
ಸಂಗ್ರಹ ಚಿತ್ರ
Source : The New Indian Express
ಬೆಂಗಳೂರು: ಏಳು ತಿಂಗಳಿನಿಂದ ಸಂಬಳ ನೀಡದಿದ್ದ ಸಂಸ್ಥೆಯ ಮಾಲೀಕರನ್ನು ಅದೇ ಸಂಸ್ಥೆಯ ಉದ್ಯೋಗಿಗಳು ಅಫರಿಸಿದ ಘಟನೆ ಬೆಂಗಳುರಿನಲ್ಲಿ ನಡೆದಿದೆ. ಬೆಂಗಳೂರಿನ ಖಾಸಗಿ ಸಂಸ್ಥೆ ಮಾಲೀಕನ ಅಪಹರಣ ಪ್ರಕರಣ ಬೇಧಿಸಿರುವ ಪೋಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳುರು ಅಲಸೂರು ಸಮೀಪದಲ್ಲಿ ಖಾಸಗಿ ಸಂಸ್ಥೆಯನ್ನು ನಡೆಸುತ್ತಿದ್ದ ಸುಜಯ್ (23) ತನ್ನ ಉದ್ಯೋಗಿಗಳಿಗೆ ಕಳೆದ ಸೆಪ್ಟೆಂಬರ್ 2018ರಿಂದ ವೇತನ ಪಾವತಿಸಿರಲಿಲ್ಲ. ಇದರಿಂದ ನಿರಾಶೆಗೊಂಡ ಉದ್ಯೋಗಿಗಳು ತಮ್ಮ ಬಾಸ್ ಅನ್ನು ಅಪಹರಿಸಿ, ತಮ್ಮ ವೇತನ ಬಾಕಿ ಪಡೆದುಕೊಳ್ಳಲು ತೀರ್ಮಾನಿಸಿದ್ದರು.
ಯೋಜನೆ ಪ್ರಕಾರ ಸಂಸ್ಥೆಯ ಸಿಬ್ಬಂದಿಗಳು ಸುಜಯ್ ನನ್ನು ಮಾರ್ಚ್ 21ರಂದು ಅಪಹರಿಸಿ ನಗರದ ಎಚ್.ಎಸ್.ಆರ್. ಲೇಔಟ್ ನಲ್ಲಿರುವ ತಮ್ಮ ಸ್ನೇಹಿತರ ಮನೆಯಲ್ಲಿ ಇರಿಸಿದ್ದರು.
ಅಲ್ಲಿ ಸುಜಯ್ ಗೆ ಅವರುಗಳು ಚಿತ್ರಹಿಂಸೆ ನೀಡಿದ್ದಾರೆ. ತಮ್ಮ ಸಂಬಳ ಬಾಕಿ ನೀಡುವಂತೆ ಒತ್ತಾಯಿಸಿದ್ದಾರೆ. ಸುಜಯ್ ಉದ್ಯೋಗಿಗಳ ಸಂಬಳ ನಿಡುವುದಾಗಿ ಭರವಸೆ ನೀಡಿದ ಬಳಿಕ ಅಪಹರಣಕಾರರು ಅವರನ್ನು ಸುರಕ್ಷಿತವಾಗಿ ಬಿಟ್ಟಿದ್ದಾರೆ.
ಅಪಹರಣಕಾರರಿಂದ ಬಿಡುಗಡೆಗೊಂಡ ಸುಜಯ್ ಅಲಸೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ ತನಿಖೆ ಕೈಗೊಂಡ ಪೋಲೀಸರು ಏಳು ಮಂದಿಯ ಪೈಕಿ ನಾಲ್ವರನ್ನು ಬಂಧಿಸಿದ್ದು ಇನ್ನೂ ಮೂವರಿಗಾಗಿ ಶೋಧ ನಡೆಸಿದ್ದಾರೆ.
Stay up to date on all the latest ರಾಜ್ಯ news