ಬೆಂಗಳೂರು: ಅಕ್ರಮ ಸಂಬಂಧ ವಿರೋಧಿಸಿದ್ದ ಪತ್ನಿಯ ಕೊಲೆ

ಅನೈತಿಕ ಸಂಬಂಧಕ್ಕೆ ವಿರೋಧಿಸಿದ ಕಾರಣ ಪತಿಯೇ ಪತ್ನಿಯನ್ನು ಕೊಲೆಗೈದಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯ ದೊಡ್ಡತೊಗೂರಿನಲ್ಲಿ ನಡೆದಿದೆ.

Published: 22nd April 2019 12:00 PM  |   Last Updated: 22nd April 2019 09:39 AM   |  A+A-


Man kills wife after she opposes affair

ಬೆಂಗಳೂರು: ಅಕ್ರಮ ಸಂಬಂಧ ವಿರೋಧಿಸಿದ್ದ ಪತ್ನಿಯ ಕೊಲೆ

Posted By : RHN RHN
Source : The New Indian Express
ಬೆಂಗಳೂರು: ಅನೈತಿಕ ಸಂಬಂಧಕ್ಕೆ ವಿರೋಧಿಸಿದ ಕಾರಣ ಪತಿಯೇ ಪತ್ನಿಯನ್ನು ಕೊಲೆಗೈದಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯ ದೊಡ್ಡತೊಗೂರಿನಲ್ಲಿ ನಡೆದಿದೆ. ಶನಿವಾರ ರಾತ್ರಿ ನಡೆದಿದ್ದ ಈ ಪ್ರಕರಣದ ಆರೊಪಿ ರಮೇಶ್‌ ಬಾಬು (33) ಎಂಬಾತನನ್ನು ಎಲೆಕ್ಟ್ರಾನಿಕ್ ಸಿಟಿಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ರಮೇಶ್ ಕಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದು ಈತ ತನ್ನ ಪತ್ನಿ ಪ್ರಿಯಾಂಕಾ (26)ಳನ್ನು ಕೊಲೆ ಮಾಡಿದ್ದಾನೆ.

ಆಂಧ್ರ ಮೂಲದವರಾದ ಈ ದಂಪತಿ ಕಳೆದ ಎಂಟು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಅವರಿಗೆ ಆರು ವರ್ಷದ ಹೆಣ್ಣು ಮಗುವೂ ಇದ್ದು ಅವಳನ್ನು ಪ್ರಿಯಾಂಕಾ ಪೋಷಕರ ಬಳಿ ಬಿಡಲಾಗಿತ್ತು. ಆರೋಪಿಗೆ ಬೇರೊಬ್ಬ ಮಹಿಳೆಯೊಡನೆ ಸಂಬಂಧವಿತ್ತು. ಇದನ್ನು ಅರಿತ ಪತ್ನಿ ಪ್ರಿಯಾಂಕಾ ಪತಿಯನ್ನು ವಿರೋಧಿಸಿದ್ದಾರೆ. ಇದಕ್ಕಾಗಿ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿದ್ದವು.

ಶನಿವಾರ ಸಹ ರಮೇಶ್ ಬಾಬು ಮದ್ಯಪಾನ ಮಾಡಿ ಮನೆಗೆ ಬಂದಿದ್ದನು. ಆಗ ಮತ್ತೆ ಪರಸ್ತ್ರೀ ಸಂಬಂಧದ ಕುರಿತು ಮಾತುಗಳು ಬಂದಾಗ ಇಬ್ಬರ ನಡುವುನ ಜಗಳ ತಾರಕಕ್ಕೇರಿದೆ.ಆ ಹಂತದಲ್ಲಿ ಆರೋಪಿಯು ಪ್ರಿಯಾಂಕಾ ಮುಖ, ಕುತ್ತಿಗೆ ಭಾಗದಲ್ಲಿ ಹಲ್ಲೆ ನಡೆಸಿದ್ದಾನೆ. ಪ್ರಿಯಾಂಕಾ ಮೂಗು, ಬಾಯಿಯಲ್ಲಿ ರಕ್ತಸ್ರಾವವಾದಾಗ ಆರೋಪಿ ರಮೇಶ್ ಆಕೆಯ ಕುತ್ತಿಗೆ ಹಿಸುಕಿ, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಕೋಣೆಯಲ್ಲಿನ ಫ್ಯಾನ್ ಗೆ ಸೀರೆಯಿಂದ ಸಿಕ್ಕಿಸುವ ಮೂಲಕ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಬಿಂಬಿಸಲು ಹೊರಟಿದ್ದನು.

ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಜೋರಾಗಿ ಕೂಗಿದ ರಮೇಶ್ ಮಾತಿಗೆ ನೆರೆಹೊರೆಯವರು ಗಾಬರಿಗೊಂಡು ಪೋಲೀಸರಿಗೆ ಮಾಹಿತಿ ತಿಳಿಸಿದ್ದಾರೆ.ಸ್ಥಳಕ್ಕಾಗಮಿಸಿದ ಪೋಲೀಸರಿಗೆ ಶವದ ಮೇಲೆ ಗಾಯದ ಗುರುತು ಪತ್ತೆಯಾಗಿದೆ, ಅನುಮಾನಗೊಂಡ ಪೋಲೀಸರು ರಮೇಶ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆಯ ಸತ್ಯ ಬಹಿರಂಗವಾಗಿದೆ.
Stay up to date on all the latest ರಾಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp