ಬೆಂಗಳೂರು: ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವು

ಭಾನುವಾರ ಸುರಿದಿದ್ದ ಮಳೆಯ ಸಮಯದಲ್ಲಿ ಫುಟ್ ಪಾತಿನಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿ ವಿದ್ಯುತ್ ಕೇಬಲ್ ತುಳಿದು ದುರಂತ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ವೀವರ್ಸ್ ಕಾಲೋನಿ ಬಳಿ ನಡೆದಿದೆ.

Published: 22nd April 2019 12:00 PM  |   Last Updated: 22nd April 2019 11:44 AM   |  A+A-


File Image

ಸಂಗ್ರಹ ಚಿತ್ರ

Posted By : RHN RHN
Source : The New Indian Express
ಬೆಂಗಳೂರು: ಭಾನುವಾರ ಸುರಿದಿದ್ದ ಮಳೆಯ ಸಮಯದಲ್ಲಿ ಫುಟ್ ಪಾತಿನಲ್ಲಿ ನಡೆದು ಹೋಗುತ್ತಿದ್ದ  ವ್ಯಕ್ತಿ ವಿದ್ಯುತ್ ಕೇಬಲ್ ತುಳಿದು ದುರಂತ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ  ವೀವರ್ಸ್ ಕಾಲೋನಿ ಬಳಿ ನಡೆದಿದೆ.

ಬಾಲಕೃಷ್ಣ,(38) ಎಂಬ ವ್ಯಕ್ತಿ ಹೀಗೆ ಕೇಬಲ್ ತಂತಿ ತುಳಿದು ಸಾವನ್ನಪಿದ್ದಾರೆ.ಮೃತರು ಖಾಸಗಿ ಕೈಮಗ್ಗ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು ದುರ್ಘಟನೆ ನಡೆದಾಗ ಅವರು ರಾತ್ರಿ ಪಾಳಿಯ ಕೆಲಸಕ್ಕೆ ತೆರಳುತ್ತಿದ್ದರು,

ಪೋಲೀಸರು ಈ ಪ್ರಕರಣವನ್ನು ಅಸ್ವಾಭಾವಿಕ ಸಾವು ಎಂದು ಅನುಮಾನಿಸಿದ್ದು ಮಿನಲ್ ಪ್ರೊಸೀಜರ್ ನ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ."ಆದಾಗ್ಯೂ, ತನಿಖೆ ಮುಗಿದ ನಂತರ ಮತ್ತು ನಾವು ಬೆಸ್ಕಾಮ್ (ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ) ಅಧಿಕಾರಿಗಳ ಅಲಕ್ಷ್ಯ ಎಂದು ಕಂಡುಬಂದರೆ ನಾವು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತೇವೆ" ಎಂದು ಪೋಲೀಸರು ಹೇಳಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ವ್ಯಕ್ತಿಗೆ ವಿದ್ಯುತ್ ಆಗಾತವಾಗಿದ್ದರೆ ಬಿಬಿಎಂಪಿ ವಿರುದ್ಧನಿರ್ಲಕ್ಷ್ಯದ ಪ್ರಕರಣವನ್ನು ದಾಖಲಿಸಲಾಗುತ್ತದೆ.ಆದರೆ ಬೆಸ್ಕಾಂ ಹೊರಡಿಸಿದ ಒಂದು ಸುತ್ತೋಲೆಯು ಸಾವಿನ ನಿಖರವಾದ ಕಾರಣವನ್ನು ಕುರಿತು ಪ್ರಕರಣ ದಾಖಲಿಸುವ ಮುನ್ನ ತನಿಖೆ ನಡೆಸಬೇಕು ಎಂದು ಹೇಳಿದೆ.

ಬಾಲಕಕೃಷ್ಣ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಬರುತ್ತಿರಬೇಕಾದರೆ  ಮಳೆಯ ಸಮಯದಲ್ಲಿ ಭಾರಿ ಗಾಳಿಯಿಂದಾಗಿ ಎರಡು ಕೇಬಲ್ ತಂತಿಗಳು ಅವರ ಎದುರಿಗೆ ಬಿದ್ದಿದ್ದು ಅದನ್ನು ತುಳಿದಿದ್ದರಿಂದ ಅವರು ವಿದ್ಯುದಾಘಾತವಾಗಿ ತೆರೆದ ಚರಂಡಿಗೆ ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ಪತ್ರಿಕೆ ಜತೆ ಮಾತನಾಡಿದ ಬಾಲಕೃಷ್ಣ ಕುಟುಂಬ "ವಾರಾಂತ್ಯದಲ್ಲಿ ಅವರು ದೇವಸ್ಥಾನಕ್ಕೆ ತೆರಳಿದ್ದರು.ಹಾಗೆಯೇ ರಾತ್ರಿ ಪಾಳಿಗಾಗಿ  ಕಾರ್ಖಾನೆಗೆ ತೆರಳುವ ಮೊದಲು ಭಕ್ತರಿಗೆ ಆಹಾರವನ್ನು ನೀಡಿದರು. ಬನಶಂಕರಿಯಲ್ಲಿ ಭಾನುವಾರ ಮಳೆಯಾಗಿದ್ದು ನಮ್ಮ ಮನೆಯವರನ್ನು ಕಳೆದುಕೊಂಡಿರುವುದು ನಮಗೆ ಜೀವನ ಸಾಗಿಸಲಿಕ್ಕೂ ಕಠಿಣವಾಗಿದೆ. ದುರಂತದ ಬಳಿಕ ಯಾವ ಬಿಬಿಎಂಪಿ ಅಧಿಕಾರಿಗಳೂ ನಮ್ಮತ್ತ ಬಂದು ಸಹಾಯ ಮಾಡಲಿಲ್ಲ. ನಮ್ಮವರು ತಿಂಗಳಿಗೆ ರೂ 8,000 ಗಳಿಸುತ್ತಿದ್ದರು. ಆದರೆ  12 ವರ್ಷ ವಯಸ್ಸಿನ ಮಗಳು ಇರುವುದರಿಂದ ಜೀವನೋಪಾಯವನ್ನು ನಿರ್ವಹಿಸುವುದು ಕಷ್ಟಕರವಾಗಿದೆ  ಎಂದು ಅವರು ಹೇಳಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp