ಸಂಪುಟಕ್ಕೆ 8 ಹೊಸ ಸಚಿವರು: ಪ್ರಾದೇಶಿಕ, ಜಾತಿ ಅಸಮತೋಲನ ಸರಿತೂಗಿದ ಕಾಂಗ್ರೆಸ್

ಸಚಿವ ಸಂಪುಟ ವಿಸ್ತರಣೆಯ ಕಾಂಗ್ರೆಸ್ ಪಾಲಿನ ಕಸರತ್ತು ಕೊನೆಗೂ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸಚಿವ ಸಂಪುಟಕ್ಕೆ 8 ಹೊಸ ಸಚಿವರು ಸೇರ್ಪಡೆಗೊಳ್ಳುವ ಮೂಲಕ ಪ್ರಾದೇಶಿಕ, ಜಾತಿ ಅಸಮಾತೋಲನವನ್ನು ಕಾಂಗ್ರೆಸ್ ಸರಿತೂಗಿದೆ...
ಸಂಪುಟಕ್ಕೆ 8 ಹೊಸ ಸಚಿವರು: ಪ್ರಾದೇಶಿಕ, ಜಾತಿ ಅಸಮತೋಲನವನ್ನು ಸರಿತೂಗಿದ ಕಾಂಗ್ರೆಸ್
ಸಂಪುಟಕ್ಕೆ 8 ಹೊಸ ಸಚಿವರು: ಪ್ರಾದೇಶಿಕ, ಜಾತಿ ಅಸಮತೋಲನವನ್ನು ಸರಿತೂಗಿದ ಕಾಂಗ್ರೆಸ್
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯ ಕಾಂಗ್ರೆಸ್ ಪಾಲಿನ ಕಸರತ್ತು ಕೊನೆಗೂ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸಚಿವ ಸಂಪುಟಕ್ಕೆ 8 ಹೊಸ ಸಚಿವರು ಸೇರ್ಪಡೆಗೊಳ್ಳುವ ಮೂಲಕ ಪ್ರಾದೇಶಿಕ, ಜಾತಿ ಅಸಮಾತೋಲನವನ್ನು ಕಾಂಗ್ರೆಸ್ ಸರಿತೂಗಿದೆ. 
ಎರಡು ಅಥವಾ ಎರಡಕ್ಕೂ ಹೆಚ್ಚು ಪ್ರಮುಖ ಖಾತೆ ಹೊಂದಿರುವ ಕಾಂಗ್ರೆಸ್'ನ ಪ್ರಭಾವಿ ಸಚಿವರು ತಮ್ಮ ಖಾತೆ ಬಿಡಲು ಹಿಂದೇಟು ಹಾಕುತ್ತಿರುವುದು ಮತ್ತು ಹೊಸ ಸಚಿವರು ಪ್ರಮುಕ ಖಾತೆಗಳಿಗೆ ಬೇಡಿಕೆಯಿಟ್ಟಿರುವ ಕಾರಣ ಖಾತೆ ಹಂಚಿಕೆಯ ಕಗ್ಗಂಟು ನಿರ್ಮಾಣವಾಗಿದೆ.
ಈ ಕಗ್ಗಂಟು ನಿವಾರಿಸಲು ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮಧ್ಯಸ್ಥಿಕೆಯನ್ನು ರಾಜ್ಯ ನಾಯಕತ್ವ ಕೋರಿದ್ದು, ಸೋಮವಾರದ ವೇಳೆಗೆ ವೇಣುಗೋಪಾಲ್ ಅವರೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ಇದು ಇತ್ಯರ್ಥಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. 

ಕಾಂಗ್ರೆಸ್ ಹೈಕಮಾಂಡ್'ನೊಂದಿಗಿನ ಸಮಾಲೋಚನೆ ವೇಳೆ ಯಾರು ಯಾರು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದಾರೋ ಅವರೆಲ್ಲ ತಮ್ಮ ಹೆಚ್ಚುವರಿ ಖಾತೆಗಳನ್ನು ಬಿಟ್ಟುಕೊಡಬೇಕು. ಅದನ್ನು ಹೊಸ ಸಚಿವರಿಗೆ ಹಂಚುವುದು ಎಂದು ತೀರ್ಮಾವಾಗಿತ್ತು ಎನ್ನಲಾಗುತ್ತಿದೆ. ಆದರೆ, ಕಾಂಗ್ರೆಸ್ ಸಚಿವರ ಬಳಿ ಇರುವ ಹೆಚ್ಚುವರಿ ಖಾತೆಗಳ ಸಂಖ್ಯೆ 12 ಇದೆ. ಇದನ್ನು 8 ಸಚಿವರಿಗೆ ಹಂಚಬೇಕು. ಹೀಗಾಗಿ ತಮ್ಮ ಹೆಚ್ಚುವರಿ ಖಾತೆಗಳನ್ನು ಉಳಿಸಿಕೊಳ್ಳಲು ಪರಮೇಶ್ವರ್, ಶಿವಕುಮಾರ್, ದೇಶಪಾಂಡೆ, ಕೃಷ್ಣಬೈರೇಗೌಡ ಮೊದಲಾದವರು ಪ್ರಯತ್ನ ನಡೆಸಿದ್ದಾರೆ. 

ಆದರೆ, ಹೊಸ ಸಚಿವರಿಗೆ ಈ ಪ್ರಮುಖ ಸಚಿವರ ಬಳಿ ಇರುವ ಹೆಚ್ಚುವರಿ ಖಾತೆಗಳ ಮೇಲೆ ಕಣ್ಣಿದೆ. ಉದಾಹರಣೆಗೆ ಪರಮೇಶ್ವರ ಅವರ ಬಳಿ ಗೃಹ ಸಚಿವಾಲಯ, ಬೆಂಗಳೂರು ಅಭಿವೃದ್ಧಿ ಹಾಗೂ ಯೋಜನಾ ಸಬಲೀಕರಣ ಮತ್ತು ಕ್ರೀಡಾ ಖಾತೆಗಳಿವೆ. ಈ ಪೈಕಿ ಪರಮೇಶ್ವರ್ ಯೋಜನಾ ಸಬಲೀಕರಣ ಹಾಗೂ ಕ್ರೀಡಾ ಖಾತೆ ಬಿಡಲು ಸಿದ್ಧರಿದ್ದಾರೆ, ಆದರೆ, ಗೃಹ ಹಾಗೂ ಬೆಂಗಳೂರು ನಗರಾಭಿವೃದ್ಧಿ ಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೆ, ಗೃಹ ಅಥವಾ ಬೆಂಗಳೂರು ಅಭಿವೃದ್ಧಿ ಪೈಕಿ ಒಂದನ್ನು ತಮ್ಗೆ ಬಿಟ್ಟುಕೊಡಬೇಕು ಎಂಬುದು ಹೊಸ ಸಚಿವರ ಆಗ್ರಹ. ಅದೇ ರೀತಿ ಶಿವಕುಮಾರ್ ಅವರ ಬಳಿ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಗಳಿವೆ. ಈ ಎರಡರಲಲ್ಲಿ ಒಂದನ್ನು ಬಿಟ್ಟುಕೊಡಲಿ ಎಂಬ ಆಗ್ರಹವಿದ್ದರೆ, ಶಿವಕುಮಾರ್ ಈ ಖಾತೆಗಳನ್ನು ಬಿಟ್ಟುಕೊಡಲು ಸುತರಾಂ ಒಪ್ಪುತ್ತಿಲ್ಲ. ಇದೇ ರೀತಿ ದೇಶಪಾಂಡೆ ಹಾಗೂ ಕೃಷ್ಣ ಬೈರೇಗೌಡ ಮೊದಲಾದವರು ಪಟ್ಟು ಹಿಡಿದ್ದಾರೆನ್ನಲಾಗುತ್ತಿದೆ. 

ಸಂಪುಟ ವಿಸ್ತರಣೆಯಿಂದ ಲಿಂಗಾಯತ, ಕುರುಬ, ಅಲ್ಪಸಂಖ್ಯಾತ, ಎಸ್ಸಿ ಮತ್ತು ಎಸ್ಟಿ ಸಮುದಾಗಳಿಗೆ 2 ಸಚಿವ ಸ್ಥಾನಗಳು ಹೆಚ್ಚುವರಿಯಾಗಿ ಸಿಕ್ಕಂತಾಗಿದೆ. ಪ್ರಸ್ತುತ ಸಂಪುಟದಲ್ಲಿರುವ ಇಬ್ಬರು ಕುರುವ ಸಚಿವ ಪೈಕಿ ಆರ್.ಶಂಕರ್ ಅವರನ್ನು ಕೈಬಿಟ್ಟು, ಶಿವಳ್ಳಿ ಮತ್ತು ಎಂ.ಬಿ.ನಾಗರಾಜ್ ಅವರನ್ನು ಸೇರ್ಪಡೆ ಮಾಡಿಕೊಂಡಿದ್ದರಿಂದ ಕುರುಬ ಸಮುದಾಯಕ್ಕೆ ಒಟ್ಟು ಮೂರು ಸಚಿವ ಸ್ಥಾನ ದೊರೆತಿದೆ. ಪರಿಶಿಷ್ಠ ಪಂಗಡದ ರಮೇಶ್ ಜಾರಕಿಹೊಳಿ ಅವರನ್ನು ಕೈಬಿಟ್ಟು, ಸತೀಶ್ ಜಾರಕಿಹೊಳಿ ಮತ್ತು ಇ.ತುಕಾರಾಂ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇದರಿಂದ ನಾಯಕ ಜನಾಂಗಕ್ಕೆ ಒಂದಜು ಹೆಚ್ಚುವರಿ ಸ್ಥಾನ ದೊರೆತಿದೆ. 
32 ಸಚಿವರ ಪ್ರಬಲ ಸಂಪುಟದಲ್ಲಿ ಮುಖ್ಯಮಂತ್ರಿಗಳು ಸೇರಿ 10 ಒಕ್ಕಲಿಗರು, 5 ಲಿಂಗಾಯತರು, ಇಬ್ಬರು ಎಸ್'ಟಿ, 5 ಎಸ್ಸಿ, ಮೂವರು ಮುಸ್ಲಿಮರು, ಮೂವರು ಕುಬರು ಸೇರಿ ಇತರರು ಇದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com