ಹಿರಿಯ ಸಾಹಿತಿ ಡಾ. ಪ್ರಭುಶಂಕರ ನಿಧನ

ಕನ್ನಡದ ಹಿರಿಯ ವಿದ್ವಾಂಶ, ಸಾಹಿತಿ ಡಾ. ಪ್ರಭುಶಂಕರ(89) ಕಾಲವಶರಾಗಿದ್ದಾರೆ.
ಡಾ. ಪ್ರಭುಶಂಕರ
ಡಾ. ಪ್ರಭುಶಂಕರ
ಮೈಸೂರು: ಕನ್ನಡದ ಹಿರಿಯ ವಿದ್ವಾಂಶ, ಸಾಹಿತಿ ಡಾ. ಪ್ರಭುಶಂಕರ(89) ಕಾಲವಶರಾಗಿದ್ದಾರೆ.
ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ನರಳುತ್ತಿದ್ದ ಪ್ರಭುಶಂಕರ ಮೈಸೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಚಾಮರಾಜನಗರದವರಾದ ಪ್ರಭುಶಂಕರ ರಾಷ್ಟ್ರಕವಿ ಕುವೆಂಪು ಅವರ ನೇರ ಶಿಷ್ಯರಾಗಿದ್ದರು. ಚಾಮರಾಜನಗರ, ಯಳಂದೂರು, ಮೈಸೂರು, ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ್ದ ಇವರು ತೀ.ನಂ.ಶ್ರೀ, ರಾಜರತ್ನಂ, ಎಂ.ವಿ.ಸೀ, ಡಿ.ಎಲ್.ಎನ್ ಅವರುಗಳ ಶಿಷ್ಯರಾಗಿದ್ದರು.
ಮೈಸೂರು ವಿವಿ ಪ್ರಸಾರಾಂಗ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದ ಪ್ರಭುಶಂಕರ ಕುವೆಂಪು ಅವರ ಪ್ರಸಿದ್ದ ನಾಟಕಗಳಾದ ರಳ್‌ಗೆ ಕೊರಳ್, ಸ್ಮಶಾನ ಕುರುಕ್ಷೇತ್ರ,, ಶೂದ್ರ ತಪಸ್ವಿ, ಕೃತಿಗಳನ್ನು ಆಂಗ್ಲ ಭಾಷೆಗೆ ಭಾಷಾಂತರಿಸಿದ್ದರು.
ಕನ್ನಡದಲ್ಲಿ ಹಲವು ಕೃತಿಗಳನ್ನು ಪ್ರಕಟಿಸಿದ್ದ ಇವರು ಎತ್ತಿಗೆ ಜ್ವರ ಎಮ್ಮೆಗೆ ಬರೆ (ಲಘು ಪ್ರಬಂಧ), ಜೀವ ಜೀವದ ನಂಟು (ಕಾದಂಬರಿ), ಅಂಗುಲಿಮಾಲ, ಆಮ್ರಪಾಲಿ (ನಾಟಕ). ವಿದೇಶ ಪ್ರವಾಸಾನುಭವದ ನಾನು ಮತ್ತು ಶಾಂತಿ (ಪ್ರವಾಸಕಥನ) ಜನಮನ (ವ್ಯಕ್ತಿಚಿತ್ರ), ಕುವೆಂಪುರವರ ವ್ಯಕ್ತಿತ್ವ,(ಅನುವಾದ) ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.  
ವಿದ್ವಾಂಸ ಪ್ರಭುಶಂಕರ ಅವರ ಸಾಹಿತ್ಯ ಕೊಡುಗೆಗಳಿಗಾಗಿ ರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ನ ವಿಶ್ವಮಾನವ, ರಾಜ್ಯೋತ್ಸವ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ ಇನ್ನೂ ಮೊದಲಾದ ಗೌರವಕ್ಕೆ ಭಾಜನರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com