ಛೇ... ನೆಮ್ಮದಿಯಾಗಿ ಧಮ್ ಹೊಡೆಯಂಗೂ ಇಲ್ಲ..! ಬಾರ್, ರೆಸ್ಟೋರೆಂಟ್ ನಲ್ಲೂ ಸ್ಮೋಕಿಂಗ್ ಬ್ಯಾನ್!

ಧೂಮಪಾನಿಗಳು ಇನ್ನು ಮುಂದೆ ಬಾರ್, ಪಬ್, ರೆಸ್ಟೋರೆಂಟ್ ಗಳಲ್ಲಿ ಸಹ ನೆಮ್ಮದಿಯಾಗಿ ಸ್ಮೋಕ್ ಮಾಡೋಕಾಗಲ್ಲ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಧೂಮಪಾನಿಗಳು ಇನ್ನು ಮುಂದೆ ಬಾರ್, ಪಬ್, ರೆಸ್ಟೋರೆಂಟ್ ಗಳಲ್ಲಿ ಸಹ ನೆಮ್ಮದಿಯಾಗಿ ಸ್ಮೋಕ್ ಮಾಡೋಕಾಗಲ್ಲ. ತಮ್ಮ ಪರವಾನಗಿ ಒಪ್ಪಂದಗಳಿಗೆ ಸಂಬಂಧಿಸಿ ರಾಜ್ಯದ ಬಾರ್, ಪಬ್ ಹಾಗೂ ಪಂಚತಾರಾ ಹೋಟೆಲ್ ಗಳಲ್ಲಿ  ಧೂಮಪಾನ ಕೊಠಡಿಗಳನ್ನು ಕಡ್ಡಾಯವಾಗಿ ತೆಗೆದುಹಾಕುವಂತೆ ರಾಜ್ಯ ಅಬಕಾರಿ ಇಲಾಖೆ ಆದೇಶಿಸಿದೆ.
ಧೂಮಪಾನಿಗಳಲ್ಲದವರಿಗೆ ಧೂಮಪಾನಿಗಳಿಂದ ತೊಂದರೆಯಾಗುವುದನ್ನು ತಪ್ಪಿಸುವ ಸಲುವಾಗಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಆದೇಶದಲ್ಲಿ ವಿವರಿಸಲಾಗಿದೆ. ಧೂಮಪಾನಿಗಳಲ್ಲದವರ ರಕ್ಷಣೆಗೆ ಸಂಬಂಧಿಸಿದ ಕಾಯ್ದೆಯ ಅನುಸಾರ  ಧೂಮಪಾನ ಕೊಠಡಿಗಳನ್ನು ಹೊಂದಲು ಯಾವುದೇ ಹೋಟೆಲ್ ಗಳಿಗೆ ಅವಕಾಶವಿಲ್ಲ. ಇದು ಎಲ್ಲಾ ಧೂಮಪಾನಿಗಳ ಪಾಲಿಗೆ ಪ್ರಮುಖ ಗ್ರಾಹಕ ಹಕ್ಕು ಸಮಸ್ಯೆಯಾಗಿಯೂ ಉದ್ಭವಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ಈಗಾಗಲೇ ಸಿಗರೇಟ್ ಹಾಗೂ ಇತರ ತಂಬಾಕು ಉತ್ಪನ್ನಗಳ ಸೇವನೆ ನಿಷೇಧ ಕಾಯ್ದೆ(ಸಿಒಟಿಪಿಎ) 2013ರ ಅಡಿಯಲ್ಲಿ ನಿಷೇಧಿಸಲಾಗಿದೆ. ಈ ಕಾಯ್ದೆ ಎಲ್ಲಾ ರೀತಿಯ  ತಂಬಾಕು ಉತ್ಪನ್ನಗಳ ಜಾಹೀರಾತು ಹಾಗೂ ಪ್ರಸಾರವನ್ನು ನಿಷೇಧಿಸುತ್ತದೆ.
ಶಾಲಾ ಆವರಣದ 100 ಗಜಗಳಷ್ಟು ದೂರ ಹಾಗೂ ಅಪ್ರಾಪ್ತರಿಗೆ ಸಹ ತಂಬಾಕು ಮಾರಾಟ ನಿಷೇಧ ಕಾನೂನು ಜಾರಿಯಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com