ಬೆಂಗಳೂರು: ನೀರಿಲ್ಲದೆ ಒಣಗುತ್ತಿರುವ ಮಡಿವಾಳ ಕೆರೆ, ದೋಣಿ ವಿಹಾರ ಸ್ಥಗಿತ

ಬಿರು ಬೇಸಿಗೆಯಿಂದಾಗಿ ನಗರದ ಅತ್ಯಂತ ಹಳೆಯ ಹಾಗೂ ದೊಡ್ಡ ಕೆರೆಗಳಲ್ಲಿ ಒಂದಾದ ಮಡಿವಾಳ ಕೆರೆ ನೀರಿಲ್ಲದೆ ಒಣಗುತ್ತಿದ್ದು, ದೋಣಿ ವಿಹಾರವನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ.
ಮಡಿವಾಳ ಕೆರೆ
ಮಡಿವಾಳ ಕೆರೆ

ಬೆಂಗಳೂರು: ಬಿರು ಬೇಸಿಗೆಯಿಂದಾಗಿ ನಗರದ ಅತ್ಯಂತ ಹಳೆಯ ಹಾಗೂ ದೊಡ್ಡ ಕೆರೆಗಳಲ್ಲಿ ಒಂದಾದ ಮಡಿವಾಳ ಕೆರೆ ನೀರಿಲ್ಲದೆ  ಒಣಗುತ್ತಿದ್ದು, ದೋಣಿ ವಿಹಾರವನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ.

ನೀರಿನ ಪ್ರಮಾಣ ಕಡಿಮೆಯಾಗಿ ದೋಣಿಯ ಪೆಡಲ್ ಹಾನಿಯಾಗಿರುವುದನ್ನು ಕೆಲಸಗಾರರು ಗಮನಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತ 12 ಬೋಟುಗಳಿವೆ. ಈ ಪೈಕಿ ಆರು ಬೋಟುಗಳು ಎರಡು ಸೀಟುಗಳನ್ನು ಹೊಂದಿದ್ದರೆ, ಉಳಿದವು ನಾಲ್ಕು ಸೀಟುಗಳನ್ನು ಹೊಂದಿವೆ. ಇದರಲ್ಲಿ ನಾಲ್ಕು ಬೋಟುಗಳು ಹಾನಿಯಾಗಿವೆ

ನೀರಿನ ಪ್ರಮಾಣ 3 ಅಡಿಗೆ ಇಳಿದಿದೆ. ನೀರಿನ ಪ್ರಮಾಣ ಕಡಿಮೆ ಇರುವುದರಿಂದ ದೋಣಿಯ ತಳಮಟ್ಟಕ್ಕೆ ಹಾನಿಯಾಗುತ್ತಿದೆ. ಪ್ರತಿಯೊಂದು ದೋಣಿಗೂ 80 ಸಾವಿರ ರೂಪಾಯಿ ವೆಚ್ಚವಾಗಿದ್ದು, ಅವುಗಳು ಹಾನಿಯಾಗಲು ಅವಕಾಶ ನೀಡುವುದಿಲ್ಲ ಎಂದು ಬೆಂಗಳೂರು ನಗರ ವಿಭಾಗದ ಆರ್ ಎಫ್ ಓ ಹರ್ಷವರ್ಧನ್ ತಿಳಿಸಿದ್ದಾರೆ.

ಇದರಿಂದಾಗಿ ಕೆರೆ ವೀಕ್ಷಣೆಗೆ ಭೇಟಿ ನೀಡುತ್ತಿರುವ ಪ್ರವಾಸಿಗರಿಗೆ ನಿರಾಸೆಯಾಗಿದೆ. ಆಗಾಗ್ಗೆ ಸ್ನೇಹಿತರ ಜೊತೆಯಲ್ಲಿ ದೋಣಿ ವಿಹಾರದ  ಮೂಲಕ ವಿವಿಧ ಪ್ರಕಾರದ ಪಕ್ಷಿಗಳನ್ನು ವೀಕ್ಷಿಸುತ್ತಿದೆ. ಆದರೆ, ಈಗ ಕಾಯುವಂತಾಗಿದೆ ಎಂದು ಬಿಟಿಎಂ ಲೇಔಟ್ ನಿವಾಸಿ ನವೀನ್ ಹೇಳಿದರು.

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದೇವೆ. ಬೋಟಿಂಗ್ ಸೌಕರ್ಯ ಸ್ಥಗಿತಗೊಳಿಸಿವುದು ಆಶ್ಚರ್ಯ ಉಂಟುಮಾಡಿದೆ ಎಂದು ಮತ್ತೋರ್ವ ಪ್ರವಾಸಿಗರೊಬ್ಬರು ತಿಳಿಸಿದರು.

ಬೋಟಿಂಗ್ ಸ್ಥಗಿತದಿಂದ ಆದಾಯ ನಷ್ಟವಾಗಿದೆ ಎಂದು  ಹೇಳುವ ಅಧಿಕಾರಿಗಳು , 30 ನಿಮಿಷ ದೋಣಿ ವಿಹಾರಕ್ಕೆ 50 ರೂಪಾಯಿ ವಿಧಿಸಲಾಗುತಿತ್ತು.  ಬೇಸಿಗೆ  ಸಂದರ್ಭದಲ್ಲಿ ಅನೇಕ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದರು. ಆದಾಗ್ಯೂ, ನೀರಿನ ಪ್ರಮಾಣ ಹೆಚ್ಚಾದರೆ ಬೋಟಿಂಗ್ ಮತ್ತೆ ಆರಂಭಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com