ಬೆಂಗಳೂರು: ಕ್ಯಾಬ್ ಚಾಲಕನೊಂದಿಗಿನ ಜಗಳದ ಬಳಿಕ ಪೋಲೀಸರ ಮೇಲೆ ಹಲ್ಲೆ, ಟೆಕ್ಕಿ ಬಂಧನ

ಸಾಫ್ಟ್ ವೇರ್ ಇಂಜಿನಿಯರ್ ಓರ್ವ ಕರ್ತವ್ಯನಿರತ ಪೋಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳುರು ಬಂಡೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಸಾಫ್ಟ್ ವೇರ್ ಇಂಜಿನಿಯರ್ ಓರ್ವ ಕರ್ತವ್ಯನಿರತ ಪೋಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳುರು ಬಂಡೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 24 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ತಾನು ಮೊಬೈಲ್ ಆಧಾರಿತ ಕ್ಯಾಬ್ ಬುಕ್ ಮಾಡಿ ಸೋಮಸುಂದರಪಾಳ್ಯಗೆ ಆಗಮಿಸಿದ್ದು ಅಲ್ಲಿ ಕ್ಯಾಬ್ ಗೆ ಹಣ ಪಾವತಿಸುವ ಬಗೆಗೆ ಚಾಲಕನೊಡನೆ ಜಗಳ ತೆಗೆದಿದ್ದಾನೆ.ಕ್ಯಾಬ್ ಚಾಲಕನ ಜತೆಗಿನ ಇಂಜಿನಿಯರ್ ಜಗಳ ಕುರಿತು ಸಾರ್ವಜನಿಕರು ಪೋಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಆಗ ಸ್ಥಳಕ್ಕಾಗಮಿಸಿದ ಪೋಲೀಸರಲ್ಲಿ ಓರ್ವ ಅಧಿಕಾರಿ ಮೇಲೆ ಇಂಜಿನಿಯರ್ ಹಲ್ಲೆ ನಡೆಸಿದ್ದನು.
ಪೋಲೀಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದ ಇಂಜಿನಿಯರ್ ನನ್ನು ಬಂಧಿಸಲಾಗಿದ್ದು ಬಂಧಿತನನ್ನು ಎಲೆಕ್ಟ್ರಾನಿಕ್ ಸಿಟಿಯ ನಿವಾಸಿ ವಿಶ್ರಾಂತ್ ಮರಾಚಾ ಎಂದು ಗುರುತಿಸಲಾಗಿದೆ.ಹೊಯ್ಸಳ ಸೇವೆಯಲ್ಲಿದ್ದ ವಿಕೆ ಮೂರ್ತಿ ಮೇಲೆ ಏಪ್ರಿಲ್ 10ರಂದು ವಿಶ್ರಾಂತ್ ಹಲ್ಲೆ ಮಾಡಿದ್ದಾನೆ. ಆ ಘತನೆ ವೇಳೆ ಇನ್ನೋರ್ವ ಪೇದೆ ಲಾಲ್ ಸಬಾ ಸಹ ಹಾಜರಿದ್ದರು ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
ರಾತ್ರಿ  8.30ಕ್ಕೆ ಸೋಮಸುಂದರಪಾಳ್ಯದಲ್ಲಿ ಗಲಾಟೆ ನಡೆದಿರುವ ಮಾಹಿತಿ ನಮಗೆ ಸಿಕ್ಕಿತ್ತು.ಐದು ನಿಮಿಷಗಳಲ್ಲಿ ನಾವು ಅಲ್ಲಿಗೆ ತಲುಪಿದ್ದೆವು.ಆಗ ಮೂರ್ತಿ ಕ್ಯಾಬ್ ಚಾಲಕನ ಜತೆ ಜಗಳ ನಿಲ್ಲಿಸುವಂತೆ ಇಂಜಿನಿಯರ್ ವಿಶ್ರಾಂತ್ ಗೆ ಹೇಳಿದ್ದಾರೆ. ಆಗ ವಿಶ್ರಾಂತ್ ಮೂರ್ತಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಅವರ ಮೇಲೆ ಹಲ್ಲೆ ನಡೆಸಿದ್ದನು, ಸಮವಸ್ತ್ರವನ್ನು ಹರಿದು ಹಾಕಿದ್ದನು.
ಮೂರ್ತಿ ಅವರ ಸಹೋದ್ಯೋಗಿಗಳು ಕ್ಯಾಬ್ ಚಾಲಕನ ಸಹಾಯದಿಂದ ವಿಶ್ರಾಂತ್ ನನ್ನು ಗಸ್ತು ವಾಹನದಲ್ಲಿ ಕುಳ್ಳರಿಸಿದರು ಇಂಜಿನಿಯರ್ ತನ್ನ ಗಮ್ಯ ಸ್ಥಾನ ತಲುಪಿದ ನಂತರ ಹಣ ಪಾವತಿಸಲು ನಿರಾಕರಿಸಿದ್ದಾಗಿ ಕ್ಯಾಬ್ ಚಾಲಕ ಆರೋಪಿಸಿದ್ದಾನೆ. ಸಧ್ಯ ಕರ್ತವ್ಯನಿರತ ಪೋಲೀಸರ ಮೇಲೆ ಹಲ್ಲೆ, ಕ್ಯಾಬ್ ಚಾಲಕನಿಗೆ ಹಣ ಪಾವತಿಸದೆ ವಂಚನೆ ಪ್ರಕರಣಗಳಲ್ಲಿ ವಿಶ್ರಾಂತ್ ನನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com