ಬೆಂಗಳೂರು: ಐಟಿ ಅಧಿಕಾರಿ ಮನೆ ಮೇಲೆ ಸಿಬಿಐ ದಾಳಿ, 1.35 ಕೋಟಿ ರು. ವಶ!

ರಾಜಕಾರಣಿಗಳು, ನಟರು ಹಾಗೂ ಗುತ್ತಿಗೆದಾರರಿಗೆ ಶಾಕ್ ನೀಡುತ್ತಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗೇ ಇಂದು ಸಿಬಿಐ ಅಧಿಕಾರಿಗಳು ಶಾಕ್ ನೀಡಿದ್ದು ದಾಳಿ...

Published: 04th April 2019 12:00 PM  |   Last Updated: 04th April 2019 05:20 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಬೆಂಗಳೂರು: ರಾಜಕಾರಣಿಗಳು, ನಟರು ಹಾಗೂ ಗುತ್ತಿಗೆದಾರರಿಗೆ ಶಾಕ್ ನೀಡುತ್ತಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗೇ ಇಂದು ಸಿಬಿಐ ಅಧಿಕಾರಿಗಳು ಶಾಕ್ ನೀಡಿದ್ದು ದಾಳಿ ವೇಳೆ ಬರೋಬ್ಬರಿ 1.35 ಕೋಟಿ ರುಪಾಯಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಬಿಐ ಬಲೆಗೆ ಬಿದ್ದಿದ್ದ ಐಟಿ ಅಧಿಕಾರಿ ನಾಗೇಶ್ ಅವರ ಮನೆ ಮೇಲೆ ಇಂದು ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ 1.35 ಕೋಟಿ ನಗದು, ಮಹತ್ವದ ದಾಖಲೆಗಳು ಹಾಗೂ ಪೆನ್ ಡ್ರೈವ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಕಳೆದ ಮಾರ್ಚ್ ನಲ್ಲಿ ಗುತ್ತಿಗೆದಾರ ಶ್ರೀನಿವಾಸ್​ ಅವರ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಐಟಿ ಅಧಿಕಾರಿ ನಾಗೇಶ್ ಅವರು ಕೇಸ್ ಖುಲಾಸೆಗೊಳಿಸಲು 40 ಲಕ್ಷ ರುಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.  ಅದರಂತೆ ಇಂದು 14 ಲಕ್ಷ ರುಪಾಯಿ ನಗದು ಸ್ವೀಕರಿಸುತ್ತಿದ್ದ ವೇಳೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಐಟಿ ಅಧಿಕಾರಿ ಹಣಕ್ಕೆ ಬೇಡಿಕೆ ಇಟ್ಟ ಕುರಿತು ಗುತ್ತಿಗೆದಾರ ಶ್ರೀನಿವಾಸ್ ಸ್ನೇಹಿತನ ಸಲಹೆ ಮೇರೆಗೆ ಸಿಬಿಐ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಅನ್ವಯ ಸ್ಥಳಕ್ಕೆ ಬಂದ ಸಿಬಿಐ ಅಧಿಕಾರಿಗಳು ಹಣ ಪಡೆಯುವ ವೇಳೆಯೇ ನಾಗೇಶ್ ರನ್ನು ವಶಕ್ಕೆ ಪಡೆದಿದ್ದರು.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp