ಬೆಂಗಳೂರು: ಬೈಕಿನೊಂದಿಗೆ ಸೆಲ್ಫಿ ಬೇಡಿಕೆಗೆ ನಕಾರ, ದುಷ್ಕರ್ಮಿಗಳಿಂದ ಯುವಕರ ಮೇಲೆ ಹಲ್ಲೆ

30 ಲಕ್ಷ ಮೌಲ್ಯದ ತನ್ನ ದುಬಾರಿ ಬೈಕ್ ನೊಡನೆ ಸೆಲ್ಫಿ ತೆಗೆದುಕೊಳ್ಲಲು ನಿರಾಕರಿಸಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಮತ್ತು ಆತನ ಸ್ನೇಹಿತನ ಮೇಲೆ...
ಬೆಂಗಳೂರು: ಬೈಕಿನೊಂದಿಗೆ ಸೆಲ್ಫಿ ಬೇಡಿಕೆಗೆ ನಕಾರ, ದುಷ್ಕರ್ಮಿಗಳಿಂದ ಯುವಕರ ಮೇಲೆ ಹಲ್ಲೆ
ಬೆಂಗಳೂರು: ಬೈಕಿನೊಂದಿಗೆ ಸೆಲ್ಫಿ ಬೇಡಿಕೆಗೆ ನಕಾರ, ದುಷ್ಕರ್ಮಿಗಳಿಂದ ಯುವಕರ ಮೇಲೆ ಹಲ್ಲೆ
ಬೆಂಗಳೂರು: 30 ಲಕ್ಷ ಮೌಲ್ಯದ ತನ್ನ ದುಬಾರಿ ಬೈಕ್ ನೊಡನೆ ಸೆಲ್ಫಿ ತೆಗೆದುಕೊಳ್ಲಲು ನಿರಾಕರಿಸಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಮತ್ತು ಆತನ ಸ್ನೇಹಿತನ ಮೇಲೆ ಅಪರಿಚಿತರು ದಾಳಿ ನಡೆಸಿದ ಘಟನೆ ಬೆಂಗಳೂರು ಕೋರಮಂಗಲದ ಬೆಥಾನಿ ಶಾಲೆ ಸಮೀಪ ನಡೆದಿದೆ. ಬುಧವಾರ ರಾತ್ರಿ ನಡೆದ ಘಟನೆಯ ವೇಳೆ ಜಯನಗರ ನಿವಾಸಿ ಗಣೇಶ್ ಗೌಡ ತೀವ್ರವಾಗಿ ಗಾಯಗೊಂಡಿದ್ದಾರೆ.
ಮಧ್ಯರಾತ್ರಿ 1.30 ಸುಮಾರಿಗೆ ಗಣೇಶ್ ತನ್ನ ಸ್ನೇಹಿತರೊಡನೆ ಕೋರಮಂಗಲ ನಾಲ್ಕನೇ ಬ್ಲಾಕ್ ನಲ್ಲಿರುವ ಕಾಫಿ ಶಾಪ್ ಗೆ ಕಾಫಿ ಕುಡಿಯಲಿಕ್ಕಾಗಿ ತೆರಳಿದ್ದನು. ಅಲ್ಲಿಂದ ಹಿಂದಿರುಗುವಾಗ ಗಣೇಶ್ ಸ್ನೇಹಿತ ವಿನಯ್ ತನ್ನ ಹೋಂಡಾ ಗೋಲ್ಡ್ವಿಂಗ್ ಬೈಕಿನಲ್ಲಿ ಹೋಗುತ್ತಿದ್ದರು. ಆಗ ಹಿಂದಿನಿಂದ ಬಂದ ದ್ವಿಚಕ್ರ ಸವಾರರಿಬ್ಬರು ಇವರ ಬೈಕ್ ಅಡ್ಡಗಟ್ಟಿದ್ದಾರೆ. ಅಲ್ಲದೆ ತಾವು ಈ ಬೈಕ್ ನೊಡನೆ ಸೆಲ್ಫಿ ಕ್ಲಿಕ್ಕಿಸಿಕೊಳ್ಲಬೇಕು, ನಮಗೆ ಈ ಬೈಕ್ ನೀಡಬೇಕೆಂದು ಅಪರಿಚಿತರು ಗಣೇಶ್ ಹಾಗೂ ವಿನಯ್ ಗೆ ಬೇಡಿಕೆ ಇಟ್ಟಿದ್ದಾರೆ. ಅದೇ ವೇಳೆ ಅವರಲ್ಲೊಬ್ಬ ಗಣೇಶ್ ನನ್ನು ದೂರ ತಳ್ಳಿ ಅವನಲ್ಲಿದ್ದ ಬೈಕ್ ಕೀಯನ್ನು ಕಿತ್ತುಕೊಂಡಿದ್ದಾನೆ.
ಇನ್ನೋರ್ವ ಅಪರಿಚಿತ ಗಣೇಶ್ ಹಾಗೂ ವಿನಯ್ ಮೇಲೆ ಉಂಗುರಗಳಿಂದ ದಾಳಿ ಮಾಡಿದ್ದಾರೆ. ಈ ವೇಳೆ ಗಾಯಗಳಿಂದ ರಕ್ತಸ್ರಾವಕ್ಕೀಡಾದ ಗಣೇಶ್ ರಸ್ತೆ ಮೇಲೆ ಬಿದ್ದಿದ್ದಾರೆ. ತಕ್ಷಣ ಇಬ್ಬರೂ ಗಟ್ಟಿಯಾಗಿ ಸಹಾಯಕ್ಕಾಗಿ ಕಿರುಚಿದಾಗ ದುಷ್ಕರ್ಮಿಗಳು ಬೈಕ್ ನ ಕೀಯನ್ನು ಅಲ್ಲೇ ಬಿಸಾಕಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.  ಗಾಯಗೊಂಡ ಗಣೇಶ್ ಅವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಒದಗಿಸಲಾಗುತ್ತಿದೆ. ಅಲ್ಲದೆ ಕೋರಮಂಗಲ ಠಾಣೆಯಲ್ಲಿ ಈ ಸಂಬಂಧ ದೂರು ಸಲ್ಲಿಸಲಾಗಿದೆ. ಪತ್ರಿಕೆಗಳು ಗಣೇಶ್ ಅವರನ್ನು ಸಂಪರ್ಕಿಸಿದಾಗ ಅವರು "ಇದೊಂದು ವೈಯುಕ್ತಿಕ ಪ್ರಕರಣವಾಗಿದ್ದು ಈ ಸಂಬಂಧ ಮಾತನಾಡುವುದಿಲ್ಲ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com