ಬಳ್ಳಾರಿ: ಅನಿಲ್ ಲಾಡ್ ಮನೆ, ಬಿಜೆಪಿ ಅಭ್ಯರ್ಥಿ ಬೆಂಬಲಿಗರಿದ್ದ ಹೊಟೇಲ್ ಮೇಲೆ ಐಟಿ ದಾಳಿ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಮುಂದುವರಿದಿದ್ದು ಬುಧವಾರ ನಸುಕಿನ ಜಾವ ಬಳ್ಳಾರಿ ಬಿಜೆಪಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬಳ್ಳಾರಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಮುಂದುವರಿದಿದ್ದು ಬುಧವಾರ ನಸುಕಿನ ಜಾವ ಬಳ್ಳಾರಿ ಬಿಜೆಪಿ ಅಭ್ಯರ್ಥಿ ಬೆಂಬಲಿಗರು ಉಳಿದುಕೊಂಡಿದ್ದ ನಗರದ ಪ್ರತಿಷ್ಠಿತ ಹೊಟೇಲ್ ಮೇಲೆ ದಾಳಿ ನಡೆಸಿದ್ದಾರೆ.
ಕಳೆದ ರಾತ್ರಿಯಿಂದಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೊಟೇಲ್ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ಆರಂಭಿಸಿ ಅದು ಇಂದು ನಸುಕಿನ ಜಾವದವರೆಗೆ ಮುಂದುವರಿದಿತ್ತು.
ಬಿಜೆಪಿ ಮೂಲಗಳು ಹೇಳುವ ಪ್ರಕಾರ, ಮತದಾರರಿಗೆ ಹಂಚಲೆಂದು ಹೊಟೇಲ್ ರೂಂನಲ್ಲಿ ನಗದು ತಂದಿರಿಸಲಾಗಿತ್ತು ಎಂಬ ಸಂಶಯದ ಮೇಲೆ ಐಟಿ ಅಧಿಕಾರಿಗಳು ಹೊಟೇಲ್ ರೂಂನ ಎಲ್ಲಾ ಕೋಣೆಯಲ್ಲಿ ಶೋಧ ನಡೆಸಿದ್ದಾರೆ. 6 ಜನ ಅಧಿಕಾರಿಗಳ ತಂಡ ತಮ್ಮ ಶೋಧ ಕಾರ್ಯ ಮುಗಿಯುವವರೆಗೆ ಹೊಟೇಲ್ ರೂಂನೊಳಗೆ ಯಾರನ್ನೂ ಬಿಡಲಿಲ್ಲ ಎಂಬ ಮಾಹಿತಿ ಸಿಕ್ಕಿದೆ.
ಐಟಿ ಅಧಿಕಾರಿಗಳು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಅನಿಲ್ ಲಾಡ್ ಅವರ ನಿವಾಸದ ಮೇಲೆ ಕೂಡ ದಾಳಿ ನಡೆಸಿದೆ. ಇಂದು ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅನಿಲ್ ಲಾಡ್ ಐಟಿ ಅಧಿಕಾರಿಗಳು ತಮ್ಮ ನಿವಾಸದ ಮೇಲೆ ನಡೆದ ದಾಳಿಯನ್ನು ಖಚಿತಪಡಿಸಿದ್ದಾರೆ.
ಪಕ್ಷದ ಕಾರ್ಯಕರ್ತರ ಸಭೆ ಮುಗಿಸಿ ಈಗ ತಾನೇ ಬೆಂಗಳೂರಿನಿಂದ ಬಂದಿದ್ದೇನೆ. ಐಟಿ ಇಲಾಖೆ ತಮ್ಮ ಮನೆಗೆ ಬಂದಿದ್ದು ಮನೆಯಲ್ಲಿ ಹಣ ಸಂಗ್ರಹಿಸಿಟ್ಟ ಮಾಹಿತಿ ಸಿಕ್ಕಿ ಶೋಧ ನಡೆಸಿದ್ದಾರೆ. 10 ಮಂದಿ ಅಧಿಕಾರಿಗಳ ತಂಡ ಮನೆಗೆ ಬಂದಿದ್ದರು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com