಕ ನೆಲೆಯಲ್ಲಿ ಪ್ರವಚನವನ್ನು ತೆಗೆದುಕೊಳ್ಳಲು ಪ್ರಯತ್ನಿಸಿದರು. ಅದರ ಹೊರತಾಗಿಯೂ, ಜನರು ಈ ಸಮಸ್ಯೆಗಳನ್ನು ಬದಿಗಿಟ್ಟು ಕಾಂಗ್ರೆಸ್ ತನ್ನ ಪ್ರಚಾರವನ್ನು ನಡೆಸಿದ ಅಭಿವೃದ್ಧಿಯ ವಿಷಯವನ್ನು ಆರಿಸಿಕೊಂಡರು.

ಕರ್ನಾಟಕ ಚುನಾವಣೆಯಲ್ಲಿ ತನ್ನ ಫಲಿತಾಂಶ ನೋಡಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಗೆ ಅನುಮತಿ ನೀಡುವ ಧೈರ್ಯ ಬಿಜೆಪಿಗೆ ಯಾವುದೇ ರೀತಿಯಲ್ಲಿ ಇಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ (NC) ನಾಯಕ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ ಅದ್ಭುತ ಗೆಲುವಿಗೆ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆಗಳು. ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದು, ಪ್ರಧಾನ ತನಿಖಾ ಸಂಸ್ಥೆಗಳ ದುರ್ಬಳಕೆ, ಹಿಂದಿ ಹೇರಿಕೆ, ಅವ್ಯಾಹತ ಭ್ರಷ್ಟಾಚಾರ ಇವೆಲ್ಲವೂ ಮತದಾನದ ವೇಳೆ ಕರ್ನಾಟಕ ಜನತೆಯ ಮನದಲ್ಲಿ ಪ್ರತಿಧ್ವನಿಸಿ ಬಿಜೆಪಿಯ ಸೇಡಿನ ರಾಜಕಾರಣಕ್ಕೆ ತಕ್ಕ ಪಾಠ ಕಲಿಸುವ ಮೂಲಕ ಕನ್ನಡಿಗರು ಅಭಿಮಾನವನ್ನು ಎತ್ತಿ ಹಿಡಿದಿದ್ದಾರೆ.

ದ್ರಾವಿಡ ಕುಟುಂಬದ ನೆಲ ಬಿಜೆಪಿಯಿಂದ ಮುಕ್ತವಾಗಿದೆ. ಈಗ ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಪುನಃಸ್ಥಾಪಿಸಲು 2024 ನ್ನು ಗೆಲ್ಲಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ತಮಿಳು ನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕರೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com