ಬೈಂದೂರು: ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ, ನೂರಾರು ಜನರ ಪ್ರಾಣ ಕಾಪಾಡಿದ ಮಹಿಳೆ

ಚಲಿಸುತ್ತಿದ್ದ ರೈಲಿನ ಬೋಗಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡ ಘಟನೆ ಉಡುಪಿ ಜಿಲ್ಲೆ ಬೈಂದೂರಿನಲ್ಲಿ ನಡೆದಿದೆ . ಈ ವೇಳೆ ಓರ್ವ ಮಹಿಳೆ ತೋರಿದ ಮಯಪ್ರಜ್ಞೆಯ ಕಾರಣ ನೂರಾರು ಜನರ ಪ್ರಾಣ ಉಳಿದಿದೆ.
ಬೈಂದೂರು: ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ, ನೂರಾರು ಜನರ ಪ್ರಾಣ ಕಾಪಾಡಿದ ಮಹಿಳೆ
ಬೈಂದೂರು: ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ, ನೂರಾರು ಜನರ ಪ್ರಾಣ ಕಾಪಾಡಿದ ಮಹಿಳೆ
ಬೈಂದೂರು: ಚಲಿಸುತ್ತಿದ್ದ ರೈಲಿನ ಬೋಗಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡ ಘಟನೆ ಉಡುಪಿ ಜಿಲ್ಲೆ ಬೈಂದೂರಿನಲ್ಲಿ ನಡೆದಿದೆ . ಈ ವೇಳೆ ಓರ್ವ ಮಹಿಳೆ ತೋರಿದ ಮಯಪ್ರಜ್ಞೆಯ ಕಾರಣ ನೂರಾರು ಜನರ ಪ್ರಾಣ ಉಳಿದಿದೆ.
ಮುಂಬೈ-ಎರ್ನಾಕುಲಂ ನಡುವೆ ಸಂಚರಿಸುತ್ತಿದ್ದ ನಿಜಾಮುದ್ದೀನ್ ಎಕ್ಸ್ ಪ್ರೆಸ್  (12618) ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ರಾತ್ರಿ 1.30ರ ಸುಮಾರು ರೈಲು ಬೈಂದೂರು ನಿಲ್ದಾಣ ಬಿಟ್ಟು ಕಂಬದ ಕೋಣೆಯತ್ತ ಚಲಿಸುತ್ತಿದ್ದಾಗ ರೈಲಿನ ಎಸಿ ಕೋಚ್ ನಲ್ಲಿ ಬೆಂಕಿ ಕಾಣಿಸಿದೆ. ಆದರೆ ರಾತ್ರಿ ಪ್ರಯಾಣಿಕರೆಲ್ಲರೂ ಮಲಗಿದ್ದ ಕಾರಣ ಮೊದಲಿಗೆ ಇದು ಯಾರ ಗಮನಕ್ಕೆ ಬಂದಿರಲಿಲ್ಲ. ಆಗ ಮಹಿಳೆಯೊಬ್ಬರು ಜಾಗೃತರಾಗಿ ಸಿಬ್ಬಂದಿಗೆ ವಿಚಾರ ತಲುಪಿಸಿದ ಕಾರಣ ನೂರಾರು ಜನರ ಪ್ರಾಣ ಉಳಿಸಿದಂತಾಗಿದೆ.
ರೈಲಿನಲ್ಲಿನ ಎಸಿ ಕೋಚ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮಹಿಳಾ ಪ್ರಯಾಣಿಕರು ಕುಂದಾಪುರದಲ್ಲಿ ಇಳಿಯಬೇಕಾಗಿದ್ದು ಆಕೆ ರೈಕಿನ ಬೋಗಿಯಲ್ಲಿ ಬೆಂಕಿ ಹೊತ್ತಿರುವುದು ಗಮನಿಸಿದ್ದಾರೆ. ತಕ್ಷಣ ರೈಲು ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿ ರೈಲನ್ನು ನಿ;ಲ್ಲಿಸಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಸಿ ಬೋಗಿಯ ಗಾಜು ಒಡೆಯುವ ವೇಳೆ ಆದ ಸಣ್ಣ ಪುಟ್ಟ ಗಾಯದ ಹೊರತು ಯಾರೊಬ್ಬರಿಗೆ ಯಾವುದೇ ಅನಾಹುತ ಸಂಭವಿಸಿಲ್ಲ.
ಬೆಂಕಿಯಿಂದಾಗಿ ರೈಲಿನ ಆಸನಗಳು ಸುಟ್ಟು ಹೋಗಿದೆ. ಮಹಿಳೆಯ ಮಯಪ್ರಜ್ಞೆಗೆ ಅಧಿಕಾರಿಗಳು ಪ್ರಶಂಸೆ ಸೂಚಿಸಿದ್ದಾರೆ. ಬೆಂಕಿ ಹೊತ್ತಿದ್ದ ಬೋಗಿ ಪ್ರತ್ಯೇಕಿಸಿ, ಪ್ರಯಾಣಿಕರಿಗೆ ಬೇರೆ ವ್ಯವಸ್ಥೆ ಕಲ್ಪಿಸಿ ಎರ್ನ್ಬಾಕುಲಂ ಕಡೆಗೆ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com