'ಈ ಸಲ ಕಪ್ ನಮ್ದೆ': ಬೆಂಗಳೂರಿನಲ್ಲಿ ವೈರಲ್ ಆಗಿದೆ ಹೊಸ ಸ್ಲೋಗನ್

ಹ್ಯಾಶ್ ಟ್ಯಾಗ್ ಈಸಲ ಕಪ್ ನಮ್ದೆ ಎಂಬ ಸ್ಲೋಗನ್, ಯೂ ಟ್ಯೂಬ್, ಫಸ್ ಬುಕ್, ಇನ್ ಸ್ಟಾಗ್ರಾಮ್ ಸ್ನ್ಯಾಪ್ ಚಾಟ್, ಡಬ್ ಸ್ಮ್ಯಾಶ್ ಗಳ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ...
ಈ ಸಲ ಕಪ್ ನಮ್ದೆ
ಈ ಸಲ ಕಪ್ ನಮ್ದೆ
ಬೆಂಗಳೂರು: ಈ ಸಲ ಕಪ್ ನಮ್ದೆ' ಈಗಾಗಲೇ ಈ ವಾಕ್ಯ ನಿಮ್ಮ ಮನದಲ್ಲೂ ಗುಣುಗುಡುತ್ತಿರಬಹುದು. ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್, 11ನೇ ಆವೃತ್ತಿಗೆ ಕಾಲಿರಿಸುತ್ತಿರುವಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಕಿರೀಟ ಗೆಲ್ಲಲು ಪಣತೊಟ್ಟಿದೆ.
ಅಭಿಮಾನಿಗಳಂತೂ ಈ ಬಾರಿ ಕಪ್ ಗೆದ್ದೇ ಗೆಲ್ತೀವಿ ಎಂಬ ಅಚಲ ಆತ್ಮವಿಶ್ವಾಸದಲ್ಲಿದ್ದಾರೆ. ಇದರಂತೆ ಸಾಮಾಜಿಕ ಜಾಲತಾಣಗಳಲ್ಲಿ 'ಈ ಸಲ ಕಪ್ ನಮ್ದೆ' ಎಂಬ ಹ್ಯಾಶ್‌ಟ್ಯಾಗ್ ವೈರಲ್ ಆಗಿ ಹರಡುತ್ತಿದೆ.
ಹ್ಯಾಶ್ ಟ್ಯಾಗ್ ಈಸಲ ಕಪ್ ನಮ್ದೆ ಎಂಬ ಸ್ಲೋಗನ್, ಯೂ ಟ್ಯೂಬ್, ಫಸ್ ಬುಕ್, ಇನ್ ಸ್ಟಾಗ್ರಾಮ್ ಸ್ನ್ಯಾಪ್ ಚಾಟ್, ಡಬ್ ಸ್ಮ್ಯಾಶ್ ಗಳ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.ಇದನ್ನು ಸಾವಿರಾರು ಮಂದಿ ನೋಡಿ ಲೈಕ್ ಮಾಡಿ ಶೇರ್ ಮಾಡುತ್ತಿದ್ದಾರೆ.
ಯೂ ಟ್ಯೂಬ್ ನಲ್ಲಿ  ಟಗರು ವರ್ಸನ್  ನಲ್ಲಿ ಈ ಸಲ ಕಪ್ ನಮ್ದೇ ವಿಡಿಯೋ ಹರಿದಾಡುತ್ತಿದ್ದು 50 ಸಾವಿರ ಮಂದಿ ವೀಕ್ಷಿಸಿದ್ದಾರೆ,  ಬಾಹುಬಲಿ 2ನೇ ಭಾಗದ ಬಲ್ಲಾಳದೇವನ ಪಟ್ಟಾಭಿಷೇಕ ಸಮಾರಂಭದ ಸನ್ನಿವೇಶದ ವಿಡಿಯೋದಲ್ಲಿ ಪ್ರಭಾಸ್ ವಿರಾಟ್ ಕೊಹ್ಲಿ ಪಾತ್ರದಲ್ಲಿ ಅಭಿನಯಿಸುವ ವಿಡಂಬನೆ ಭಾರೀ ಪ್ರಸಿದ್ದವಾಗಿದೆ. ಈ ವಿಡಿಯೋದಲ್ಲಿ ಪ್ರಭಾಸ್ ಕಪ್ ತರುವುದಾಗಿ ಪ್ರಮಾಣ ಮಾಡುತ್ತಾರೆ, 
ಆರ್‌ಸಿಬಿ ಅಭಿಮಾನಿಗಳು ತಮ್ಮ ಪ್ರತಿಯೊಂದು ಪೋಸ್ಟ್‌ನಲ್ಲೂ 'ಈ ಸಲ ಕಮ್ ನಮ್ದೆ' ಎಂಬುದನ್ನು ಉಲ್ಲೇಖಿಸುತ್ತಿದ್ದಾರೆ. ಇದು ಕಪ್ ಗೆಲ್ಲಲು ವಿರಾಟ್ ಕೊಹ್ಲಿ ಬಳಗಕ್ಕೆ ಮತ್ತಷ್ಟು ಹುರಿದುಂಬಿಸಲಿದೆಯೆಂಬ ನಂಬಿಕೆಯನ್ನು ಹೊಂದಿದ್ದಾರೆ.
ಇದಲ್ಲದೇ ಹಲವು ಕಿರು ಚಲನಚಿತ್ರ ತಯಾರಕರು ಇದನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡಿದ್ದಾರೆ, ನಮ್ದು ಕೆ ಚಾನೆಲ್ ನ ಶ್ರವಣ್ ನಾರಾಯಣ್ ಐತಾಳ್, ನಿಜ ಜೀವನದ ಕಥೆಯೊಂದನ್ನು ಆಧರಿಸಿ 4 ನಿಮಿಷಗಳ ವಿಡಿಯೋ ಮಾಡಿದ್ದಾರೆ, ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ತವರು ಮನೆಗೆ ಕಳುಹಿಸಲು  ಯಾವ ರೀತಿಯ ತಂತ್ರ ಅನುಸರಿಸುತ್ತಾರೆ ಎಂಬುದನ್ನು ವಿಡಿಯೋದಲ್ಲಿ ತಿಳಿಸಿದ್ದಾರೆ, ಇದು ಉತ್ತಮವಾದ ಕ್ಯಾಚ್ ಲೈನ್ ಹೊಂದಿದೆ. 
ನಾಟಿ ಫ್ಯಾಕ್ಟರಿ ಯೂಟ್ಯೂಬ್ ಚಾನೆಲ್ ನಲ್ಲಿ ಕಿರಿಕ್ ಪಾರ್ಟ್ ಸಿನಿಮಾದಲ್ಲಿ  ಕಂಪ್ಯೂಟರ್ ಸೈನ್ಸ್ ಮತ್ತು ಮ್ಯೆಕ್ಯಾನಿಕಲ್ ಎಂಜಿನೀಯರ್  ವಿದ್ಯಾರ್ಥಿಗಳ ನಡುವೆ ನಡೆಯುವ ಫೈಟ್ ಬಗ್ಗೆ ತೋರಿಸಲಾಗಿದೆ, ರಿಲೀಸ್ ಮಾಡಿ ಎರಡು ದಿನಗಳೊಳಗೆ  12 ಲಕ್ಷ ಜನರನ್ನು ತಲುಪಿದೆ. 8 ಸಾವಿರ ಮಂದಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ, ಈ ವಿಡಿಯೋವನ್ನು ಆರ್ ಸಿ ಬಿ ಅಧಿಕೃತ ಪೇಜ್ ನಲ್ಲಿ ಶೇರ್ ಮಾಡಲಾಗಿದೆ ಎಂದು ಚಾನೆಲ್ ತಿಳಿಸಿದೆ.
ಈ ಸಲ ಕಪ್ ನಮ್ದೆ ಸ್ಲೋಗನ್ ಧನಾತ್ಮಕವಾಗಿ ಹಾಗೂ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ ಎಂದು ನಟ ಡ್ಯಾನಿಶ್ ಸೇಠ್ ಹೇಳಿದ್ದಾರೆ, 
ಟ್ರೋಲ್ ಹೈಕ್ಳು  ಪೇಜ್ ಅಡ್ಮಿನ್ ತೇಜಸ್. ಆರ್ ಸಿಬಿ ಈ ಥೀಮ್ ಬಗ್ಗೆ ಹೇಳಿದ್ದಾರೆ. ಐಪಿಎಲ್ ಸೀಸನ್ ಆರಂಭವಾಗುವ ಮುನ್ನ ಪಾರ್ಟಿ ಮಾಡುವುದಾಗಿ ತಿಳಿಸಿದ್ದಾರೆ, ಪಾರ್ಟಿ ವೇಳೆ ನಿಯಮಿತವಾಗಿ ಈ ಸಲ  ಕಪ್ ನಮ್ದೆ ಸ್ಲೋಗನ್ ಕೂಗಬೇಕು, ಇದಕ್ಕೆ ಈಗಾಗಲೇ ಹಲವು ಮಂದಿ ಸಹಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com