ಬೆಂಗಳೂರು: ಫೇಸ್ ಬುಕ್ ನಕಲಿ ಸ್ನೇಹಿತರಿಂದ ವಂಚನೆ, ಚಿನ್ನಾಭರಣ ಕಳವು

ಫೇಸ್ ಬುಕ್ ನಲ್ಲಿ ಪರಿಚಯವಾದ ಅಪರಿತ ವ್ಯಕ್ತಿಗಳು ಬಿಯರ್ ನಲ್ಲಿ ಮತ್ತು ಬರುವ ಔಷಧ ಬೆರೆಸಿ ಪ್ರಜ್ಞೆ ತಪ್ಪಿಸಿ ವ್ಯಕ್ತಿಯೊಬ್ಬರ ಮನೆಯಿಂದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

Published: 25th April 2019 12:00 PM  |   Last Updated: 25th April 2019 08:01 AM   |  A+A-


Casual Photo

ಸಾಂದರ್ಭಿಕ ಚಿತ್ರ

Posted By : ABN ABN
Source : The New Indian Express
ಬೆಂಗಳೂರು: ಫೇಸ್ ಬುಕ್ ನಲ್ಲಿ ಪರಿಚಯವಾದ  ಅಪರಿತ ವ್ಯಕ್ತಿಗಳು  ಬಿಯರ್ ನಲ್ಲಿ  ಮತ್ತು ಬರುವ ಔಷಧ ಬೆರೆಸಿ ಪ್ರಜ್ಞೆ ತಪ್ಪಿಸಿ  ವ್ಯಕ್ತಿಯೊಬ್ಬರ ಮನೆಯಿಂದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಬನಶಂಕರಿ ಮೂರನೇ ಹಂತದ ರಂಗಪ್ಪ ಲೇಔಟ್ ನ ರಮೇಶ್ ಹೆಚ್ ಹೀಗೆ ಚಿನ್ನಾಭರಣ ಕಳೆದುಕೊಂಡಿದ್ದು, ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ದೂರು ನೀಡಿದ್ದಾರೆ.ಅಪರಿಚಿತರು ಫೇಸ್ ಬುಕ್ ನಲ್ಲಿ  ಒಂದು ತಿಂಗಳ ಹಿಂದೆ ಪರಿಚಿತರಾದರು ಎಂಬ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.

ಇನ್ಸೂರೆನ್ಸ್ ಕಂಪನಿಯಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿದ್ದ ರಮೇಶ್ ಅವರನ್ನು ನಂಬಿಸಿದ ಅಪರಿಚಿತರು ಏಪ್ರಿಲ್ 20 ರಂದು ಭೇಟಿ  ಮಾಡಲು ಹೇಳಿದ್ದಾರೆ. ಅಂದು ಸುಮಾರು 7 ಗಂಟೆ ಸುಮಾರಿನಲ್ಲಿ ಅನ್ನಪೂರ್ಣೇಶ್ವರಿ ಕಾನ್ವೇಷನ್ ಹಾಲ್  ಬಳಿಗೆ ಬಂದಿದ್ದು, ಮದ್ಯ ಸೇವಿಸಲು ನಿರ್ಧರಿಸಿದ್ದಾರೆ. ನಂತರ  ಬಿಯರ್ ನ್ನು ಖರೀದಿಸಿದ್ದು, ರಮೇಶ್ ಅವರ ಮನೆಗೆ ಹೋಗಿದ್ದಾರೆ. ರಮೇಶ್ ಅಡುಗೆ ಮನೆಯೊಳಗೆ ಹೋದಾಗ ಅಪರಿಚತರು ಲೋಟಗಳಲ್ಲಿ ಮತು ಬೆರಿಸಿದ್ದಾರೆ. ಇದನ್ನು ಕುಡಿದ ರಮೇಶ್ ಪ್ರಜ್ಞೆ ತಪ್ಪಿದ್ದಾನೆ.

ಏಪ್ರಿಲ್ 21 ರಂದು ಬೆಳಗ್ಗೆ 6-30ಕ್ಕೆ ಏದ್ದಾಗ ಅಪರಿಚಿತರು ನಾಪತ್ತೆಯಾಗಿದ್ದರು. ನಂತರ ಅಲ್ಮೇರಾ ಪರಿಶೀಲಿಸಿದಾಗ ಚಿನ್ನಾಭರಣ ಕಳವು ಆಗಿರುವುದು ಕಂಡುಬಂದಿತ್ತು. ಎರಡು ಚಿನ್ನದ ಚೈನ್ , ಎರಡು ಉಂಗುರ, ಕೆಲ ಬೆಳ್ಳಿ ವಸ್ತುಗಳು, ವಾಚ್, ಮೊಬೈಲ್ ಪೋನ್ ನೊಂದನ್ನು ಕಳ್ಳತನ ಮಾಡಲಾಗಿದೆ ಎಂದು ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ವಂಚನೆ, ಕಳ್ಳತನ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಫೇಸ್ ಬುಕ್ ಚಾಟ್, ಕರೆ ದಾಖಲೆಗಳ ಮಾಹಿತಿಯನ್ನು ಕಲೆಹಾಕಲು ಪ್ರಯತ್ನಿಸಲಾಗುತ್ತಿದೆ. ರಮೇಶ್ ಏಕೆ ಅಪರಿಚಿತರನ್ನು ಮನೆಗೆ ಕರೆದುಕೊಂಡು ಬಂದರು ಎಂಬುದರ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
Stay up to date on all the latest ರಾಜ್ಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp