ಸ್ಕೇಟಿಂಗ್: ಕಾರವಾರದ ಯುಕೆಜಿ ಬಾಲಕನಿಂದ ವಿಶ್ವ ದಾಖಲೆ!

ಕಾರವಾರ ಮೂಲದ 5 ವರ್ಷದ ಬಾಲಕ ಸ್ಪಿನ್ನಿಂಗ್ ಸ್ಕೇಟಿಂಗ್ ನಲ್ಲಿ ವಿಶ್ವದಾಖಲೆ ನಿರ್ಮಾಣ ಮಾಡಿದ್ದಾನೆ.

Published: 29th April 2019 12:00 PM  |   Last Updated: 29th April 2019 01:06 AM   |  A+A-


Karwar UKG boy smashes world record

ವಿಶ್ವ ದಾಖಲೆ ಬರೆದ ಕಾರವಾರದ ಯುಕೆಜಿ ಬಾಲಕ

Posted By : SVN SVN
Source : The New Indian Express
ಕಾರವಾರ: ಕಾರವಾರ ಮೂಲದ 5 ವರ್ಷದ ಬಾಲಕ ಸ್ಪಿನ್ನಿಂಗ್ ಸ್ಕೇಟಿಂಗ್ ನಲ್ಲಿ ವಿಶ್ವದಾಖಲೆ ನಿರ್ಮಾಣ ಮಾಡಿದ್ದಾನೆ.

ಕಾರವಾರದ ಕೈಗಾ ರೋಲರ್ ಸ್ಕೇಟಿಂಗ್ ಕ್ಲಬ್ ನ ಸದಸ್ಯನಾಗಿರುವ ಐದು ವರ್ಷದ, ಯುಕೆಜಿ ವಿದ್ಯಾರ್ಥಿ ಮೊಹಮದ್ ಸಾಕಿಬ್ ಬರೊಬ್ಬರಿ 25 ನಿಮಿಷಗಳ ಸ್ಪಿನ್ನಿಂಗ್ ಸ್ಕೇಟಿಂಗ್ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಾಣ ಮಾಡಿದ್ದಾನೆ. 

ನಗರದ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಈ ದಾಖಲೆಯ ಪ್ರದರ್ಶನ ನಡೆಯಿತು. ರೆಕಾರ್ಡ್ ಹೋಲ್ಡರ್ಸ್ ರಿಪಬ್ಲಿಕ್ ಯುಕೆಯ ಪ್ರಸಾದ ಗಾವಡೆ, ಹೈರೇಂಜ್ ಬುಕ್ ಆಫ್ ರೆಕಾರ್ಡ್ಸ್ ​ನ ಬಸವರಾಜ್ ಜಿ., ಏಷ್ಯನ್ ಬುಕ್ ಆಫ್ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನ ಹರೀಶ ಈ ಸಂದರ್ಭದಲ್ಲಿ ಹಾಜರಿದ್ದು, ದಾಖಲೆಯಾಗಿದೆ ಎಂದು ಘೊಷಿಣೆ ಮಾಡಿದರು. ಇದೇ ವೇಳೆ ವಿಶ್ವ ದಾಖಲೆ ನಿರ್ಮಾಣ ಮಾಡಿದ ಸಾಕಿಬ್ ​ಗೆ ಪ್ರಮಾಣಪತ್ರ ಕೂಡ ವಿತರಿಸಿದರು. 

ಭಾನುವಾರ ಕಾಲಿಗೆ ಸ್ಕೇಟಿಂಗ್ ಕಟ್ಟಿಕೊಂಡು ತನ್ನ ಕಾಲನ್ನು 180 ಡಿಗ್ರಿ ಅಗಲಿಸಿ ಮುಮ್ಮುಖ ಬಾಗಿ ಎರಡೂ ಕೈಗಳನ್ನು ನೆಲಕ್ಕೆ ಊರಿ ನೂರು ಸುತ್ತುಗಳನ್ನು ಸಾಕಿಬ್ ಹೊಡೆದ. ಅಂತೆಯೇ ಈ ದಾಖಲೆಯ ಪ್ರದರ್ಶನವನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು, ಅದನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗೆ ಕಳಿಸಲಾಗುವುದು ಎಂದು ಬಾಲಕನ ತಂದೆ ಮೊಹಮದ್ ರಫೀಕ್, ತಾಯಿ ಸಬೀನಾ ತಿಳಿಸಿದ್ದಾರೆ.

ಈ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ಸಾಕಿಬ್ ಪೋಷಕರು, 'ಎರಡನೇ ವಯಸ್ಸಿನಿಂದಲೇ ಸಾಕಿಬ್ ದಿನಕ್ಕೆ ಎರಡು, ಮೂರು ಗಂಟೆ ಲಿಂಬೋ ಸ್ಕೇಟಿಂಗ್​ ಅನ್ನು ತರಬೇತುದಾರ ದಿಲೀಪ್ ಹಣಬರ ಮೂಲಕ ಕಲಿಯುತ್ತಿದ್ದ. ಅವನ ಪರಿಶ್ರಮದಿಂದಲೇ ಈ ದಾಖಲೆ ಸಾಧ್ಯವಾಯಿತು ಎಂದು ಸಾಕಿಬ್ ಪೋಷಕರಾದ ಮೊಹಮದ್ ರಫೀಕ್, ತಾಯಿ ಸಬೀನಾ ಹೇಳಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp