'ನಮ್ಮ ಮೆಟ್ರೋ' ಫೇಸ್ 2ನಲ್ಲಿ 28 ನಿಲ್ದಾಣ, 225 ಎಸ್ಕಲೇಟರ್‌ಗಳ ಸ್ಥಾಪನೆಗೆ ಯೋಜನೆ ಸಿದ್ದ

ನಮ್ಮ ಮೆಟ್ರೋ ಎರಡನೇ ಹಂತದಲ್ಲಿ 28 ನಿಲ್ದಾಣಗಳು ಹಾಗೂ 225 ಎಸ್ಕಲೇಟರ್‌ಗಳಿರಲಿದೆ. ಮೊದಲ ಹಂತದಿಂದ ವಿಸ್ತರಿಸಿರುವ ನಾಲ್ಕು ರೀಚ್‌ಗಳಿಗೆ 28 ​​ನಿಲ್ದಾಣ ಸ್ಥಾಪನೆ ಮಾಡಲಾಗುತ್ತದೆ
'ನಮ್ಮ ಮೆಟ್ರೋ'
'ನಮ್ಮ ಮೆಟ್ರೋ'
ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತದಲ್ಲಿ 28 ನಿಲ್ದಾಣಗಳು ಹಾಗೂ 225  ಎಸ್ಕಲೇಟರ್‌ಗಳಿರಲಿದೆ. ಮೊದಲ ಹಂತದಿಂದ ವಿಸ್ತರಿಸಿರುವ ನಾಲ್ಕು ರೀಚ್‌ಗಳಿಗೆ 28 ​​ನಿಲ್ದಾಣ ಸ್ಥಾಪನೆ ಮಾಡಲಾಗುತ್ತದೆ. ಇನ್ನು ಎಸ್ಕಲೇಟರ್‌ಗಳನ್ನು  ಹರಾಜಿನಲ್ಲಿ ಗುತ್ತಿಗೆ ಪಡೆದ ಜಾನ್ಸನ್ ಲಿಫ್ಟ್ಸ್ ಕಂಪನಿ ಸ್ಥಾಪಿಸಲಿದೆ.
"ನಾವು ಮೆಟ್ರೋ ಹಂತ -1 ರಲ್ಲಿ 225 ಎಸ್ಕಲೇಟರ್‌ಗಳನ್ನು ಹೊಂದಿದ್ದು ಎರಡನೇ ಹಂತದಲ್ಲಿಯೂ ಅದೇ ಸಂಖ್ಯೆಯ ಎಸ್ಕಲೇಟರ್‌ಗಳನ್ನು ಸ್ಥಾಪಿಸಲಿದ್ದೇವೆ.ಇದರ ವೆಚ್ಚ 210 ಕೋಟಿ ರೂ ಆಗಲಿದ್ದು  ಮುಂದಿನ ಆರು ತಿಂಗಳಲ್ಲಿ ನಾವು ನೈಋತ್ಯ ರೈಲ್ವೆ ವಲಯ ನಿಲ್ದಾಣಗಳಿಗೆ 10 ಎಸ್ಕಲೇಟರ್‌ಗಳು ಮತ್ತು ಎಲಿವೇಟರ್‌ಗಳನ್ನು ಸ್ಥಾಪನೆ ಮಾಡಲಿದ್ದೇವೆ."ಜಾನ್ಸನ್ ಲಿಫ್ಟ್ಸ್‌ನ ಕರ್ನಾಟಕದ ಜನರಲ್ ಮ್ಯಾನೇಜರ್ ರಮೇಶ್ ಚಾರಿ ಹೇಳಿದರು.
ಇನ್ನೂ ಐದು ಎಸ್ಕಲೇಟರ್‌ಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ, 1 ಯಶವಂತಪುರ ರೈಲ್ವೆ ನಿಲ್ದಾಣ, ಮೈಸೂರು ರೈಲ್ವೆ ನಿಲ್ದಾಣದಲ್ಲಿ 2 ಅಲ್ಲದೆ ಕೊಪ್ಪಳ, , ಹುಬ್ಬಳ್ಳಿ ಮತ್ತು ಗದಗ  ರೈಲ್ವೆ ನಿಲ್ದಾಣಗಳಲ್ಲಿ ತಲಾ ಎರಡು ಎಸ್ಕಲೇಟರ್‌ಗಳು ಬರಲಿವೆ. ಶಿವಮೊಗ್ಗ, ಅರಸಿಕೆರೆ, ಯಲಹಂಕ, ತುಮಕೂರು, ಗದಗ ಹಾಗೂ ಕೊಪ್ಪಳ  ರೈಲ್ವೆ ನಿಲ್ದಾಣಗಳಲ್ಲಿ ಲಿಫ್ಟ್‌ಗಳು ಲಭ್ಯವಾಗಲಿವೆ.
ನಗರದ 30 ಸ್ಕೈವಾಕ್‌ಗಳಲ್ಲಿ ಎಸ್ಕಲೇಟರ್‌ಗಳನ್ನು ಒದಗಿಸುವುದಕ್ಕಾಗಿ ಕಂಪನಿಯು ಅವರ ಕೋರಿಕೆಯ ಮೇರೆಗೆ ಬೃಹತ್ ತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಬಜೆಟ್ ಪ್ರಸ್ತಾವನೆಯನ್ನು ಕಳುಹಿಸಿದೆ. “ನಾವು ಇಂಟರ್‌ನೆಟ್ ಆಫ್ ಥಿಂಗ್ಸ್ (ಐಒಟಿ) ಮೂಲಮಾದರಿಯಲ್ಲಿ ಕೆಲಸ ಮಾಡುತ್ತಿದ್ದೇವೆ, ಅಲ್ಲಿ ಎಲಿವೇಟರ್‌ಗಳ ಮೇಲಿರುವ ಆಜ್ಞಾ ಕೇಂದ್ರಗಳು ಅದನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಸ್ಥಗಿತಗೊಳ್ಳುವ ಮುನ್ನ ನಮ್ಮನ್ನು ಎಚ್ಚರಿಸುತ್ತದೆ. ಮುಖ್ಯ ಕಚೇರಿಗೆ ಎಚ್ಚರಿಕೆಯನ್ನು ಕಳುಹಿಸಲಾಗುವುದು ಆದ್ದರಿಂದ ಯಂತ್ರಶಾಸ್ತ್ರಜ್ಞರು ಬಂದು ಅದನ್ನು ಮೊದಲೇ ಸರಿಪಡಿಸಬಹುದು. ಇದು ಕಾರ್ಯಗತಗೊಳ್ಳಲು ಸುಮಾರು ಎಂಟು ತಿಂಗಳು ತೆಗೆದುಕೊಳ್ಳುತ್ತದೆ. ನಾವು ಈ ಐಒಟಿ ಶಕ್ತಗೊಂಡ ಲಿಫ್ಟ್‌ಗಳನ್ನು ರೈಲ್ವೆ ನಿಲ್ದಾಣಗಳಿಗೆ ಒದಗಿಸಬಹುದು ”ಎಂದು ಜಾನ್ಸನ್ ಲಿಫ್ಟ್‌ಗಳ ನಿರ್ದೇಶಕ ಯೋಹನ್ ಕೆ ಜಾನ್ ಹೇಳಿದರು.
ಆಗಸ್ಟ್ 3, 4ರಂದು ಮೆಟ್ರೋ ಸೇವೆ ವ್ಯತ್ಯಯ
ಮೆಟ್ರೋ ನಿರ್ವಹಣೆ ಕಾರ್ಯಗಳಿಗಾಗಿ ಆಗಸ್ಟ್ 3 ಮತ್ತು 4 ರಂದು ಮೆಟ್ರೊ ಸೇವೆಗಳನ್ನು ಪಡೆಯಲು ಸಾಧ್ಯವಾಗದ ಪ್ರಯಾಣಿಕರ ಬೇಡಿಕೆ ಈಡೇರಿಸಲು ಬಿಎಂಟಿಸಿ ಬೈಯಪ್ಪನಹಳ್ಳಿಯಿಂದ ಎಂಜಿ ರೋಡ್ ಮೆಟ್ರೋ ನಿಲ್ದಾಣಗಳಿಗೆ ಹೆಚ್ಚುವರಿ ಬಸ್ ಸೇವೆಗಳನ್ನು ನಿರ್ವಹಿಸಲು ಯೋಜಿಸಿದೆ. ಆ. ೨ರ ರಾತ್ರಿ  9.30 ರಿಂದ ಈ ವಿಭಾಗದಲ್ಲಿ ರೈಲುಗಳು ಲಭ್ಯವಿರುವುದಿಲ್ಲ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com