ವಿಜಯಪುರ: ಮತದಾನ ಮಾಡಿ ಪ್ರಾಣಬಿಟ್ಟ ಮಹಿಳೆ!

ಇಲ್ಲಿನ ಇಂಡಿ ತಾಲ್ಲೂಕಿನ ಅಹಿರಸಂಗ ಗ್ರಾಮದಲ್ಲಿ ಮತದಾನ ಮಾಡಿ ಹೊರ ಬಂದ ಮಹಿಳೆಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ...

Published: 23rd April 2019 12:00 PM  |   Last Updated: 23rd April 2019 02:40 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SD SD
Source : UNI
ವಿಜಯಪುರ: ಇಲ್ಲಿನ ಇಂಡಿ ತಾಲ್ಲೂಕಿನ ಅಹಿರಸಂಗ ಗ್ರಾಮದಲ್ಲಿ ಮತದಾನ ಮಾಡಿ ಹೊರ ಬಂದ ಮಹಿಳೆಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. 

ವಿಜಯಪುರ ಜಿಲ್ಲೆಯ ಅಹಿರಸಂಗ ಗ್ರಾಮದ ಮತಗಟ್ಟೆ ಸಂಖ್ಯೆ 32ರಲ್ಲಿ ಮಹಾದೇವಿ ಮಹಾದೇವಪ್ಪ ಸಿಂದಖೇಡ ಎಂಬ ಮಹಿಳೆ ಮತದಾನ ಮಾಡಿ ಹೊರ ಬಂದು ಕುಸಿದು ಬಿದ್ದು ಮೃಪಟ್ಟಿದ್ದಾರೆ. 

ತಲೆ ಸುತ್ತು ಬರುತ್ತಿದೆ ಎಂದು ಹೇಳಿದ 55 ವರ್ಷ ವಯಸ್ಸಿನ ಈ ಮಹಿಳೆ ಏಕಾಏಕಿ ಕುಸಿದು ಬಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.  

ತೀವ್ರ ಬಿಸಿಲಿನಿಂದ ಬಳಲಿದ್ದ ಮಹಿಳೆ, ಮತದಾನ ಮಾಡಲು ಸುಮಾರು ಹೊತ್ತು ಸರತಿ ಸಾಲಿನಲ್ಲಿ ನಿಂತಿದ್ದರು. ಇದರಿಂದ ಆಯಾಸಗೊಂಡಿದ್ದ ಆಕೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp