ವಿವಾಹವಾಗಲು ಬೆಂಗಳೂರಿಗೆ ಬಂದಿದ್ದ ಪಾಕ್ ದಂಪತಿ ಗಡಿಪಾರಿಗೆ ಹೈಕೋರ್ಟ್ ಆದೇಶ

ಪಾಸ್ ಪೊರ್ಟ್, ವೀಸಾಗಲಿಲ್ಲದೆ ಮದುವೆಯಾಗಲಿಕ್ಕಾಗಿ ಬೆಂಗಳೂರಿಗೆ ಬಂದು ಇಲ್ಲಿಯೇ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಜೋಡಿಯನ್ನು ಮೇ 5ಒಳಗೆ ಗಡಿಪಾರು ಮಾಡಬೇಕೆಂದು ರಾಜ್ಯ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.
ಹೈಕೋರ್ಟ್
ಹೈಕೋರ್ಟ್
ಬೆಂಗಳೂರು: ಪಾಸ್ ಪೊರ್ಟ್, ವೀಸಾಗಲಿಲ್ಲದೆ ಮದುವೆಯಾಗಲಿಕ್ಕಾಗಿ ಬೆಂಗಳೂರಿಗೆ ಬಂದು ಇಲ್ಲಿಯೇ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಜೋಡಿಯನ್ನು ಮೇ 5ಒಳಗೆ ಗಡಿಪಾರು ಮಾಡಬೇಕೆಂದು ರಾಜ್ಯ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.

ಪಾಕಿಸ್ತಾನದಿಂದ ಮದುವೆಯಾಗುವುದಕ್ಕಾಗಿ ಭಾರತಕ್ಕೆ ಆಗಮಿಸಿದ್ದ  ಕಾಸೀಫ್ ಶಂಶುದ್ದೀನ್ ಮತ್ತು ಕಿರಾಣ್ ಗುಲಾಮ್ ಅಲಿ ಜೋಡಿ ಕಳೆದ ಕೆಲ ತಿಂಗಳಿನಿಂದ ಇಲ್ಲಿಯೇ ಅಕ್ರಮವಾಗಿ ನೆಲೆಸಿತ್ತು. ಈ ಸಂಬಂಧ ದೂರು ದಾಖಲಾಗಿ 42 ತಿಂಗಳ ಜೈಲುವಾಸದ ಶಿಕ್ಷೆಗೆ ಈ ಜೋಡಿ ಈಡಾಗಿತ್ತು. ಆಗ ತಮ್ಮ ಶಿಕ್ಷೆಯನ್ನು ಕಡಿತಗೊಳಿಸಿ ಬಿಡುಗಡೆಗೊಳಿಸಲು ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದ ಈ ನವಜೋಡಿಯ ಅರ್ಜಿಯನ್ನು ಶುಕ್ರವಾರ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗಿದೆ.

ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಅವರಿದ್ದ ಪೀಠ ಅರ್ಜಿ ವಿಚಾರಣೆ ನಡೆಸಿ ನಗರದ ಎರಡು ಪ್ರತ್ಯೇಕ ನ್ಯಾಯಾಲಯದಗಳು ಪಾಕ್ ಜೊಡಿಗೆ ವಿಧಿಸಿದ್ದ ಪ್ರತ್ಯೇಕ 21 ತಿಂಗಳ ಜೈಲು ಶಿಕ್ಷೆಯನ್ನು ಒಟ್ಟಾಗಿ ಜಾರಿಗೆ ತರಬೇಕು, ಹಾಗೆಯೇ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಮೇ 5ಕ್ಕೆ ಮುನ್ನ ಅರ್ಜಿದಾರರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು ಎಂದು ಆದೇಶಿಸಿದ್ದಾರೆ.

ಇದಕ್ಕೆ ಮುನ್ನ ಕೇಂದ್ರ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ನಾವದಗಿ, ಅರ್ಜಿದಾರರು ನಿಜಕ್ಕೂ ಪಾಕಿಸ್ತಾನದವರೇ ಆಗಿದ್ದಾರೆಯೆ ಎನ್ನುವ್ದನ್ನು ಖಚಿತಪಡಿಸಿಕೊಳ್ಲಬೇಕು, ಪಾಕಿಸ್ತಾನ ರಾಯಭಾರ ಕಛೇರಿಯೊಡನೆ ಈ ಸಂಬಂಧ ಮಾತುಕತೆ ನಡೆಯಬೇಕು, ಇದಕ್ಕಾಗಿ ಸಮಯ ಹಿಡಿಯಲಿದೆ ಎಂದಾಗ ನ್ಯಾಯಮೂರ್ತಿಗಳು "ಅರ್ಜಿದಾರರು ತಾವೇ ಸ್ವತಃ ನಾವು ಪಾಕಿಸ್ತಾನಿಗಳು ಎಂದು ಒಪ್ಪಿಕೊಂಡಿದ್ದಾರೆ, ಇನ್ನು ಅವರನ್ನೇಕೆ ದೇಶದಲ್ಲಿರಿಸಿಕೊಳ್ಲಬೇಕು? ಇದು ದೇಶದ ಭದ್ರತೆ  ವಿಚಾರವಾಗಿದ್ದು ಇನ್ನು ಮುಂದಿನ 24 ಗಂಟೆಯಲ್ಲಿ ಅರ್ಜಿದಾರರನ್ನು ವಾಘಾ ಗಡಿಗೆ ಕಳಿಸಿ" ಎಂದು ಆದೇಶಿಸಿದರು.

ಕಡೆಗೆ ನಾವದಗಿ ನಾಳೆ ನಾಡಿಉದ್ದುಶನಿವಾರ-ಭಾನುವಾರವಾಗಿದೆ, ಹಾಗಾಗಿ ರಾಯಭಾರ ಕಛೇರಿ ರಜೆ ಇರಲಿದೆ,24  ಗಂತೆ ಸಾಲದು ಎಂದಾಗ ಕೋರ್ಟ್ ಸಮ್ಮತಿಸಿದ್ದು ಮೇ 5 ರೊಳಗೆ ಪಾಕಿಸ್ತಾನಕ್ಕೆ ಗಡಿಪಾರು ಮಾಡಿ ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com