ಮದ್ಯ ನಿಷೇಧಕ್ಕೆ ಆಗ್ರಹ: ರಾಯಚೂರು ಮಹಿಳೆಯರಿಂದ 'ನೋಟಾ'ಗೆ ಮತ ಚಲಾವಣೆ

ಹದಿನೇಳನೇ ಲೋಕಸಭೆಗಾಗಿ ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮಂಗಳವಾರ ಮುಕ್ತಾಯವಾಗಿದೆ. ಎಲ್ಲೆಡೆ ಉತ್ತಮ ಮತದಾನವಾಗಿದ್ದರ ನಡುವೆಯೂ ರಾಯಚೂರು ತಾಲೂಕಿನ 12 ಹಳ್ಳಿಗಳಲ್ಲಿರುವ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಮತದಾನ ಮಾಡುವುದು ಕಂಡುಬಂದಿದೆ.
ರಾಯಚೂರು ಮಹಿಳೆಯರಿಂದ 'ನೋಟಾ'ಗೆ ಮತ ಚಲಾವಣೆ
ರಾಯಚೂರು ಮಹಿಳೆಯರಿಂದ 'ನೋಟಾ'ಗೆ ಮತ ಚಲಾವಣೆ
ರಾಯಚೂರು: ಹದಿನೇಳನೇ ಲೋಕಸಭೆಗಾಗಿ ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮಂಗಳವಾರ ಮುಕ್ತಾಯವಾಗಿದೆ. ಎಲ್ಲೆಡೆ ಉತ್ತಮ ಮತದಾನವಾಗಿದ್ದರ ನಡುವೆಯೂ ರಾಯಚೂರು ತಾಲೂಕಿನ 12 ಹಳ್ಳಿಗಳಲ್ಲಿರುವ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಮತದಾನ ಮಾಡುವುದು ಕಂಡುಬಂದಿದೆ.ವಿಶೇಷವೆಂದರೆ ಇವರೆಲ್ಲರೂ ಯಾವೊಬ್ಬ ವ್ಯಕ್ತಿ ಅಥವಾ ಪಕ್ಷದ ಪರವಾಗಿ ಮತ ಚಲಾಯಿಸಿಲ್ಲ, ಬದಲಿಗೆ "ಈ ಮೇಲಿನವರಲ್ಲಿ ಯಾರೂ ಬೇಡ" ಎಂಬ "ನೋಟಾ"  ಬಟನ್ ಒತ್ತಿ ಮತ ಚಲಾವಣೆ ಮಾಡಿದ್ದಾರೆ.ಈ ಪ್ರದೇಶದಲ್ಲಿ ಮದ್ಯಪಾನದ  ಚಟವಿರುವ ಪುರುಷರ ಸಂಖ್ಯೆ ವಿಪರೀತವಿದ್ದು ಅವರಿಗೆ ಅತಿ ಸುಲಭವಾಗಿ ಮದ್ಯವೂ ದೊರೆಯುತ್ತಿದೆ. ಹೀಗಾಗಿ ಈ ಚುನಾವಣೆಯಲ್ಲಿ "ನೋಟಾ"ಗೆ ಮತ ಹಾಕುವ ಮೂಲಕ ಇಲ್ಲಿನ ಮಹಿಳೆಯರು ಈ ಭಾಗದ ಜನಪ್ರತಿನಿಧಿಗಳಿಗೆ ಸ್ಪಷ್ಟ ಸಂದೇಶ ಕೊಡಲು ಬಯಸಿದ್ದಾರೆ. ಮಹಿಳೆಯರು ಮತದಾನ ಮಾಡಿದ ನಂತರ ಭಿತ್ತಿಪತ್ರ ಹಿಡಿದು ಬೀದಿಯಲ್ಲಿ ಮೆರವಣಿಗೆ ನಡೆಸಿದ್ದು "ನಾವೆಲ್ಲರೂ ನೋಟಾಗೆ ಮತ ಹಾಕಿದ್ದೇವೆ" ಎಂದು ಘೋಷಿಸಿದ್ದಾರೆ. ವಾಸ್ತವದಲ್ಲಿ ಈ ಮಹಿಳಾ ಗುಂಪು ಮದ್ಯ ನಿಷೇಧ ಆಂದೋಲನ ನಡೆಸುತ್ತಿದ್ದು ಕಳೆದ ವರ್ಷ ರಾಜ್ಯಾದ್ಯಂತ ಮದ್ಯಪಾನ ನಿಷೇಧಕ್ಕೆ ಒತ್ತಾಯಿಸಿ ಇವರು ಚಿತ್ರದುರ್ಗದಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು.
ಮಾಹಿತಿಯ ಪ್ರಕಾರ ಮಂಗಳವಾರದ ಚುನಾವಣೆಯಲ್ಲಿ 1,400 ಕ್ಕಿಂತ ಹೆಚ್ಚು ಮಹಿಳೆಯರು ನೋಟಾಗೆ ಮತ ಹಾಕಿದ್ದಾರೆ.ರಾಜಕೀಯ ಪಕ್ಷಗಳು ಕಳೆದ ನಾಲ್ಕು ವರ್ಷಗಳಿಂದ ನಮ್ಮಸಮಸ್ಯೆಗಳನ್ನು ಆಲಿಸಿಲ್ಲ. ಈ ಕಾರಣದಿಂದಾಗಿ ಹೀಗೆ ಮಾಡುವುದು ಅನಿವಾರ್ಯವಾಗಿತ್ತು.ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಇಬ್ಬರೂ ನಮ್ಮ ಮನವಿಗಳನ್ನು ಕೇಳಲಿಲ್ಲ, ಬಿಜೆಪಿ ನಾಯಕರು ಕೂಡ ನಮ್ಮ ಆಂದೋಲನಕ್ಕೆ ಬೆಂಬಲಿಸಿಲ್ಲ"ಚಳುವಳಿಯ ನಾಯಕಿಯಾದ ವಿದ್ಯಾ ಪಾಟೀಲ್ ಹೇಳಿದ್ದಾರೆ.
ಬಿ ಯಡ್ಲಾಪುರ, ಜಾಗೀರ್ ವೆಂಕಟಾಪುರ, ಮುರಾಂಪುರ್, ಸುಲ್ತಾಪುರ, ರಘುನಾಥನಹಳ್ಳಿ, ಡಿ. ರಾಂಪುರ, ಕೋತಕೊಂಡ, ಮಮದದೊಡ್ಡಿ, ಹಲವೆಂಜತಾಪುರ ಹಾಗೂ ಇತರೆ ಹಲವು ಗ್ರಾಮಗಳಲ್ಲಿ ಸಹ ಇದೇ ದೃಶ್ಯಗಳು ಸಾಮಾನ್ಯವಾಗಿದ್ದವು. ಸಾಂಪ್ರದಾಯಿಕ ಸೀರೆಯನ್ನುಟ್ಟಿದ್ದ ಮಹಿಳೆಯರು ಮತಗಟ್ಟೆಯ ಮುಂಭಾಗದಲ್ಲಿ ಧರಣಿ ನಡೆಸಿ ಘೋಷಣೆ ಕೂಗಿದರು.
ಮತಗಟ್ಟೆ ಅಧಿಕಾರಿಗಳು ಈ ಮಹಿಳೆಯರಿಗೆ ನೋಟಾಗೆ ಮತ ಹಾಕುವುದರಿಂದ ಯಾವ ಫಲಿತಾಂಶಗಳೂ ಬರುವುದಿಲ್ಲ ಎಂದು ಮನವೊಲಿಸಲು ಮುಂದಾಗಿದ್ದಾರೆ. ಆದರೆ ಇದಾವುದೂ ಕೈಗೂಡಲಿಲ್ಲ. "ನಾವು ಮೊದಲಿಗೆ ಮತದಾನವನ್ನೇ ಬಹಿಷ್ಕರಿಸಲು ನಿರ್ಧರಿಸಿದ್ದೆವು, ಆದರೆ ಅಂತಿಮ ಕ್ಷಣದಲ್ಲಿ ಮತ ಚಲಾವಣೆಗೆ ಮುಂದಾಗಿದ್ದು ನೋಟಾ ಗೆ ಮತ ಹಾಕಲು ನಿರ್ಧರಿಸಿದ್ದೆವು" ಎಂದು ಚಳವಳಿಯ ಇನ್ನೋರ್ವ ಮುಖ್ಯಸ್ಥೆ ಮೋಕ್ಷಮ್ಮ ಹೇಳಿದ್ದಾರೆ.
2017ರಲ್ಲಿ ಈ ಗುಂಪು  72 ದಿನಗಳ ಕಾಲ ಇದೇ ರೀತಿ ಪ್ರತಿಭತನೆ ನಡೆಸಿದ್ದು ರಾಯಚೂರಿನಲ್ಲಿ ಸುಮಾರು 50,000 ಮಹಿಳೆಯರು ಇದರಲ್ಲಿ ಭಾಗವಹಿಸಿದ್ದರು.. "ಇದು ಕೇವಲ ಪ್ರಾರಂಭ,  ರಾಜ್ಯದಲ್ಲಿ ಮದ್ಯ ನಿಷೇಧ ಜಾರಿಗೆ ಬರುವವರೆಗೆ ಮಹಿಳೆಯರ ಹೋರಾಟ ಮುಂದುವರಿಯಲಿದೆ." ಮೋಕ್ಷಮ್ಮ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com