ಬೆಂಗಳೂರು: ವೃದ್ಧರು, ವಿಶೇಷಚೇತನರಿಗೆ ಮತಗಟ್ಟೆಗೆ ಆಗಮಿಸಲು ಸಹಾಯ ಮಾಡಿದ ವಿದ್ಯಾರ್ಥಿಗಳು

ಹಿರಿಯ ನಾಗರಿಕರು ಮತ್ತು ವಿಕಲಾಂಗ ಚೇತನರಿಗೆ ಮತಗಟ್ಟೆಗೆ ತೆರಳಲು ಶಿವಾಜಿನಗರದ ಸರ್ಕಾರಿ ...
ಶಿವಾಜಿನಗರದ ಮತಗಟ್ಟೆಯಲ್ಲಿ ವೃದ್ಧರಿಗೆ ಸಹಾಯ ಮಾಡುತ್ತಿರುವ ಮಕ್ಕಳು
ಶಿವಾಜಿನಗರದ ಮತಗಟ್ಟೆಯಲ್ಲಿ ವೃದ್ಧರಿಗೆ ಸಹಾಯ ಮಾಡುತ್ತಿರುವ ಮಕ್ಕಳು
ಬೆಂಗಳೂರು: ಹಿರಿಯ ನಾಗರಿಕರು ಮತ್ತು ವಿಕಲಾಂಗ ಚೇತನರಿಗೆ ಮತಗಟ್ಟೆಗೆ ತೆರಳಲು ಶಿವಾಜಿನಗರದ ಸರ್ಕಾರಿ ಶಾಲೆಯ ಮಕ್ಕಳು ಸಹಾಯ ಮಾಡಿ ಗಮನ ಸೆಳೆದಿದ್ದಾರೆ.
ಶಿವಾಜಿನಗರದ ವಿಕೆಒ ಸರ್ಕಾರಿ ಶಾಲೆಯ 7 ಮತ್ತು 8ನೇ ತರಗತಿ ಮಕ್ಕಳು, ಸ್ಕೌಟ್ಸ್ ಮತ್ತು ಗೈಡ್ಸ್ ನ ತಂಡದವರು ಬೆಳಗ್ಗೆ 5.45ಕ್ಕೆ ಮತಗಟ್ಟೆಗಳಿಗೆ ಆಗಮಿಸಿ ಮತಗಟ್ಟೆ ಅಧಿಕಾರಿಗಳಿಗೆ ಸಹಾಯ ಮಾಡುತ್ತಿದ್ದ ದೃಶ್ಯ ಕಂಡುಬರುತ್ತಿತ್ತು. ನಂತರ 6.45ರ ಹೊತ್ತಿಗೆ ಮತಗಟ್ಟೆಗಳಿಗೆ ಮತದಾರರು ಬರಲು ಆರಂಭಿಸಿದರು. ಮಕ್ಕಳು ಹಿರಿಯರ ಮತ್ತು ವಿಶೇಷಚೇತನರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದರು. ಈ ಮೂಲಕ ಎಲ್ಲರ ಗಮನ ಸೆಳೆದರು.
ಜನರಿಗೆ ಹೇಗೆ ಸಹಾಯ ಮಾಡಬೇಕೆಂದು ನನಗೆ ಶಿಕ್ಷಕರು ಹೇಳಿಕೊಟ್ಟಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಮತಗಟ್ಟೆಗೆ ಬರುವ ಹಿರಿಯರು ಮತ್ತು ವಿಶೇಷ ಚೇತನರಿಗೆ ಸಹಾಯ ಮಾಡುತ್ತಿದ್ದೇವೆ ಎಂದನು 8ನೇ ತರಗತಿಯ ಅಬ್ದುಲ್ಲಾ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com