ಐಟಿ ದಾಳಿ ವಿರುದ್ಧ ಬೀದಿಗಿಳಿದು ರಂಪಾಟ; ಆದರೆ ಸಿಎಂ ಆಪ್ತನ ಬಳಿ ಸಿಕ್ಕಿದ್ದು ಬರೋಬ್ಬರಿ 6 ಕೋಟಿ ರು.!

ವಿನಾಃ ಕಾರಣ ಮೈತ್ರಿ ಸರ್ಕಾರದ ನಾಯಕರ ಮೇಲೆ ಐಟಿ ದಾಳಿ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಘಟಾನುಘಟಿ ನಾಯಕರು ಬೀದಿಗಿಳಿದು...
ಕುಮಾರಸ್ವಾಮಿ-ಕಾಂಗ್ರೆಸ್ ನಾಯಕರು
ಕುಮಾರಸ್ವಾಮಿ-ಕಾಂಗ್ರೆಸ್ ನಾಯಕರು
ಬೆಂಗಳೂರು: ವಿನಾಃ ಕಾರಣ ಮೈತ್ರಿ ಸರ್ಕಾರದ ನಾಯಕರ ಮೇಲೆ ಐಟಿ ದಾಳಿ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಘಟಾನುಘಟಿ ನಾಯಕರು ಬೀದಿಗಿಳಿದು ಐಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಇದೀಗ ಐಟಿ ದಾಳಿಯಲ್ಲಿ ಸಿಎಂ ಆಪ್ತ ಪರಮೇಶ್ ಅವರ ಬ್ಯಾಂಕ್ ಲಾಕರ್ ನಲ್ಲಿ ಬರೋಬ್ಬರಿ 6 ಕೋಟಿ ರುಪಾಯಿ ಸಿಕ್ಕಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. 
ಕೆಲ ದಿನಗಳ ಹಿಂದೆ ಪರಮೇಶ್ ಅವರ ಮನೆ ಮೇಲೆ ಐಟಿ ದಾಳಿ ನಡೆಸಿತ್ತು. ಈ ವೇಳೆ ಬ್ಯಾಂಕ್ ಲಾಕರ್ ಕೀ ಕಳೆದುಹೋಗಿದೆ ಎಂದು ಪರಮೇಶ್ ಹೇಳಿಕೊಂಡಿದ್ದರು. ದಾಳಿ ಬಳಿಕ ಪರಮೇಶ್ ಅವರ ಬ್ಯಾಂಕ್ ವಿವರವನ್ನು ಐಟಿ ಸಂಗ್ರಹ ಮಾಡಿತ್ತು. ಅಷ್ಟೇ ಅಲ್ಲ. ಬ್ಯಾಂಕ್ ಲಾಕರ್ ಒಡೆಯುತ್ತೇವೆ ಎಂದು ಐಟಿ ಅಧಿಕಾರಿಗಳು ಹೇಳಿದ್ದರು. 
ಇದರಿಂದ ಹೆದರಿದ ಪರಮೇಶ್ ಅವರು ಲಾಕರ್ ಕೀ ನೀಡಿದ್ದರು. ಲಾಕರ್ ತೆಗೆದ ಸಂದರ್ಭದಲ್ಲಿ 6 ಕೋಟಿ ರುಪಾಯಿ ಪತ್ತೆಯಾಗಿದೆ. ಗುತ್ತಿಗೆದಾರರಿಂದ ಪರಮೇಶ್ ಹಣ ಸಂಗ್ರಹ ಮಾಡುತ್ತಿದ್ದರು ಎಂದು ಹೇಳಲಾಗಿದೆ. 
ಇನ್ನು ಬಿಜೆಪಿಯವರು ಚುನಾವಣೆ ಗೆಲ್ಲಲು ನಮ್ಮ ವಿರುದ್ಧ ತಂತ್ರ ಹೂಡಿ ಐಟಿ ದಾಳಿ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿತ್ತು. ಆದರೆ ಇಷ್ಟು ಪ್ರಮಾಣದ ಹಣ ಸಿಕ್ಕಿರುವುದು ಜೆಡಿಎಸ್ ನಾಯಕರಿಗೆ ತೀವ್ರ ಹಿನ್ನಡೆ ಉಂಟು ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com