ಲೋಕಸಭೆ ಚುನಾವಣೆ ಹಿನ್ನೆಲೆ: ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳಿಗೆ ದುರಸ್ತಿ ಭಾಗ್ಯ

ಲೋಕಸಭಾ ಚುನಾವಣೆ ಕಾವು ದಿನೇ ದಿನೇ ಹೆಚ್ಚುತ್ತಿದೆ.ಈ ವೇಳೆ ರಾಜ್ಯದ ಹಲವಾರು ಸರ್ಕಾರಿ ಶಾಲೆಗಳಿಗೆ ಇದೇ ಚುನಾವಣೆ ವರದಾನವಾಗಿ ಸಹ ಪರಿಣಮಿಸಿದೆ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಲೋಕಸಭಾ ಚುನಾವಣೆ ಕಾವು ದಿನೇ ದಿನೇ ಹೆಚ್ಚುತ್ತಿದೆ.ಈ ವೇಳೆ ರಾಜ್ಯದ ಹಲವಾರು ಸರ್ಕಾರಿ ಶಾಲೆಗಳಿಗೆ ಇದೇ ಚುನಾವಣೆ ವರದಾನವಾಗಿ ಸಹ ಪರಿಣಮಿಸಿದೆ.. ಏಕೆಂದರೆ ಈ ಚುನಾವಣಾ ಋತುವಿನಲ್ಲಿ ಶಾಲೆಗಳಿಗೆ ಹೊಸದಾಗಿ ಸುಣ್ಣ ಬಣ್ಣ ಹೊಡೆಸುವುದು ಸೇರಿದಂತೆ ದುರಸ್ತಿ ಕಾರ್ಯ ನಡೆಸಿ ಅವುಗಳನ್ನು ಮತಕೇಂದ್ರಗಳಾಗಿ ಬದಲಾಯಿಸಲು ಅಧಿಕಾರಿಗಳು ಸಿದ್ದವಾಗಿದ್ದಾರೆ. 
ರಾಜ್ಯದ ಸುಮಾರು . 20,000 ಸರ್ಕಾರಿ ಶಾಲೆಗಳು ಮತ್ತು ಪಿಯು ಕಾಲೇಜುಗಳು ಮತದಾನ ಕೇಂದ್ರಗಳಾಗುವ ನಿರೀಕ್ಷೆ ಇದೆ.ರಾಜ್ಯ  ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆ ಶಾಲಾ ಕಟ್ಟಡ ದುರಸ್ತಿಗೆ ಹಣ ಬಿಡುಗಡೆ ಮಾಡಿದ್ದು ಸ್ಥಳೀಯ ಮಟ್ಟದಲ್ಲಿ ಅಧಿಕಾರಿಗಳು ಈಗಾಗಲೇ ಕೆಲಸವನ್ನು ಪ್ರಾರಂಭಿಸಿದ್ದಾರೆ. ಇಲಾಖೆಯ ವಿವರಗಳ ಪ್ರಕಾರ ಒಟ್ಟು ರೂ 34 ಕೋಟಿ ಬಿಡುಗಡೆ ಆಗಿದೆ. "ಮತದಾನ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮೊದಲ ಆದ್ಯತೆಯಾಗಿರಲಿದೆ. ಇದಕ್ಕಾಗಿ ನಾವು ರಾಜ್ಯದಾದ್ಯಂತ 19,953 ಸರಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು  ಒದಗಿಸುವುದಕ್ಕಾಗಿ ಣವನ್ನು ಬಿಡುಗಡೆ ಮಾಡಿದ್ದೇವೆ" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಶಾಲೆಯಲ್ಲಿನ ಶೌಚಾಲಯಗಳ ದುರಸ್ತಿ, ಗೋಡೆಗಳಿಗೆ ಸುಣ್ಣ, ಬಣ್ಣ ಹಚ್ಚಿ ದುರಸ್ತಿ, ವಿದ್ಯುತ್ ಸರಬರಾಜು, ಕುಡಿಯುವ ನೀರು ಸರಬರಾಜು, ದೂರವಾಣಿ ಸಂಪರ್ಕ ಮತ್ತು ಪೀಠೋಪಕರಣ ತಯಾರಿ ನಡೆಸಲಾಗಿದೆ.ಮತದಾನ ಕೇಂದ್ರಗಳೆಂದು ಗುರುತಿಸಲ್ಪಟ್ಟಿರುವ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಶಾಲೆಗಳು ಬೆಳಗಾವಿ ಜಿಲ್ಲೆಯಲ್ಲಿದ್ದು ಜಿಲ್ಲೆಯಲ್ಲಿ ಒಟ್ಟಾರೆ , 1,850ಶಾಲೆಗಳನ್ನು ಮತದಾನ ಕೇಂದ್ರಗಳನ್ನಾಗಿ ಮಾಡಲಾಗುತ್ತಿದೆ. ಇದಾದ ನಂತರ ಚಿಕ್ಕೋಡಿ ( (1,712), ಚಿತ್ರದುರ್ಗ (1,579) ಮತ್ತು ಮಂಡ್ಯ (1,534). ಜಿಲ್ಲೆಗಳ ಶಾಲೆಗಳು ಸ್ಥಾನ ಪಡೆದಿದೆ.
ನಿಧಿ ಹಂಚಿಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯು 478 ಮತಗಟ್ಟೆಗಳಿಗೆ 373 ಲಕ್ಷ ರೂ.,ವಿಜಯಪುರ ಜಿಲ್ಲೆಯ 995 ಮತಗಟ್ಟೆಗಳಿಗೆ 311 ಲಕ್ಷ ರೂ ಹಣ ಸಂದಾಯವಾಗಿದೆ. ಇನ್ನು ಕೆಲ ಜಿಲ್ಲೆಗಳಲ್ಲಿ ಮತಗಟ್ಟೆಯಾಗಿ ಆಯ್ಕೆಯಾಗಿರುವ ಶಾಲೆಗಳು ಉತ್ತಮ ಸ್ಥಿತಿಯಲ್ಲಿದ್ದು ಇಲ್ಲಿಗೆ ಯಾವುದೇ ಹಣ ಬಿಡುಗಡೆಯಾಗಿಲ್ಲ. ಅಂತಹಾ ಜಿಲ್ಲೆ ಎಂದರೆ ಅದು ಕೋಲಾರವಾಗಿದ್ದು ಕೋಲಾರದ  284 ಶಾಲೆಗಳನ್ನು ಮತದಾನ ಕೇಂದ್ರಗಳಾಗಿ ಆಯ್ಕೆ ಮಾಡಲಾಗಿದೆ. ಶಿರಸಿಯ 149 ಮತಗಟ್ಟೆಗಳಿಗೆ ಕೇವಲ 4.90 ಲಕ್ಷ ರೂ ಬಿಡುಗಡೆಗೊಳಿಸಲಾಗಿದೆ.
ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವಲಯ ಶಿಕ್ಷಣಾಧಿಕಾರಿ (ಬ್ಲಾಕ್ ಎಜುಕೇಶನ್ ಆಫೀಸರ್) ಮತಗಟ್ಟೆ ಎಲ್ಲಾ ಸೌಲಭ್ಯ ಹೊಂದಿದೆ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಚುನಾವಣೆಗೆ ಒಂದು ವಾರವಿರುವಾಗ ಬಿಇಒ ಗಳು ಇದನ್ನು ಖಾತ್ರಿಪಡಿಸಿಕೊಳ್ಳಬೇಕಿದೆ. ಒಂದು ವೇಳೆ ಮತದಾನದ ದಿನ ಸೌಲಭ್ಯಗಳ ಕೊರತೆಯ ಬಗ್ಗೆ ಯಾವುದೇ ಸಮಸ್ಯೆಗಳು ಕಂಡರೆ ಅಂತಹಾ ಬಿಇಒ ವಿರುದ್ಧ ಶಿಸ್ತಿನ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com