ಬೆಂಗಳೂರು: ಕೊಂಡುಕೊಳ್ಳುವ ನೆಪದಲ್ಲಿ ಬಂದು ದಾಖಲೆ ಸಮೇತ ಬೈಕ್ ಜೊತೆ ಪರಾರಿ!

ಖರೀದಿದಾರರ ನೆಪದಲ್ಲಿ ಬಂದ ವ್ಯಕ್ತಿ ಯುವಕನೊಬ್ಬನ ಯಮಹಾ FZ ಬೈಕ್ ಹಾಗೂ ಅದರ ದಾಖಲೆಗಳೊಂದಿಗೆ ಪರಾರಿಯಾಗಿರುವ ಘಟನೆ ಬೆಂಗಳೂರಿನ ...

Published: 22nd April 2019 12:00 PM  |   Last Updated: 22nd April 2019 01:03 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SD SD
Source : The New Indian Express
ಬೆಂಗಳೂರು: ಖರೀದಿದಾರರ ನೆಪದಲ್ಲಿ ಬಂದ  ವ್ಯಕ್ತಿ ಯುವಕನೊಬ್ಬನ ಯಮಹಾ FZ ಬೈಕ್ ಹಾಗೂ ಅದರ ದಾಖಲೆಗಳೊಂದಿಗೆ ಪರಾರಿಯಾಗಿರುವ ಘಟನೆ ಬೆಂಗಳೂರಿನ ಹೆಬ್ಬಾಳದ ಕನಕನಗರದಲ್ಲಿ ನಡೆದಿದೆ.

ಬನಶಂಕರಿ ಮೂರನೇ ಹಂತದ ಹೊಸಕೆರೆಹಳ್ಳಿ ನಿವಾಸಿ ಸನತ್ ಕುಮಾರ್ ಭಟ್ OLX  ನಲ್ಲಿ ತಮ್ಮ ಬೈಕ್ ಮಾರಾಟ ಮಾಡುವ ಜಾಹೀರಾತು ನೀಡಿದ್ದರು. ಜೊತೆಗೆ ತಮ್ಮ ಮೊಬೈಲ್ ನಂಬರ್ ಕೂಡ ನೀಡಿದ್ದರು.

ಏಪ್ರಿಲ್ 19ರಂದು ಇಬ್ಬರು ವ್ಯಕ್ತಿಗಳು ಅವರನ್ನು ಸಂಪರ್ಕಿಸಿದ್ದರು, ಒಬ್ಬ ರಾಹುಲ್ ಎಂದು ಪರಿಚಯಿಸಿಕೊಂಡಿದ್ದ ತಾನು ಹೆಬ್ಬಾಳದಲ್ಲಿ ಇರುವುದಾಗಿ ತಿಳಿಸಿದ್ದ, ಹೆಬ್ಬಾಳದಲ್ಲಿ ಕೆಲಸ ಇರುವುದಾಗಿ ಹೇಳಿದ್ದ ಸನತ್ ಕುಮಾರ್ ಭಟ್ ಸಂಜೆ ಭೇಟಿ ಮಾಡುವುದಾಗಿ ತಿಳಿಸಿದ್ದರು,  ಸಂಜೆ 6.15ಕ್ಕೆ ಭಟ್ ಹೆಬ್ಬಾಳಕ್ಕೆ ಬಂದು ರಾಹುಲ್ ನನ್ನು ಭೇಟಿ ಮಾಡಿದ್ದರು. 

ನನಗೆ ಬೈಕ್ ಇಷ್ಟವಾಗಿದ್ದು, ಅದನ್ನು ತಮ್ಮ ಕುಟುಂಬಸ್ಥರಿಗೆ ತೋರಿಸಬೇಕು ಎಂದು ಹೇಳಿದ,. ಜೊತೆಗೆ ತಮ್ಮ ಮನೆ ಪಕ್ಕದಲ್ಲೇ ಇರುವುದಾಗಿ ತಿಳಿಸಿದ್ದ.ಭಟ್ ನನ್ನು ಹಿಂದೆ ಕೂರಿಸಿಕೊಂಡು ಹೆಬ್ಬಾಳದ ಕನಕನಗರದಲ್ಲಿರುವ 6ನೇ ಕ್ರಾಸ್ ಬಳಿ ಬಂದ ಆರೋಪಿ ರಾಹುಲ್,ಮನೆಯವರಿಗೆ ತೋರಿಸಲು ಆರ್ ಸಿ ಬುಕ್ ಮತ್ತು ದಾಖಲಾತಿ ನೀಡಬೇಕೆಂದು ಕೇಳಿದ್ದಾನೆ, ಅದಕ್ಕೆ ಒಪ್ಪಿದ ಸನತ್ ದಾಖಲಾತಿಗಳನ್ನು ನೀಡಿದ್ದಾರೆ, ಭಟ್ ನೀಡಿದ ದಾಖಲೆಗಳೊಂದಿಗೆ ರಾಹುಲ್ ಬೈಕ್ ಸಮೇತ ಅಲ್ಲಿಂದ ಪರಾರಿಯಾಗಿದ್ದಾನೆ.

ಕೆಲ ಹೊತ್ತು ಕಾದ ಭಟ್ ಆತನ ಮೊಬೈಲ್ ಗೆ ಕರೆ ಮಾಡಿದ್ದಾರೆ, ಆದರೆ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು, ನಂತರ ತಾನು ಮೋಸ ಹೋಗಿರುವುದ್ನು ಅರಿತ ಭಟ್ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, 

Stay up to date on all the latest ರಾಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp