ಆಗುಂಬೆ ಘಾಟ್ ದುರಸ್ತಿ ಕಾರ್ಯ ವಿಳಂಬ; ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಪ್ರಯಾಣಿಕರ ಸಂಚಾರಕ್ಕೆ ತೊಂದರೆ

ಇಲ್ಲಿಂದ ಶಿವಮೊಗ್ಗ, ಶೃಂಗೇರಿ, ಕೊಪ್ಪ ಮತ್ತು ಬೇರೆ ಸ್ಥಳಗಳಿಗೆ ಹೋಗುವ ಪ್ರಯಾಣಿಕರ ಸಂಕಷ್ಟ ಸದ್ಯಕ್ಕೆ ...
ಆಗುಂಬೆ ಘಾಟಿಯಲ್ಲಿ ಭೂ ಕುಸಿತ
ಆಗುಂಬೆ ಘಾಟಿಯಲ್ಲಿ ಭೂ ಕುಸಿತ
ಉಡುಪಿ: ಇಲ್ಲಿಂದ ಶಿವಮೊಗ್ಗ, ಶೃಂಗೇರಿ, ಕೊಪ್ಪ ಮತ್ತು ಬೇರೆ ಸ್ಥಳಗಳಿಗೆ ಹೋಗುವ ಪ್ರಯಾಣಿಕರ ಸಂಕಷ್ಟ ಸದ್ಯಕ್ಕೆ ಮುಗಿಯುತ್ತಿಲ್ಲ. ಆಗುಂಬೆ ಘಾಟಿಯ ರಾಷ್ಟ್ರೀಯ ಹೆದ್ದಾರಿ 169ಎಯ ದುರಸ್ತಿ ಕಾರ್ಯ ನಡೆಯುತ್ತಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಈ ಹೆದ್ದಾರಿಯಲ್ಲಿ ದುರಸ್ತಿ ಕಾರ್ಯ ನಡೆಯುವುದರಿಂದ ಏಪ್ರಿಲ್ 1ರಿಂದ 30ರವರೆಗೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಕೆ ಎ ದಯಾನಂದ ಆದೇಶ ಹೊರಡಿಸಿದ್ದಾರೆ. ನಿಗದಿತ ಅವಧಿ ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಾಗ ಅದು ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ.
ಕಳೆದ ವರ್ಷ ಸತತ ಮಳೆ ಸುರಿದಿದ್ದರಿಂದ ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ರಸ್ತೆಯ ತಿರುವಿನಲ್ಲಿ ಭೂ ಕುಸಿತ ಉಂಟಾಗಿತ್ತು. ಘಾಟಿ ಪ್ರದೇಶದ ತಿರುವಿನಲ್ಲಿ ಭೂ ಕುಸಿತ ಉಂಟಾಗಿ ಪ್ರಯಾಣಿಕರಿಂದ ತೊಂದರೆಯಾಗಿತ್ತು. ಮಳೆಗಾಲ ಮುಗಿದು 10 ತಿಂಗಳು ಕಳೆದ ನಂತರ ದುರಸ್ತಿ ಕಾರ್ಯ ನಡೆಸಿರುವುದು ದುರಸ್ತಿ ಕಾರ್ಯ ವಿಳಂಬಕ್ಕೆ ಕಾರಣವಾಗಿದೆ.
ಉಡುಪಿ, ಶಿವಮೊಗ್ಗ ಜಿಲ್ಲೆಯ ಮಧ್ಯೆ ನಿತ್ಯ ಪ್ರಯಾಣಿಸುತ್ತಿರುವ ಪ್ರಯಾಣಿಕ ಶಶಿಧರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿ, ಇನ್ನೂ ಎರಡು ತಿಂಗಳು ಆಗುಂಬೆ ಘಾಟಿ ಮುಚ್ಚಿದರೆ ಪ್ರಯಾಣಿಕರು ಕುಂದಾಪುರ ಅಥವಾ ಕಾರ್ಕಳ ಮಾರ್ಗ ಬಳಸಬೇಕಷ್ಟೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಿಂದ ಮಣಿಪಾಲಕ್ಕೆ ಚಿಕಿತ್ಸೆಗೆ ಬರುವವರಿಗೆ ಸಹ ಆಗುಂಬೆ ಘಾಟಿಯಲ್ಲಿ ಬರಲು ಸಾಧ್ಯವಾಗದೆ ತೊಂದರೆಯಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com