ಮಾಜಿ ಪ್ರೇಮಿಯಿಂದ ಖಾಸಗಿ ಚಿತ್ರಗಳ ಬಹಿರಂಗ ಬೆದರಿಕೆ, ನವದಂಪತಿಗಳಿಂದ ದೂರು ದಾಖಲು

ಸೀಮಾ (ಹೆಸರು ಬದಲಾಯಿಸಲಾಗಿದೆ) 23 ವರ್ಷದ ಐಟಿ ವೃತ್ತಿಪರ ಮಹಿಳೆ. ಇತ್ತೀಚೆಗೆ ತಾನು ವಿವಾಹವಾಗಿದ್ದು ಪತಿಯೊಡನೆ ಹೊಸ ಜೀವನ ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದಳು. ಆದರೆ ತನ್ನ ಮಾಜಿ ಪ್ರೇಮಿಯೊಬ್ಬ....

Published: 10th April 2019 12:00 PM  |   Last Updated: 10th April 2019 12:25 PM   |  A+A-


File Image

ಸಂಗ್ರಹ ಚಿತ್ರ

Posted By : RHN RHN
Source : The New Indian Express
ಬೆಂಗಳೂರು: ಸೀಮಾ (ಹೆಸರು ಬದಲಾಯಿಸಲಾಗಿದೆ) 23 ವರ್ಷದ ಐಟಿ  ವೃತ್ತಿಪರ ಮಹಿಳೆ. ಇತ್ತೀಚೆಗೆ ತಾನು ವಿವಾಹವಾಗಿದ್ದು ಪತಿಯೊಡನೆ ಹೊಸ ಜೀವನ ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದಳು. ಆದರೆ  ತನ್ನ ಮಾಜಿ ಪ್ರೇಮಿಯೊಬ್ಬ ತನ್ನ ನಗ್ನ ಚಿತ್ರಗಳನ್ನು ಪತಿ ಹಾಗೂ ತನ್ನ ತಾಯಿಗೆ ಕಳಿಸಿಕೊಡುತ್ತೇನೆಂದು ಬೆದರಿಕೆ  ಖಾಕಿದಾಗ ಆಕೆಯ ಜೀವನದಲ್ಲಿ ಬಿರುಗಾಳಿಯೇ ಎದ್ದಿತು.

ನವದಂಪತಿಗಳು ಈ ಸಂಬಂಧ ಕಳೆದ ತಿಂಗಳು ಬೆಂಗಳೂರು ಸೈಬರ್ ಅಪರಾಧಗಳ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪೋಲೀಸರು ಅಪರಾಧಿಯನ್ನು ಹುಡುಕಿ ಚೆನ್ನೈಗೆ ತೆರಳಿದ್ದಾರೆ. "ನಾವು ಅಪರಾಧಿಯನ್ನು ಬಂಧಿಸಲು ಚೆನ್ನೈಗೆ ತಂಡವನ್ನು ಕಳುಹಿಸಿದ್ದೇವೆ ಆದರೆ ನಾವು ಆತನನ್ನು ಬಂಧಿಸುವ ವಿಚಾರ ತಿಳಿದ ಅಪರಾಧಿ  ತಲೆಮರೆಸಿಕೊಂಡಿದ್ದಾನೆ. ಆದರೆ ಈಗ ಆತನಿಂದ ಹುಡುಗಿ ಮತ್ತು ಅವರ ಕುಟುಂಬಕ್ಕೆ ಬರುತ್ತಿದ್ದ ಬೆದರಿಕೆ ಕರೆಗಳು ನಿಂತಿವೆ" ಸಿಸಿಪಿಎಸ್ ಉಸ್ತುವಾರಿ ಪೊಲೀಸ್ ಇನ್ಸ್ ಪೆಕ್ಟರ್ ಎಮ್ ಚಂದ್ರಪ್ಪ  ಹೇಳಿದ್ದಾರೆ.

ಘಟನೆ ವಿವರ

ಕೆಲ ವರ್ಷದ ಹಿಂದೆ ಸೀಮಾ ಬೆಳ್ಲಂದೂರ್ ನ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಕಾರ್ತಿಕ್ (ಹೆಸರು ಬದಲಿಸಿದೆ) ಪರಿಚಯವಾಗಿದೆ.ಆತ ಸೀಮಾ ಕೆಲಸ ಮಾಡುತ್ತಿದ್ದ ಸಂಸ್ಥೆಗೆ ತರಬೇತಿಗಾಗಿ ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದನು. ಈ ಇಬ್ಬರೂ ಪರಸ್ಪರ ಪರಿಚಯ, ಸ್ನೇಹ ಬೆಳೆಸಿಕೊಂಡಿದ್ದು ಈ ಅವಧಿಯಲ್ಲಿ ಸೀಮಾ ಸ್ವತಃಅ ತನ ಕೆಲ ಖಾಸಗಿ ಚಿತ್ರಗಳನ್ನು ಕಾರ್ತಿಕೆ ಗೆ ಕಳಿಸಿದ್ದಳು.ಆದರೆ ಸೀಮಾ ಮನೆಯಲ್ಲಿ ಆಕೆಯ ಈ ಸಂಬಂಧಕ್ಕೆ ವಿರೋಧವಿದ್ದು ಅವರು ಸೀಮಾಳುಗಾಗಿ ಉತ್ತಮ ವರನ ಹುಡುಕಾಟದಲ್ಲಿದ್ದರು. ಇದರಂತೆ ಮುಂದೆ ಸೀಮಾ ಪೋಷಕರು ತೋರಿಸಿದ ಹುಡುಗನನ್ನೇ ವಿವಾಹವಾಗಿದ್ದಾಳೆ. 

ಒಂದು ವರ್ಷಗಳ ಕಾಲ ಸೀಮಾಗೆ ಕಾರ್ತಿಕ್ ವಾಟ್ಸ್ ಅಪ್ ಸಂದೇಶವನ್ನು ಕಳಿಸುವುದು ಮಾತ್ರ ನಿಂತಿಲ್ಲ. ಆ ಸಂದೇಶಗಳಲ್ಲಿ ಸೀಮಾಳನ್ನು ಪತಿಯಿಂದ ಬೇರಾಗಿ ಮತ್ತೆ ನನ್ನೊಡನೆ ಸೇರುವಂತೆ ಕಾರ್ತಿಕ್ ಒತ್ತಾಯಿಸಿದ್ದನು.ಆದರೆ ಸೀಮಾ ಈ ಕುರಿತು ನಿರ್ಲಕ್ಷ ವಹಿಸಿದಾಗ ಕಾರ್ತಿಕ್ ಆಕೆಯ ಖಾಸಗಿ ಚಿತ್ರಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸಿದ್ದಾನೆ. ಕಾರ್ತಿಕ್ ಸೀಮಾಳ ಪತಿಗೆ ಕರೆ ಮಾಡಿ ನಿಮ್ಮ ಪತ್ನಿಯ ಚಿತ್ರಗಳು ನನ್ನ ಬಳಿ ಇದೆ, ಅದನ್ನು ನಿಮ್ಮ ಕುಟುಂಬ ಸದಸ್ಯರೊಡನೆ ಹಂಚಿಕೊಳ್ಳುತ್ತೇನೆ ಎಂದೂ ಹೇಳಿದ್ದಾನೆ.

ಸಿಸಿಪಿಎಸ್ ಅಧಿಕಾರಿಗಳು ಹೇಳುವಂತೆ ಇಂತಹಾ ಪ್ರಕರಣಗಳು ತಿಂಗಳಿಗೆ ಕನಿಷ್ಟ ಎರಡಾದರೂ ಬರುತ್ತಿರುತ್ತದೆ. ಕಳೆದ ತಿಂಗಳು ಸಹ ಓರ್ವ ಯುವತಿ ಇಂತಹುದೇ ದೂರು ದಾಖಲಿಸಿದ್ದಳು, ಪ್ರಕರಣದಲ್ಲಿ . ಅಪರಾಧಿನನ್ನು ಬಂಧಿಸಲಾಯಿತುಇದೀಗ ಆತ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.
Stay up to date on all the latest ರಾಜ್ಯ news
Poll
HD Kumaraswamy

ಹಿಂದಿ ಗೊತ್ತಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಉತ್ತರ ಭಾರತದ ನಾಯಕರಿಗೆ ದಕ್ಷಿಣದವರಿಗಿಂತ ಹೆಚ್ಚಿನ ಪ್ರಯೋಜನ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp