ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ಭೇಟಿ ಮಾಡಿದ ಟಿಟಿವಿ ದಿನಕರನ್

ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ ಮುಖ್ಯಸ್ಥ ಟಿಟಿವಿ ದಿನಕರನ್ ತನ್ನ ಚಿಕ್ಕಮ್ಮ ವಿ.ಕೆ ಶಶಿಕಲಾ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಂಗಳವಾರ ಭೇಟಿ ...

Published: 24th April 2019 12:00 PM  |   Last Updated: 24th April 2019 12:15 PM   |  A+A-


TTV Dhinakaran

ಟಿಟಿವಿ ದಿನಕರನ್

Posted By : SD SD
Source : The New Indian Express
ಬೆಂಗಳೂರು: ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ ಮುಖ್ಯಸ್ಥ ಟಿಟಿವಿ ದಿನಕರನ್ ತನ್ನ ಚಿಕ್ಕಮ್ಮ ವಿ.ಕೆ ಶಶಿಕಲಾ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಂಗಳವಾರ ಭೇಟಿ ಮಾಡಿದರು. 

ತಮಿಳುನಾಡಿನಲ್ಲಿ ನಾಲ್ಕು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ಈ ಸಂಬಂಧ ಸಲಹೆ ಪಡೆಯಲು ದಿನಕರನ್ ಆಗಮಿಸಿದ್ದರು, ಸುಮಾರು ಒಂದೂವರೆ ಗಂಟೆಗಳ ಕಾಲ ಇಬ್ಬರು ಚರ್ಚೆ ನಡೆಸಿದ್ದಾರೆ. ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ. 

ಜಯಲಲಿತಾ ಅವರ ಅಧಿಕಾರದ ಪರಂಪರೆ ಮುಂದುವರಿಸಿಕೊಂಡು ಹೋಗಲು ಟಿಟಿವಿ ದಿನಕರನ್ ಮತ್ತು ಇಪಿಎಸ್ ಇಬ್ಬರು ಹೋರಾಟ ನಡೆಸಿದ್ದಾರೆ, ಇದೇ ವೇಳ ವಿರೋಧ ಪಕ್ಷವಾದ ಡಿಎಂಕೆ ಮತ್ತೆ ಅಧಿಕಾರಕ್ಕೆ ಬರಲು ಹಪಹಪಿಸುತ್ತಿದೆ.
Stay up to date on all the latest ರಾಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp