ವಿಟಿಯು ಸಹಾಯದಿಂದ ಬೆಂಗಳೂರು ವಿವಿಯಿಂದ ಡಿಜಿಟಲ್ ಮೌಲ್ಯಮಾಪನ

ಬೆಂಗಳೂರು ವಿಶ್ವವಿದ್ಯಾಲಯ ಈ ಬಾರಿ ಹೊಸ ರೀತಿಯ ಪರೀಕ್ಷಾ ಮೌಲ್ಯಮಾಪನ ವ್ಯವಸ್ಥೆ ಜಾರಿಗೆ ತಂದಿದ್ದು, ವಿಶ್ವೇಶ್ವರಯ್ಯ ತಾಂತ್ರಿಕ...
ಬೆಂಗಳೂರು ವಿವಿ
ಬೆಂಗಳೂರು ವಿವಿ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಈ ಬಾರಿ ಹೊಸ ರೀತಿಯ ಪರೀಕ್ಷಾ ಮೌಲ್ಯಮಾಪನ  ವ್ಯವಸ್ಥೆ ಜಾರಿಗೆ ತಂದಿದ್ದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ(ವಿಟಿಯು) ಸಹಾಯದಿಂದ ಡಿಜಿಟಲ್ ಮೌಲ್ಯಮಾಪನ ಮಾಡುತ್ತಿದೆ. ಈ ಮೂಲಕ 2,29 ಕೋಟಿ ರುಪಾಯಿ ಉಳಿತಾಯ ಮಾಡಿದೆ.
ಬೆಂಗಳೂರು ವಿವಿ ಸದ್ಯ ಡಿಜಿಟಲ್ ಮೌಲ್ಯ ಮಾಪನಕ್ಕೆ ಸಹಕಾರಿಯಾಗುವಂತೆ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದ್ದು. ಇದಕ್ಕಾಗಿ ಪ್ರತಿ ಸುತ್ತಿನಲ್ಲೂ 2.50 ಕೋಟಿ ರುಪಾಯಿ ವೆಚ್ಚ ಮಾಡುತ್ತಿದೆ.
ಡಿಜಿಟಲ್ ಮೌಲ್ಯ ಮಾಪನಕ್ಕಾಗಿ ಈಗಾಗಲೇ ಸ್ಕ್ಯಾನರ್, ಪ್ರಿಂಟರ್ ಮತ್ತು ಸರ್ವರ್ ಅನ್ನು ಖರೀದಿ ಮಾಡಿದ್ದು, ಸಾಫ್ಟ್ ವೇರ್ ಸಹಾಯ ನೀಡಲು ವಿಟಿಯು ಒಪ್ಪಿಕೊಂಡಿದೆ.
ಈ ವರ್ಷ ಏಪ್ರಿಲ್ 27ರಿಂದ ಬೆಂಗಳೂರು ವಿವಿಯ ಪರೀಕ್ಷೆಗಳು ಆರಂಭವಾಗುತ್ತಿದ್ದು, ಈ ಬಾರಿ ಡಿಜಿಟಲ್ ಮೌಲ್ಯಮಾಪನ ಜಾರಿಗೊಳಿಸಲು ನಿರ್ಧರಿಸಲಾಗಿದೆ. ವಿಟಿಯು ಈಗಾಗಲೇ ಡಿಜಿಟಲ್ ಮೌಲ್ಯಮಾಪನದಲ್ಲಿ ಯಶಸ್ವಿಯಾಗಿದ್ದು, ಅವರು ಈಗ ನಮಗೆ ಸಹಾಯ ಮಾಡುತ್ತಿದ್ದಾರೆ ಎಂದು ಬೆಂಗಳೂರು ವಿವಿ ಕುಲಪತಿ ಕೆಆರ್ ವೇಣುಗೋಪಾಲ್ ಅವರು ತಿಳಿಸಿದ್ದಾರೆ.
ಬೆಂಗಳೂರು ವಿವಿಗೆ 15 ಲಕ್ಷ ಉತ್ತರ ಸ್ಕ್ರಿಪ್ಟ್ ಗಳು ಬಂದಿದ್ದು, ಅದನ್ನು ಒಎಂಆರ್ ಸೀಟ್ ಗೆ ದಾಖಲಿಸಲಾಗಿದೆ. ಡಿಜಿಟಲ್ ಮೌಲ್ಯ ಮಾಪನಕ್ಕಾಗಿ ನಮ್ಮ ಸಿಬ್ಬಂದಿ ವಿಟಿಯುನಿಂದ ತರೆಬೇತಿ ಸಹ ಪಡೆದಿದ್ದಾರೆ. ಅವರು ಅಂಕಗಳನ್ನು ಆನ್ ಲೈನ್ ನಲ್ಲೇ ನಮೂದಿಸುತ್ತಾರೆ ಎಂದು ವೇಣುಗೋಪಾಲ್ ಅವರು ಹೇಳಿದ್ದಾರೆ.
ಡಿಜಿಟಲ್ ಮೌಲ್ಯಮಾಪನ ಜಾರಿಗೆ ಬಂದರ ನಂತರ ಪ್ರತಿ ಸುತ್ತಿನ ಪರೀಕ್ಷಾ ವೆಚ್ಚ 21 ಲಕ್ಷಕ್ಕೆ ಇಳಿಯಲಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com