'ಸ್ಫೋಟ ಸಂಭವಿಸುವ 1 ನಿಮಿಷದ ಮುನ್ನ ನನ್ನ ತಂದೆ ನನ್ನ ಜೊತೆ ಮಾತನಾಡಿದ್ದರು'

ನಾವು ಇತ್ತೀಚೆಗೆ ಕಟ್ಟಿಸಿದ ಹೊಸ ಮನೆಯ ಗೃಹ ಪ್ರವೇಶವನ್ನುನ ಅದ್ದೂರಿಯಾಗಿ ನಡೆಸಿದ್ದೆವು, ಹೊಸ ಮನೆಗೆ ನನ್ನ ತಂದೆ ಹೆಮ್ಮೆಯಿಂದ ಕಾಲಿರಿಸಿದ್ದರು. ಆದರೆ ಈಗ ಅವರೇ ...
ಶ್ರೀಲಂಕಾ ಬಾಂಬ್ ಸ್ಫೋಟ(ಸಂಗ್ರಹ ಚಿತ್ರ)
ಶ್ರೀಲಂಕಾ ಬಾಂಬ್ ಸ್ಫೋಟ(ಸಂಗ್ರಹ ಚಿತ್ರ)
ಚಳ್ಳಕೆರೆ: ನಾವು ಇತ್ತೀಚೆಗೆ ಕಟ್ಟಿಸಿದ ಹೊಸ ಮನೆಯ ಗೃಹ ಪ್ರವೇಶವನ್ನುನ ಅದ್ದೂರಿಯಾಗಿ ನಡೆಸಿದ್ದೆವು, ಹೊಸ ಮನೆಗೆ ನನ್ನ ತಂದೆ ಹೆಮ್ಮೆಯಿಂದ ಕಾಲಿರಿಸಿದ್ದರು. ಆದರೆ ಈಗ ಅವರೇ ಎಲ್ಲ ಎಂಬುದನ್ನು ನನಗೆ ನಂಬಲಾಗುತ್ತಿಲ್ಲ, ಇದನ್ನು ನನಗೆ ಸಹಿಸಲಾಗುತ್ತಿಲ್ಲ ಎಂದು ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದ ಲಕ್ಷ್ಮಿ ನಾರಾಯಣ ಪುತ್ರ ಅಭಿಲಾಷ್ ಅಳಲು ತೋಡಿಕೊಂಡಿದ್ದಾರೆ.
ಲಕ್ಷ್ಮಿ ನಾರಾಯಣ ಪಂಚಾಯತ್ ಸದಸ್ಯರಾಗಿದ್ದರು, ಲೋಕಸಭೆ ಚುನಾವಣಾ ಮುಗಿಸಿ ತಮ್ಮ ಸ್ನೇಹಿತರ ಜೊತೆ ಕಾಲ ಕಳೆಯಲು ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು.
ಬಾಂಬ್ ಸ್ಪೋಟದ ಒಂದು ನಿಮಿಷಕ್ಕೂ ಮುನ್ನ ಲಕ್ಷ್ಮಿ ನಾರಾಯಣ ಮನೆಗೆ ಕರೆ ಮಾಡಿದ್ದರು. ಕೊಲಂಬೋ ತಲುಪಿದ್ದು ಹೊಟೆಲ್ ನ ಕೊಠಡಿ ಸೇರಿದ್ದಾಗಿ ಹೇಳಿದ್ದರು, ಜೊತೆಗೆ ಬೆಳಗಿನ ಉಪಹಾರ ಸೇವಿಸಲು ಹೋಗುತ್ತಿರುವುದಾಗಿ ಹೇಳಿದ್ದರು ಎಂದು ಅಭಿಲಾಷ್ ತಿಳಿಸಿದ್ದಾರೆ.
ಕರೆ ಮಾಡಿದ ಕೆಲವು ನಿಮಿಷಗಳ ನಂತರ ಸರಣಿ ಬಾಂಬ್ ಸ್ಫೋಟದ ಬಗ್ಗೆ ತಿಳಿಯಿತು,. ಕೂಡಲೇ ವಾಪಸ್ ಲಕ್ಷ್ಮಿ ನಾರಾಯಣ್ ಅವರಿಗೆ ಅವರ ಪತ್ನಿ ಕರೆ ಮಾಡಿದ್ದಾರೆ, ಆದರೆ ಪ್ರಯೋಜನವಾಗಲಿಲ್ಲ, ನಂತರ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕರೆ ಮಾಡಿದ್ದಾರೆ. ಯಾರಿಂದಲೂ ಸರಿಯಾದ ಮಾಹಿತಿ ಸಿಗಲಿಲ್ಲ, 
ಸೋಮವಾರ ಬೆಳಗ್ಗಿನ ವರೆಗೂ ನಮಗೆ ಯಾವುದೇ ಮಾಹಿತಿ ದೊರಕಲಿಲ್ಲ, ಸ್ಥಳೀಯ ಜೆಡಿಎಸ್ ನಾಯಕರು ಬಂದು ನಮ್ಮ ತಂದೆ ಸಾವನ್ನಪ್ಪಿರುವ ವಿಷಯ ತಿಳಿಸಿದರು ಎಂದು ಅಭಿಲಾಷ್ ಹೇಳಿದ್ದಾರೆ, ಲಕ್ಷ್ಮಿ ನಾರಾಯಣ ಸಾವಿನ ವಿಷಯ ಕೇಳಿ ಅವರ ಪತ್ನಿ ಹಾಗೂ ಇಬ್ಬರು ಪುತ್ರರು ಶೋಕಸಾಗರದಲ್ಲಿ ಮುಳುಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com