ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಿಗೆ ತಂತ್ರಜ್ಞಾನದ ಮೊರೆಹೋದ ಪೋಲೀಸರು

ಬೆಂಗಳುರು ಸಂಚಾರಿ ಪೋಲೀಸರು ನಗರದ ವಾಹನ ಚಾಲಕರು ಸಂಚಾರಿ ನಿಯಮ ಉಲ್ಲಂಘನೆ ಮಾಡುವುದನ್ನು ತಪ್ಪಿಸಲು ಹೆಚ್ಚು ಹೆಚ್ಚು ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ

Published: 16th April 2019 12:00 PM  |   Last Updated: 16th April 2019 11:01 AM   |  A+A-


File Image

ಸಂಗ್ರಹ ಚಿತ್ರ

Posted By : RHN RHN
Source : The New Indian Express
ಬೆಂಗಳೂರು: ಬೆಂಗಳುರು ಸಂಚಾರಿ ಪೋಲೀಸರು ನಗರದ ವಾಹನ ಚಾಲಕರು ಸಂಚಾರಿ ನಿಯಮ ಉಲ್ಲಂಘನೆ ಮಾಡುವುದನ್ನು ತಪ್ಪಿಸಲು ಹೆಚ್ಚು ಹೆಚ್ಚು ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ಸ್ವಯಂಚಾಲಿತವಾಗಿ ದಂಡ ವಿಧಿಸುವ ಕ್ರಮ ಜಾರಿಯಲ್ಲಿದೆ., ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಈ ವರ್ಷ ಮೊದಲ ಎರಡು ತಿಂಗಳಲ್ಲಿ ಸುಮಾರು ಎಂಟು ಲಕ್ಷ ಪ್ರಕರಣಗಳು ನೋಂದಣಿಯಾಗಿವೆ. ಒಂದು ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ದಂಡದ ಮೊತ್ತ ಕಳೆದೊಂದು ವರ್ಷದಲ್ಲಿ ಸಂಗ್ರಹವಾದ ದಂಡಕ್ಕೆ ಎರಡು ಪಟ್ಟು ಹೆಚ್ಚಿದೆ.

ಟ್ರಾಫಿಕ್ ಮ್ಯಾನೇಜ್ ಮೆಂಟ್ ಸೆಂಟರ್ ಪ್ರಕಾರ ನಗರದಲ್ಲಿ ಸಂಚಾರಿ ದಟ್ಟಣೆಯ ಪ್ರದೇಶದಲ್ಲಿ 1,000 ಕ್ಯಾಮೆರಾಗಳಲ್ಲಿ ನಿಯಮ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿದೆ. "ನಾವು 5,000 ಸಿ.ಟಿ.ಟಿ.ವಿ ಕ್ಯಾಮೆರಾಗಳನ್ನು ಹಾಕುತ್ತಿದ್ದೇವೆ. ಇದು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ  ಒಂದು ಭಾಗವಾಗಿದೆ.ಇದಕ್ಕೆ ಸುಮಾರು ಒಂದು ವರ್ಷ ಹಿಡಿಯಬಹುದು.ನಾವು ತಂತ್ರಜ್ಞಾನವನ್ನು  ಬಳಸಿಕೊಳ್ಳುತ್ತಿರುವ ಕಾರಣ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ." ಚ್ಚುವರಿ ಪೊಲೀಸ್ ಕಮೀಷನರ್ (ಟ್ರಾಫಿಕ್) ಪಿ. ಹರಿಶೇಖರನ್ ಹೇಳಿದ್ದಾರೆ.

ತಂತ್ರಜ್ಞಾನದ ಮೇಲೆ ಹೆಚ್ಚಿನ ಗಮನವು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ, ಈ ಮೂಲಕಸಂಚಾರಿ ದಟ್ಟಣೆ ನಿಯಂತ್ರಣಕ್ಕೂ ಸಹಕಾರಿಯಾಗುತ್ತಿದೆ.ರಸ್ತೆ ಬದಿಯಲ್ಲಿ ಬೇರೆ ವಾಹನ ಸಂಚಾರಕ್ಕೆ ಅಡ್ಡಿಯಾಗುವಂತೆ ವಾಹನ ನಿಲ್ಲಿಸಿದವರಿಗೆ ಚಲನ್ ಜಾರಿಯಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಲೀದ್ದಾರೆ."ಹೆಚ್ಚಿನ ಸಮಯಗಳಲ್ಲಿ, ಪೋಲಿಸ್ ಸಿಬ್ಬಂದಿಗಳು ನಿಯಮ ಉಲ್ಲಂಘಿಸಿದವರನ್ನು ತಡೆಯಲು ಅಸಾಧ್ಯವಾಗಿದೆ.ಇದರಿಂದ ಹೆಚ್ಚು ಟ್ರಾಫಿಕ್ ಜಾಮ್ ಸೃಷ್ಟಿಯಾಗುತ್ತದೆ.ಇದೀಗ ಪೋಲೀಸರ ಬದಲಿಗೆ , ತಂತ್ರಜ್ಞಾನವನ್ನು ಬಳಸುವುದು ಮತ್ತು ದಟ್ಟಣೆಯ ಸಮಯದಲ್ಲಿ ಸ್ಥಳದಲ್ಲೇ ಅವರನ್ನು ನಿಯಮ ಪಾಲಿಸುವಂತೆ ಮಾಡುವುದು ಒಳ್ಳೆಯ ಉಪಾಯವಾಗಿದೆ" ಅಧಿಕಾರುಗಳು ಃಏಳಿದ್ದಾರೆ.

2009 ರಿಂದ ಸ್ವಯಂಚಾಲಿತ ದಂಡ (ಚಲನ್) ಪದ್ದತಿ ಜಾರಿಯಲ್ಲಿದೆ.ಆದರೆ ಇಲಾಖೆ ಹಿಂದೆ ತಂತ್ರಜ್ಞಾನದ ಅತ್ಯುತ್ತಮ ಬಳಕೆಯನ್ನು ಮಾಡುತ್ತಿರಲಿಲ್ಲ.ಇದರಿಂದ ವ್ಯವಸ್ಥೆಯಲ್ಲಿನ ದೋಷ ಹಾಗೆಯೇ ಮುಂದುವರಿದಿತ್ತು.ಈಗ ಹಾಗಿಲ್ಲ, ಪ್ರತಿ ಠ್ಣೆ ವ್ಯಾಪ್ತಿಯಲ್ಲಿ ಶೇ.  1ರಷ್ಟು ನಿಯಮ ಉಲ್ಲಂಘನೆಯಾಗುತ್ತಿದೆ.ಹಾಗೆ ಸಂಚಾರಿ ನಿಯಮ ಉಲ್ಲಂಘಿಸಿದವರನ್ನು ನ್ಯಾಯಾಲಯದಲ್ಲಿ ಅಥವಾ ಆನ್ ಲೈನ್ ನಲ್ಲಿ ದಂಡ ಪಾವತಿಸಲು ಹೇಳಿದೆ.ಹಾಗೊಂದು ವೇಳೆ ದಂಡ ಪಾವತಿ ಮಾಡೈದ್ದರೆ ಅವರ ವಿಳಾಸ ಪತ್ತೆ ಮಾಡಿ ದಂಡ ವಸೂಲಿ ಮಾಡಲು ಓರ್ವ ಪೇದೆ ಇರಲಿದ್ದಾರೆ.ಒಂದೊಮ್ಮೆ ವಿಳಾಸ ತಪ್ಪಾದರೆ ಅಥವಾ ಆ ವ್ಯಕ್ತಿ ವಿಳಾಸ ಬದಲಿಸಿದ್ದರೆ ಆಗ ನಾವು ಅವರನ್ನು ರಸ್ತೆ ಮೇಲೆಯ್ ಏಹಿಡಿಯಬೇಕಿದೆ. ಎಂದು ಹೆಸರು ಹೇಳಲಿಚ್ಚಿಸಲ್ದ ಟ್ರಾಫಿಕ್ ಇನ್ಸ್ ಪೆಕ್ಟರ್ ಹೇಳಿದ್ದಾರೆ.

ಆಶಿಶ್ ವರ್ಮಾ, ಟ್ರಾಫಿಕ್ ಮತ್ತು ಸಂಚಾರ ಪರಿಣಿತರು ವ್ಯವಸ್ಥೆಯಲ್ಲಿ ಸ್ಪಷ್ಟವಾದ ಅಂತರಗಳಿವೆ. ಉದಾಹರಣೆಗೆ,ಓರ್ವ ವ್ಯಕ್ತಿ ವಾಹನ ಮಾರಾಟ ಮಾಡಿದರೆ ಆ ಖರೀದಿಸಿದ ವ್ಯಕ್ತಿಯು ಅದನ್ನು ತನ್ನ ಹೆಸರಿನಲ್ಲಿ ನೊಂದಾಯಿಸಿಕೊಳ್ಲಬೇಕು. ಹಾಗೆ ಮಾಡೈದ್ದರೆ ಹಳೆಯ ಮಾಲೀಕನಿಗೇ ದಂಡ ದ ರಷೀದಿ ರವಾನೆಯಾಗಲಿದೆ. ಅಷ್ಟೇ ಅಲ್ಲ ಚಲನ್ ನಿಯಮ ಉಲ್ಲಂಘಿಸಿದವನ ವಿಳಾಸಕ್ಕೆ ತಲುಪಿದಾಗ ದಂಡ ವಸೂಲಿಗೆ ಯಾವ  ಯಾಂತ್ರಿಕ ವ್ಯವಸ್ಥೆ ಇಲ್ಲ ಎನ್ನುತ್ತಾರೆ.

ಟ್ರಾಫಿಕ್ ಪೊಲೀಸ್ ಇಲಾಖೆ ತಮ್ಮ ಡೇಟಾಬೇಸ್ ಗಾಗಿ  ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ) ಮೇಲೆ ಅವಲಂಬಿತವಾಗಿರುವ ಕಾರಣ, ಕರ್ನಾಟಕದಲ್ಲಿ ನೋಂದಾಯಿಸಲಾದ ವಾಹನಗಳಿಗೆ ಮಾತ್ರವೇ ದಂಡ ವಿಧಿಸಲ್ಪಡುತ್ತಿದೆ. 
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp