ರಾಯಚೂರು: ಮಧು ಸಾವಿನ ತನಿಖೆ ಸಿಐಡಿಗೆ ಹಸ್ತಾಂತರ

ರಾಯಚೂರು ನಗರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವಿನ ತನಿಖೆಯನ್ನು ಸಿಐಡಿಗೆ ಒಪ್ಪಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಮಧು ಪತ್ತಾರ್
ಮಧು ಪತ್ತಾರ್
ರಾಯಚೂರು: ರಾಯಚೂರು ನಗರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವಿನ ತನಿಖೆಯನ್ನು ಸಿಐಡಿಗೆ ಒಪ್ಪಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ತೀವ್ರ ಆಕ್ರೋಶ ಹಾಗೂ ಒತ್ತಡಗಳು ಬಂದ ನಂತರ ಸರ್ಕಾರ ಮಧು ಅತ್ಯಾಚಾರ ಹಾಗೂ ಕೊಲೆ ತನಿಖೆಯನ್ನು ಸಿಐಡಿಗೆ ಒಪ್ಪಿಸಲು ತೀರ್ಮಾನಿಸಿದೆ.
ರಾಯಚೂರಿನ ಡಿವೈಎಸ್ಪಿ ನೇತೃತ್ವದಲ್ಲಿ ಈ ತನಿಖೆ ನಡೆಯುತ್ತಿದ್ದು ಸಾಮಾಜಿಕ ತಾಣದಲ್ಲಿ ತೀವ್ರಗೊಂಡ ಅಭಿಯಾನದ ಹಿನ್ನೆಲೆಯಲ್ಲಿ ಈಗ ಸಿಐಡಿ ಎಸ್ಪಿ ಶರಣಪ್ಪ, ಅನೂಪ್ ಶೆಟ್ಟಿ ಅವರ ನೇತೃತ್ವದಲ್ಲಿ ತನಿಖೆ ನಡೆಸಲು ತೀರ್ಮಾನಿಸಲಾಗಿದೆ/
ರಾಯಚೂರಿನಲ್ಲಿರುವ ಮೃತ ವಿದ್ಯಾರ್ಥಿನಿಯ ಪೋಷಕರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿದ್ದರು. ಆಗ ಪೋಷಕರು ತಮಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿದ್ದರು.ಇದೀಗ ಸಿದ್ದರಾಮಯ್ಯ ಗೃಹಸಚಿವ ಎಂ.ಬಿ ಪಾಟೀಲ್ ಗೆ ವಿಚಾರ ತಿಳಿಸಿದ್ದು ಗೃಹಸಚಿವರು  ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಪ್ರಕರಣ ತನಿಖೆಯನ್ನು ಸಿಐಡಿಗೆ ವಹಿಸಲು ಸೂಚಿಸಿದ್ದಾರೆ.'
ನವೋದಯ ಇಂಜಿನಿಯರಿಂಗ್ ಕಾಲೇಜಿನ 5ನೇ ಸೆಮಿಸ್ಟರ್ ವಿದ್ಯಾರ್ಥಿನಿ ಮದು ಏ.3ರಂದು ಪರೀಕ್ಷೆ ಬರೆಯಲು ಹೋಗಿದ್ದವಳು ಹಿಂತಿರುಗಿರಲಿಲ್ಲ. . ಏಪ್ರಿಲ್ 16ರಂದು ಮಧು ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮೊದಲಿಗೆ ಇದು ಆತ್ಮಹತ್ಯೆ ಎಂದು ಶಂಕಿಸಲಾಗಿದ್ದು ಬಳಿಕ ಅತ್ಯಾಚಾರ ಹಾಗೂ ಕೊಲೆ ಎಂಬುದು ತಿಳಿದಿದೆ.ಘಟನೆಗೆ ಸಂಬಂಧಿಸಿ ಇದಾಗಲೇ ಸುದರ್ಶನ್ ಎಂಬಾತನನ್ನು ಬಂಧಿಸಲಾಗಿದೆ.
ಇದೀಗ ಭಾನುವಾರ ಸಿಐಡಿ ತಂಡ ರಾಯಚೂರಿಗೆ ಆಗಮಿಸಿ ಕೊಲೆ ಕುರಿತ ಮಾಹಿತಿ ಕಲೆಹಾಕುವ ಸಾಧ್ಯತೆಗಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com