ಯುಪಿಎಸ್ ಸಿ ಟಾಪರ್ ಕನಿಷ್ಕ್ ಕಟಾರಿಯಾರಿಗೆ ಬೆಂಗಳೂರಿನ ನಂಟು

ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2018ನೇ ಸಾಲಿನ ಪರೀಕ್ಷೆಯಲ್ಲಿ ಟಾಪರ್ ಆಗಿರುವ ಕನಿಷ್ಕ್ ಕಟಾರಿಯಾ ಬೆಂಗಳೂರಿನೊಂದಿಗೆ ಸಂಪರ್ಕ ಹೊಂದಿದ್ದಾರೆ.
ಕನಿಷ್ಕ್  ಕಟಾರಿಯಾ
ಕನಿಷ್ಕ್ ಕಟಾರಿಯಾ

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2018ನೇ ಸಾಲಿನ ಪರೀಕ್ಷೆಯಲ್ಲಿ ಟಾಪರ್ ಆಗಿರುವ  ಕನಿಷ್ಕ್  ಕಟಾರಿಯಾ ಬೆಂಗಳೂರಿನೊಂದಿಗೆ ಸಂಪರ್ಕ ಹೊಂದಿದ್ದಾರೆ.

 ಐಐಟಿ ಬಾಂಬೆ ಇಂಜಿನಿಯರ್  ಆಗಿದ್ದ ಕಟಾರಿಯಾ ಬೆಂಗಳೂರಿನ ಸಾಪ್ಟ್ ವೇರ್ ಲ್ಯಾಬ್ ವೊಂದರಲ್ಲಿ  ಡಾಟಾ ಸೈಂಟಿಸ್ಟ್ ಆಗಿ ಕಾರ್ಯನಿರ್ವಹಿಸಿದ್ದರು.  ರಾಜಸ್ತಾನ ಮೂಲದ ಕಟಾರಿಯಾ ನವದೆಹಲಿಯಲ್ಲಿ ಪರೀಕ್ಷೆಗಾಗಿ ತರಬೇತಿ  ಪಡೆದಿದ್ದರು.  ಇವರು ಟಿನಾ ದಾಬಿ ನಂತರ ಎರಡನೇ  ಟಾಪರ್ ಪಡೆದಿರುವ ಪರಿಶಿಷ್ಟ ಜಾತಿಯ ಅಭ್ಯರ್ಥಿಯಾಗಿದ್ದಾರೆ.

 ಭೂಪಾಲ್ ನ ಶ್ರುತಿ ಜಯಂತ್ ದೇಶ್ ಮುಖ್ ನಾಲ್ಕನೇ ಟಾಪರ್ ಆಗಿದ್ದಾರೆ. ಈ ಪೈಕಿ 23 ಮಂದಿ ಕರ್ನಾಟಕದವರು ಸೇರಿದ್ದಾರೆ. ರಾಹುಲ್ ಶರಣಪ್ಪ ಸಂಕನೂರು ಬಿಜೆಪಿ ಸಂಸದ ಎಸ್ ವಿ ಸಂಕನೂರು ಅವರ ಸಂಬಂಧಿಯಾಗಿದ್ದಾರೆ.

ಬೆಂಗಳೂರಿನ ಬಿಎಂಎಸ್ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿ ಎನ್  ಲಕ್ಷ್ಮಿ, ಮೂರನೇ ಪ್ರಯತ್ನದಲ್ಲಿ 45 ನೇ ರ್ಯಾಂಕ್ ಪಡೆದಿದ್ದರೆ, ಕೆಎಎಸ್ ಅಧಿಕಾರಿ ಡಾ. ಆಕಾಶ್  ಆರನೇ ಪ್ರಯತ್ನದಲ್ಲಿ 78ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ರಾಹುಲ್ ಸಂಕನೂರು, ಸಮಾಜಕ್ಕೆ ಸೇವೆ ಮಾಡಬೇಕೆಂಬ ದೃಷ್ಟಿಯಿಂದ  ಅತ್ಯುನ್ನತ ಪರೀಕ್ಷೆಯನ್ನು ಪಾಸು ಮಾಡಿದ್ದೇನೆ.ನಾಲ್ಕನೇ ಪ್ರಯತ್ನದ ನಂತರ ಯಶಸ್ಸು ಸಾಧಿಸಿದ್ದೇನೆ ಎಂದರು.ಸೇವೆ ಸಲ್ಲಿಸಲು ಕರ್ನಾಟಕವನ್ನೆ ಆಯ್ಕೆ ಮಾಡಿಕೊಳ್ಳುವುದಾಗಿ ಎನ್ ಲಕ್ಷ್ಮಿ ತಿಳಿಸಿದ್ದಾರೆ.

ಮೂರು ಬಾರಿ ಸಂದರ್ಶನಕ್ಕೆ ಹೋಗಿ ವಿಫಲವಾಗಿದ್ದರೂ ಈ ಬಾರಿ ಯಶಸ್ಸು ಸಾಧಿಸಿರುವುದಾಗಿ ಡಾ. ಆಕಾಶ್ ತಿಳಿಸಿದ್ದಾರೆ. ಪ್ರತಿ ದಿನ ಏಳರಿಂದ 8 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದಾಗಿ ಮೈಸೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ ಕಾರ್ತಿಕ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com