ತುಮಕೂರು: ಸಿದ್ಧರಬೆಟ್ಟದ ಕಲ್ಯಾಣಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಸಾವು

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಸಿದ್ಧರಬೆಟ್ಟದ ಕಲ್ಯಾಣಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ದಾರುಣ...

Published: 27th April 2019 12:00 PM  |   Last Updated: 27th April 2019 03:39 AM   |  A+A-


Five of a family drown in Siddarabetta Kalyani in Tumkur

ಸಿದ್ಧರಬೆಟ್ಟದ ಕಲ್ಯಾಣಿ

Posted By : LSB LSB
Source : Online Desk
ತುಮಕೂರು: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಸಿದ್ಧರಬೆಟ್ಟದ ಕಲ್ಯಾಣಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ದಾರುಣ ಘಟನೆ ಶನಿವಾರ ನಡೆದಿದೆ.

ಮೃತರನ್ನು ಬೆಂಗಳೂರಿನ ಕೆಂಗೇರಿ ನಿವಾಸಿಗಳಾದ ರೇಷ್ಮಾ(22), ಮುನೀರ್​ ಖಾನ್​(49), ಯಾರಬ್​ ಖಾನ್​(21), ಮುಬೀನ್​ ತಾಜ್(21), ಸಲ್ಮಾನ್​ ಎಂದು ಗುರುತಿಸಲಾಗಿದೆ.

ಪಿಕ್‌ನಿಕ್‌ಗೆ ತೆರಳಿದ್ದ ವೇಳೆ ಮುನೀರ್‌ ಅವರು ನೀರಿಗಿಳಿದಿದ್ದು ಆಯತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ರಕ್ಷಣೆಗೆ ತೆರಳಿ ಐವರು ನೀರು ಪಾಲಾಗಿದ್ದಾರೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಶವಗಳನ್ನ ಮೇಲಕ್ಕೆತ್ತಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp