ಮತದಾರರ ಪಟ್ಟಿಯಿಂದ 1.5 ಲಕ್ಷಕ್ಕೆ ಹೆಚ್ಚು ಹೆಸರುಗಳು ನಾಪತ್ತೆ, ಆಯೋಗದಿಂದ ತನಿಖೆಗೆ ಆದೇಶ

ಲೋಕಸಭೆ ಚುನಾವಣೆಯಲ್ಲಿ ಕಳಪೆ ಮತದಾನ ಮಾಡಿದ್ದ ಬೆಂಗಳುರಿಗರು ಸಾಮಾಜಿಕ ತಾಣ ಸೇರಿದಂತೆ ಮಾದ್ಯಮಗಲಲ್ಲಿ ವ್ಯಾಪಕ ಟೀಕೆಗೆ ಗುರಿತ್ಯಾಗುತ್ತಿದ್ದಾರೆ.
ಸಂಗ್ರಹ ಚಿತ್ರ್
ಸಂಗ್ರಹ ಚಿತ್ರ್
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಳಪೆ ಮತದಾನ ಮಾಡಿದ್ದ ಬೆಂಗಳುರಿಗರು ಸಾಮಾಜಿಕ ತಾಣ ಸೇರಿದಂತೆ ಮಾದ್ಯಮಗಲಲ್ಲಿ ವ್ಯಾಪಕ ಟೀಕೆಗೆ ಗುರಿತ್ಯಾಗುತ್ತಿದ್ದಾರೆ. ಈ ನಡುವೆ ಭಾರೀ ಸಂಖ್ಯೆಯ ಅರ್ಹ ಮತದಾದರು  ಮತದಾನ ಕೇಂದ್ರಗಳಿಗೆ ಹೋದಾಗ ಮತಪಟ್ಟಿಯಲ್ಲಿ ತಮ್ಮ ಹೆಸರು ನಾಪತ್ತೆಯಾಗಿರುವದನ್ನು ಕಂಡು ಆತಂಕಿತರಾಗಿದ್ದಾರೆ. ಹಲವಾರು ಜನರು ಈ ಬಗ್ಗೆ ದೂರು ಅಲ್ಲಿಸಿದ ಬಳಿಕ ರಾಜ್ಯ ಚುನಾವಣಾ ಆಯೋಗವು ಹೆಸರುಗಳ ನಾಪತ್ತೆ ಕುರಿತಂತೆ ವಿಚಾರಣೆಗೆ ಆದೇಶ ನೀಡಿದೆ. ನೂರಾರು ಜನರು ತಮ್ಮ ಹೆಸರನ್ನು ಯಾವ ಕಾರಣಕ್ಕಾಗಿ ಪಟ್ಟಿಯಿಂದ ಕೈಬಿಡಲಾಗಿದೆ ಎನ್ನುವುದನ್ನೇ ತಿಳಿಯದೆ ಮತದಾನ ಮಾಡಲೂ ಅವಕಾಶವಿಲ್ಲದೆ ನಿರಾಶೆಯಿಂದ ಹಿಂತಿರುಗಬೇಕಾಗಿ ಬಂದಿತ್ತು.ಗುರುವಾರ (ಏ. 18)ರಂದು ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆದಿದ್ದು ಆ ದಿನ ಇಂತಹಾ ಸಾವಿರಾರು ಹೆಸರುಗಳು ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿರುವುದು ಕಂಡುಬಂದಿದೆ.
"ನಾವು ವಿಚಾರಣೆಗೆ ಆದೇಶಿಸಿದ್ದೇವೆ. ಆದರೆ ಮೊದಲನೆಯದಾಗಿ, ಇದು ಈ ವರ್ಷ ಆದ ಅಚಾತುರ್ಯವಲ್ಲ. ಅಲ್ಲದೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ತೆಗೆದು ಹಾಕಲು ಹಾಗು ಸೇರಿಸಲು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಬೇಕು.ಹಾಗಾಗಿ ಅರ್ಜಿ ಸಲ್ಲಿಸಿದವರ ವಿಚಾರಣೆ ಬಳಿಕವೇ ಅವರ ಹೆಸರನ್ನು ಪಟ್ಟಿಯಿಂದ ಅಳಿಸಲಾಗುವುದು" ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ ಪಟ್ಟಿಯಲ್ಲಿಹಲವರ ಹೆಸರು ನಾಪತ್ತೆಯಾಗಿದ್ದರ ಕುರಿತು ಮಾತ್ರ ದೂರು ನೀಡಿದ್ದರೂ, ಈ ಸಮಸ್ಯೆಯನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ. ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಯ ಖಾಸಗಿ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿರುವ ಪ್ರಹ್ಲಾದ್ ಪಿಎಸ್ದೂರಿನ ಆಧಾರದ ಮೇಲೆ ಸಿಇಒ ಕಛೇರಿಯು ಜಿಲ್ಲಾ ಚುನಾವಣಾಧಿಕಾರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಮೀಷನರ್ ಗಳಿಗೆ ನೋಟೀಸ್ ನೀಡಲಾಗಿದೆ.
ಸರಿಯಾದ ವಿಧಾನವನ್ನು ಅನುಸರಿಸದೆ ಯಾವುದೇ ಹೆಸರುಗಳನ್ನು ಅಳಿಸಲಾಗಿಲ್ಲ ಎಂದು ಬಿಬಿಎಂಪಿ ಕಮಿಷನರ್ ಎನ್. ಮಂಜುನಾಥ ಪ್ರಸಾದ್ ಹೇಳಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಆಯೋಗದ ನಿರ್ದೇಶನಗಳ ಪ್ರಕಾರ ಕಟ್ಟುನಿಟ್ಟಾಗಿ ಮಾಡಲ್ಪಟ್ಟಿದೆ ಮತ್ತು ಮತದಾರರ ಪಟ್ಟಿಯನ್ನು ಪರಿಷ್ಕರಿಸುವಾಗ ಬೂತ್ ಮಟ್ಟದ ಅಧಿಕಾರಿಗಳು ವಿವರಗಳನ್ನು ಸಂಗ್ರಹಿಸಲು ಪ್ರತಿಯೊಬ್ಬರ ಮನೆಗೆ ಭೇಟಿ ನೀಡಿದ್ದಾರೆ ಎಂದು ಅವರು ಹೇಳಿದರು.ಮನೆಗಳನ್ನು ಬದಲಾಯಿಸುವ ಜನರು ಒಂದು ನಿರ್ದಿಷ್ಟ ಮತಗಟ್ಟೆಯಲ್ಲಿ ಮೊದಲು ಮತ ಚಲಾಯಿಸಿದ್ದರೆ ಅವರ ಹೆಸರು ಇನ್ನೂ ಹಳೆ ಮತದಾರರ ಪಟ್ಟಿಯಲ್ಲಿದೆ. ಎಂದು ಸಂಜೀವ್ ಕುಮಾರ್ ಹೇಳಿದ್ದಾರೆ. ಆದರೆ ಹೊಸ ನಿವಾಸಿಗಳು ವ್ಯಕ್ತಿಯು ಅಲ್ಲಿ ವಾಸಿಸುವುದಿಲ್ಲ ಎಂದು ಹೇಳಿಕೆ ನೀಡಿದರೆ, ಅಂತಹ ಹೆಸರುಗಳ ನಾಪತ್ತೆಗೆ ಕಾರಣವೇನೆಂದು ವಿಚಾರಣೆ ಬಳಿಕವಷ್ಟೇ ಹೇಳಲಾಗುತ್ತದೆ "ಜನರು ತಮ್ಮ ಹೆಸರುಗಳನ್ನು ಸೇರಿಸಲು ಚುನಾವಣಾ ಮೊಬೈಲ್ ಅಪ್ಲಿಕೇಷನ್ ಅನ್ನು ಬಳಸಿಕೊಳ್ಲಬೇಕು."
ಪ್ರಹ್ಲಾದ್ ಸಲ್ಲಿಸಿರುವ ಅರ್ಜಿಯಲ್ಲಿ ನಗರದಲ್ಲಿನ ಮತದಾರರ 1,50,000 ಕ್ಕಿಂತಲೂ ಹೆಚ್ಚು ಹೆಸರುಗಳು ಪಟ್ಟಿಯಿಂದ ಅಳಿಸಲ್ಪಟ್ಟಿದೆ ಮತ್ತು ಇದು ಒಂದು ಜಿರ್ದಿಷ್ಟ ರಾಜಕೀಯ ಪಕ್ಷದ ಭವಿಷ್ಯದ ಮೇಲೆ ಪ್ರತಿಕೂಲವಾಗಿ ಪರಿಣಮಿಸುತ್ತದೆ ಎಂದು ದೂರಿದ್ದಾರೆ.ಆ ಪಕ್ಷದ ಅಭ್ಯರ್ಥಿಗೆ ಮತದಾನ ಮಾಡುವ ಮತದಾರರನ್ನು ಗುರಿಯಾಗಿಸಿ  ಇಂತಹಾ ಕೆಲಸ ಮಾಡಲಾಗಿದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದರು."ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ ಮತ್ತು ಹೆಸರುಗಳನ್ನು ಅಳಿಸಲು ಕಾರಣಗಳನ್ನು ಕಂಡುಹಿಡಿಯಲು ವಿವರವಾದ ತನಿಖೆ ನಡೆಸಬೇಕು " ಅವರು ಹೇಳಿದರು.
ಮತದಾನದ ದಿನ ಬೆಂಗಳೂರಿನ ದಕ್ಷಿಣ, ಮಧ್ಯ ಮತ್ತು ಉತ್ತರ ಎಲ್ಲ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಮತದಾರರ ಹೆಸರು ಚುನಾವಣಾ ಮತಪಟ್ಟಿಯಿಂದ ಕಾಣೆಯಾಗಿದೆ.ಈ ಕುರಿತು ಚುನಾವಣಾ ಆಯೋಗ ತನಿಖೆ ಕೈಗೊಳ್ಳಬೇಕೆಂದು ಹಿರಿಯ ಬಿಜೆಪಿ ನಾಯಕ ಆರ್. ಅಶೋಕ್ ಸಹ ಆಗ್ರಹಿಸಿದ್ದಾರೆ. ಮತದಾರರ ಹೆಸರು ಅಳಿಸಿಹಾಕುವುದರ ಹಿಂದೆ ಕೆಲ ಅಧಿಕಾರಿಗಳ ಕೈವಾಡವಿದೆ ಎಂದು ಹಲವು ಬಿಜೆಪಿ ನಾಯಕರು ದೂರಿದ್ದಾರೆ. ಈ ಸಂಬಂಧ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಬಿಜೆಪಿ ಚಿಂತನೆ ನಡೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com