ಪಾಲಾರ್ ನದಿ ತೀರದಲ್ಲಿ ಮರಿ ವೀರಪ್ಪನ್ ಆರ್ಭಟ: ವನ್ಯಜೀವಿಗಳ ಬೇಟೆ; ಅರಣ್ಯಾಧಿಕಾರಿಗಳ ಜೊತೆ ಗುಂಡಿನ ಚಕಮಕಿ

ಕೆಲ ತಿಂಗಳುಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿರುವ ಕಾಡು ಪ್ರಾಣಿಗಳ ಬೇಟೆಗಾರರು ಮಲೈ ಮಹದೇಶ್ವರ ವನ್ಯಜೀವಿ ಅರಣ್ಯಧಾಮದಲ್ಲಿ ನಡೆದ ಗುಂಡಿನ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕೆಲ ತಿಂಗಳುಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿರುವ ಕಾಡು ಪ್ರಾಣಿಗಳ ಬೇಟೆಗಾರರು ಮಲೈ ಮಹದೇಶ್ವರ ವನ್ಯಜೀವಿ ಅರಣ್ಯಧಾಮದಲ್ಲಿ ನಡೆದ ಗುಂಡಿನ ದಾಳಿಯ ಘಟನೆಯಲ್ಲಿ ಮರಿ ವೀರಪ್ಪನ್ ಅಲಿಯಾಸ್ ಸರವಣನ್ ಭಾಗಿಯಾಗಿದ್ದು, ಆತನ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.
ತಮಿಳುನಾಡು ಅರಣ್ಯ ಸಿಬ್ಬಂದಿ ಹಾಗೂ ಮೊಬೈಲ್ ರೆಕಾರ್ಡ್ ಗಳ ಆಧಾರದ ಮೇಲೆ ತನಿಖಾ ತಂಡ ಸರವಣನ್ ಅಲಿಯಾಸ್ ಮರಿ ವೀರಪ್ಪನ್ ಹಾಗೂ ಆತನ ಆಪ್ತ ವೀರನ್ ಅಲಿಯಾಸ್ ವಕೀಲ್ ವಿರುದ್ದ ಕೇಸು ದಾಖಲಿಸಲಾಗಿದೆ, ಈ ಇಬ್ಬರು ತಮಿಳುನಾಡು ಮತ್ತು ಕರ್ನಾಟಕ ಗಡಿಭಾಗದಲ್ಲಿ ಮಾಂಸಕ್ಕಾಗಿ ವನ್ಯಜೀವಿ ಬೇಟೆಯಾಡಿದ್ದಾರೆ. 
ಏಪ್ರಿಲ್ 11 ರಂದು ಪಾಲಾರ್ ನದಿ ತೀರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 7 ಮಂದಿ ಭಾಗಿಯಾಗಿದ್ದಾರೆ, ಕರ್ನಾಟಕದ ಅರಣ್ಯ ಸಿಬ್ಬಂದಿ ಜೊತೆ ಗುಂಡಿನ ಚಕಮಕಿ ನಡೆಸಿದ್ದಾರೆ, ಗುಂಡಿನ ಚಕಮಕಿ ನಂತರ ಅಲ್ಲಿಂದ ಓಡಿಹೋಗಿರುವ ಬೇಟೆಗಾರರು ವನ್ಯಜೀವಿ ಮಾಂಸ ಹಾಗೂ ಶಸ್ತ್ರಾಸ್ತ ಬಿಟ್ಟು ಹೋಗಿದ್ದಾರೆ, ನಮಗೆ ಅರೆಸ್ಟ್ ವಾರೆಂಟ್ ತಲುಪಿದ್ದು ಅವರಿಗಾಗಿ ಹುಡುಕಾಟ ನಡೆಸಿದ್ದೇವೆ ಎಂದು  ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಮಿಳುನಾಡು ಅರಣ್ಯಾಧಿಕಾರಿಗಳು ಕೂಡ ಸರವಣನ್ ಗಾಗಿ ಹುಡುಕಾಟ ನಡೆಸಿದ್ದಾರೆ, ಶಸ್ತ್ರಾಸ್ತ್ರ ಕಾಯಿದೆ ಅಡಿ ಅತನ ವಿರುದ್ಧ ಕೇಸು ದಾಖಲಾಗಿದೆ, ಒಂದು ಬಾರಿ ಆರೋಪಿ ಸಿಕ್ಕಿಹಾಕಿಕೊಂಡರೇ ಅತನ ಜಾಲವನ್ನು ಬೇಧಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ, 
ಸರವಣನ್ ಮತ್ತು ಆತಮನ ಗ್ಯಾಂಗ್ ನವರನ್ನು ಗಲ್ಲಿಗೇರಿಸುವಂತೆ ಪರಿಸರವಾದಿಗಳು ಆಗ್ರಹಿಸಿದ್ದಾರೆ. ಸರವಣನ್ ಜಿಂಕೆ ಮಾಂಸ ತಿನ್ನುವ ಕ್ರೇಜ್ ಹೆಚ್ಚಂತೆ. ಜೊತೆಗೆ ಆತ ಕೆಲವು ಆಯ್ಕೆಮಾಡಿದ ಹೊಟೇಲ್ ಗಳಿಗೆ ಹಣ ಮತ್ತು ಮಧ್ಯಕ್ಕಾಗಿ ಜಿಂಕೆ ಮಾಂಸ  ಮಾರಾಟ ಮಾಡುತ್ತಾನೆ, ಆತನ ಗ್ಯಾಂಗ್ ನಲ್ಲಿ ಸುಮಾರು 25 ಮಂದಿ ಇದ್ದಾರೆ. ಈರೋಡ್, ಮೆಟ್ಟೂರು ಮತ್ತು ಎಂ,ಎಂ ಹಿಲ್ಸ್ ಗಳಲ್ಲಿ ಆತನ ಅವ್ಯವಹಾರಗಳನ್ನು ನಡೆಸಿದ್ದೇನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com