ಮಹದಾಯಿ ವಿವಾದ: ಜುಲೈ 30ಕ್ಕೆ ಅಖಂಡ ಕರ್ನಾಟಕ ಬಂದ್

ಮಹದಾಯಿ ತೀರ್ಪು ವಿರೋಧಿಸಿ ಹಲವು ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡ ಚಲನಚಿತ್ರೋದ್ಯಮ ಜುಲೈ 30ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಿವೆ...

Published: 28th July 2016 02:00 AM  |   Last Updated: 28th July 2016 10:19 AM   |  A+A-


Karnataka bandh

ಕರ್ನಾಟಕ ಬಂದ್

Posted By : VS
Source : Online Desk
ಬೆಂಗಳೂರು: ಮಹದಾಯಿ ತೀರ್ಪು ವಿರೋಧಿಸಿ ಹಲವು ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡ ಚಲನಚಿತ್ರೋದ್ಯಮ ಜುಲೈ 30ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಿವೆ.

ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಮಹದಾಯಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪು ವಿರೋಧಿಸಿ ಜುಲೈ 30ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ.

ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನಿಂದ ರಾಜ್ಯಕ್ಕೆ ಆದ ಅನ್ಯಾಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದರ ವಿರುದ್ಧ ಕನ್ನಡ ಒಕ್ಕೂಟ ಎಲ್ಲ ಹಂತಗಳಲ್ಲಿ ಹೋರಾಟ ನಡೆಸಲಿದೆ. ಉತ್ತರ ಕರ್ನಾಟಕ ಅಥವಾ ಮೈಸೂರು ಕರ್ನಾಟಕ ಎಂಬ ಪ್ರಶ್ನೆಯೇ ಇಲ್ಲಿ ಬರುವುದಿಲ್ಲ. ಈ ವಿಚಾರದಲ್ಲಿ ಕನ್ನಡಿಗರು ಒಂದಾಗಿದ್ದಾರೆ. ಎಲ್ಲ ಕನ್ನಡಪರ, ರೈತಪರ, ದಲಿತಪರ ಹಾಗೂ ಕಾರ್ಮಿಕ ಸಂಘಟನೆಗಳ ಬೆಂಬಲ ಕೋರಲಾಗಿದೆ ಎಂದರು.

ತೀರ್ಪು ವಿರೋಧಿ ಜುಲೈ 30ಕ್ಕೆ ಕನ್ನಡ ಚಿತ್ರೋದ್ಯಮ ಬಂದ್
ಮಹದಾಯಿ ತೀರ್ಪು ವಿರೋಧಿಸಿ ಕನ್ನಡ ಚಿತ್ರೋದ್ಯಮ ಜುಲೈ 30ರಂದು ಬಂದ್ ಆಚರಿಸುವುದಕ್ಕೆ ತೀರ್ಮಾನಿಸಿದೆ. ಅಂದು ಕನ್ನಡ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಸ್ಧಗಿತವಾಗಲಿವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದು ಹೇಳಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp